Advertisement
ಮಂಗಳವಾರದಿಂದ ( ಏಪ್ರಿಲ್ 14) ಭಾರತದಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕಲ್ ಸ್ಕೂಟರ್ ನ ಮರು ಬುಕ್ಕಿಂಗ್ ಆರಂಭ ಮಾಡಿದೆ. 2000 ರೂ ಕೊಟ್ಟು ಬುಕ್ಕಿಂಗ್ ಮಾಡಬಹುದು. ಒಂದು ವೇಳೆ ಕ್ಯಾನ್ಸಲ್ ಮಾಡಿದರೆ, 1000 ರೂ. ವಾಪಸ್ಸು ನೀಡಲಾಗುತ್ತದೆ. ಬಜಾಜ್ ಚೇತಕ್ ಸ್ಕೂಟರ್‌ನ ಬೆಲೆ 1.15 ಲಕ್ಷ ರೂ ಇದ್ದು, ಎರಡು ವಿಧದಲ್ಲಿ ಲಭ್ಯವಿದೆ. ಬಜಾಜ್ ಚೇತಕ್ ಟಿವಿಎಸ್ ಐಕ್ಯೂಬ್, ಅಥರ್ 450 ಎಕ್ಸ್, ಒಕಿನಾವಾ ಮತ್ತು ಹೀರೋ ಎಲೆಕ್ಟ್ರಿಕ್ ಕೊಡುಗೆಗಳನ್ನು ಮೀರಿಸುವಂತಿದೆ.
Related Articles
Advertisement
95 ಕಿ.ಮೀ ಮೈಲೇಜ್ :
ಈ ಸ್ಕೂಟರ್ ದೀರ್ಘ ಮೈಲೇಜ್ ನೀಡುತ್ತದೆ. ಈ ಎಲೆಕ್ಟ್ರಿಕಲ್ ವಾಹನದಲ್ಲಿ ಲಿಥಿಯಂ-ಐಯಾನ್ ಬ್ಯಾಟರಿ ಇದ್ದು, ಎಕೋ ಮೋಡ್‌ನಲ್ಲಿ 95 ಕಿ.ಮೀ ಮತ್ತು 85 ಕಿ.ಮೀ ಸ್ಪೋರ್ಟ್ಸ್ ಮೋಡ್‌ನಲ್ಲಿ ಓಡಿಸಬಹುದು. 70,000 ಕಿ.ಮೀವರೆಗೂ ಬ್ಯಾಟರಿ ಬ್ಯಾಕ್ ಅಪ್ ಇದ್ದು, 5 ಗಂಟೆ ಚಾರ್ಜ್ ಮಾಡಿದರೆ ಸಾಕು. ಮೂರು ವರ್ಷ ಅಥವಾ 50,000 ಕಿ.ಮೀ ಓಡಾಟಕ್ಕೆ ವಾರಂಟಿ ನೀಡಲಾಗುತ್ತದೆ.