Advertisement
ರೈಲ್ವೆ, ವಿಮಾನ ಟಿಕೆಟ್ ಬುಕಿಂಗ್ ಮಾಡಿಕೊಳ್ಳುತ್ತಿರುವುದರಿಂದ ಕೇಂದ್ರ ಸರ್ಕಾರ 21 ದಿನಗಳ ನಂತರ ಲಾಕ್ ಡೌನ್ ಮತ್ತೆ ಮುಂದುವರಿಸುವುದಿಲ್ಲ ಎಂಬುದರ ಸ್ಪಷ್ಟ ಸೂಚನೆಯಾಗಿದೆ ಎಂದು ವರದಿ ಹೇಳಿದೆ. ಏಪ್ರಿಲ್ 15ರಿಂದ ಪ್ರಯಾಣಿಕರ ಸೀಟುಗಳನ್ನು ಕಾಯ್ದಿರಿಸಿಕೊಳ್ಳಲು ಭಾರತೀಯ ರೈಲ್ವೆ ಇಲಾಖೆ ಆರಂಭಿಸಿದೆ. ಏಪ್ರಿಲ್ 15ರಿಂದ ದೇಶಾದ್ಯಂತ ಸಂಚರಿಲು ಅನುಕೂಲವಾಗಲಿದೆ ಎಂದು ವರದಿ ವಿವರಿಸಿದೆ.
Related Articles
ರೈಲ್ವೆ ಇಲಾಖೆ ಸ್ಪಷ್ಟನೆ:
ಕೆಲವು ಮಾಧ್ಯಮಗಳಲ್ಲಿ ಈಗಾಗಲೇ ಏಪ್ರಿಲ್ 14ರ ಲಾಕ್ ಡೌನ್ ಮುಗಿದ ಬಳಿಕ ಏಪ್ರಿಲ್ 15ರಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ ಆರಂಭಿಸಿದೆ ಎಂದು ವರದಿ ಮಾಡಿದೆ. ಆದರೆ ಇದು ತಪ್ಪು ಗ್ರಹಿಕೆ ಎಂದು ಭಾರತೀಯ ರೈಲ್ವೆ ಇಲಾಖೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಗೆ 120 ದಿನಗಳ ಕಾಲಾವಧಿ ಇರುತ್ತದೆ. ಹೀಗಾಗಿ ಏಪ್ರಿಲ್ 15ರಂದು ಟಿಕೆಟ್ ಬುಕ್ಕಿಂಗ್ ಆರಂಭಿಸಿರುವುದು ಲಾಕ್ ಡೌನ್ ಘೋಷಿಸುವ ಮೊದಲಿನ ಸಮಯದ್ದಾಗಿದೆ ಎಂದು ತಿಳಿಸಿದೆ.
Advertisement
ಲಾಕ್ ಡೌನ್ ಸಮಯದಲ್ಲಿ ಯಾರು ಟಿಕೆಟ್ ಬುಕ್ಕಿಂಗ್ ಮಾಡಿದ್ದಾರೋ ಅವರಿಗೆ ರಿಫಂಡ್(ಹಣ ಹಿಂತಿರುಗಿಸುವ) ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಅನ್ನು ನಾವು ಯಾವತ್ತೂ ನಿಲ್ಲಿಸಿಲ್ಲ. ಇದು ಯಾವುದೇ ಹೊಸ ಘೋಷಣೆಗೆ ಸಂಬಂಧಿಸಿದ್ದಲ್ಲ ಎಂದು ರೈಲ್ವೆ ಇಲಾಖೆ ಹೇಳಿದೆ.