Advertisement

ಈಗ ತತ್ಕಾಲ್‌ ಟಿಕೆಟ್‌ ಬುಕ್ಕಿಂಗ್‌ ಮೊದಲು; IRCTCಗೆ ಹಣ ಪಾವತಿ ಅನಂತರ

11:42 AM Aug 03, 2017 | |

ಹೊಸದಿಲ್ಲಿ : ಕೊನೇ ಕ್ಷಣದಲ್ಲಿ ರೈಲು ಟಿಕೆಟ್‌ ಬುಕ್‌ ಮಾಡುವುದು ಈಗ ಇನ್ನೂ ಸುಲಭವಾಗಿದೆ. ಕೊನೇ ಕ್ಷಣದ ರೈಲು ಪ್ರಯಾಣಿಕರು ಈಗಿನ್ನು ರೈಲ್ವೇ ಕೇಟರಿಂಗ್‌ ಮತ್ತು  ಟೂರಿಸಂ ಕಾರ್ಪೊರೇಶನ್‌ (IRCTC) ವೆಬ್‌ಸೈಟಿನಲ್ಲಿ ತತ್ಕಾಲ್‌ ಕೋಟಾ ದಡಿ ಟಿಕೆಟ್‌ ಬುಕ್‌ ಮಾಡಿ ಹಣವನ್ನು ಅನಂತರ ಪಾವತಿಸಬಹುದಾಗಿದೆ. 

Advertisement

ಈ ತನಕ ಈ ಸೇವೆಯು ಜನರಲ್‌ ರಿಸರ್ವೇಶನ್‌ಗೆ ಮಾತ್ರವೇ ಲಭ್ಯವಿತ್ತು. ಈ ವರೆಗೆ IRCTC ವೆಬ್‌ಸೈಟ್‌, ಟಿಕೆಟ್‌ ದೃಢೀಕರಣ ಮಾಡುವ ಮುನ್ನ ಪ್ರಯಾಣಿಕರು ತತ್ಕಾಲ್‌ ಟಿಕೆಟನ್ನು  ಮೊದಲು ಆನ್‌ಲೈನ್‌ ಪೇಮೆಂಟ್‌ ಗೇಟ್‌ವೇ ಗಳ ಮೂಲಕ ಬುಕ್‌ ಮಾಡಬೇಕಾಗಿತ್ತು. 

IRCTC ಬಳಕೆದಾರರು ಈಗಿನ್ನು ತತ್ಕಾಲ್‌ ಟಿಕೆಟ್‌ಗಳನ್ನು ನಗದು, ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿಸಿ ಆ ಟಿಕೆಟ್‌ಗಳು ತಮ್ಮ ಮನೆ ಬಾಗಿಲಿಗೇ ಡೆಲಿವರಿ ಮಾಡಿಸಿಕೊಳ್ಳುವ ಸೇವೆಯನ್ನು ಪಡೆಯಬಹುದಾಗಿದೆ ಎಂದು IRCTC ಪಾವತಿ ಪೂರೈಕೆದಾರ ಆ್ಯಂಡ್ಯುರಿಲ್‌ ಟೆಕ್ನಾಲಜೀಸ್‌ ಹೇಳಿದೆ. 

ಈ ಹೊಸ ಸೌಕರ್ಯದಿಂದಾಗಿ ಈ ಹಿಂದೆ ಆನ್‌ಲೈನ್‌ನಲ್ಲಿ ಸಾಮಾನ್ಯವಾಗಿದ್ದ “ವಹಿವಾಟು ವೈಫ‌ಲ್ಯ’ವನ್ನು ನಿವಾರಿಸುವುದಲ್ಲದೆ ಟಿಕೆಟ್‌ ಹಣ ಬಳಕೆದಾರರ ಖಾತೆಗೆ ಡೆಬಿಟ್‌ ಆಗಿಯೂ ಟಿಕೆಟ್‌ ಜಾರಿಯಾಗದ (ಬಹುಬಗೆಯ ಕಾರಣಗಳಿಂದ) ಪರಿಸ್ಥಿತಿಯನ್ನು ತಪ್ಪಿಸುತ್ತದೆ. ಈಗ ಹಣ ಮರುಪಾವತಿಯ ಅವಧಿಯು ಏಳದಿಂದ ಹದಿನೈದು ದಿನಗಳದ್ದಾಗಿರುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next