Advertisement

ಮಸೀದಿಯಲ್ಲಿ ಸ್ಫೋಟ: 27 ಸಾವು

06:00 AM Nov 24, 2018 | Team Udayavani |

ಕಾಬೂಲ್‌: ಅಫ್ಘಾನಿಸ್ತಾನದ ಖೋಸ್ಟ್‌ ಪ್ರಾಂತ್ಯದಲ್ಲಿನ ಸೇನಾ ನೆಲೆಯೊಳಗಿನ ಮಸೀದಿಯಲ್ಲಿ ಶುಕ್ರವಾರ ಉಗ್ರರು ಬಾಂಬ್‌ ಸ್ಫೋಟ ನಡೆಸಿದ್ದು, ಕನಿಷ್ಠ 27 ಮಂದಿ ಮೃತಪಟ್ಟಿದ್ದಾರೆ. ಮೃತರೆಲ್ಲರೂ ಆಫ್ಘಾನ್‌ ಯೋಧರಾಗಿದ್ದು, 57 ಮಂದಿ ಸೈನಿಕರು ಗಾಯಗೊಂಡಿದ್ದಾರೆ. ಇದು ಹಖನಿ ನಂಟಿರುವ ತಾಲಿಬಾನ್‌ ಉಗ್ರರ ಬಾಹುಳ್ಯವಿರುವ ಪ್ರದೇಶವಾಗಿದೆ. ಆದರೆ ಯಾವುದೇ ಸಂಘಟನೆಯೂ ಕೃತ್ಯ ಹೊಣೆ ಹೊತ್ತುಕೊಂಡಿಲ್ಲ ಎಂದು ಸೇನೆ ತಿಳಿಸಿದೆ.

Advertisement

ಅಲ್ಲದೆ, ಇಲ್ಲಿ ನಡೆದಿದ್ದು ಆತ್ಮಾಹುತಿ ದಾಳಿಯೋ ಅಥವಾ ಸುಧಾರಿತ ಸ್ಫೋಟಕಗಳನ್ನು ಇಟ್ಟು ಈ ಕೃತ್ಯ ಎಸಗಲಾಯಿತೋ ಎಂಬುದೂ ಇನ್ನೂ ಗೊತ್ತಾಗಿಲ್ಲ. ಈ ಹಿಂದೆ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆದಾಗೆಲ್ಲ ತಾಲಿಬಾನ್‌ ಉಗ್ರರು, ತಾವು ನಡೆಸಿದ ದಾಳಿಯಲ್ಲ ಎಂದು ಹೇಳುತ್ತಿದ್ದರು. ಆದರೆ, ಆಫ‌^ನ್‌ನಲ್ಲಿ ಸೇನೆ ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿ ನಿರಂತರ ದಾಳಿಯನ್ನು ತಾಲಿಬಾನ್‌ ನಡೆಸುತ್ತಾ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next