Advertisement

ತಕಳಿ ಶಿವಶಂಕರ ಪಿಳ್ಳೆಯವರ ಮಹಾಕಾದಂಬರಿ ‘ಕಯರ್’ ನ ಕನ್ನಡ ಅನುವಾದ ‘ಹಗ್ಗ’

12:24 PM Mar 28, 2021 | Team Udayavani |

ಚರಿತ್ರೆಯನ್ನು ಓದುವುದು ಒಂದು ಯಾಂತ್ರಿಕ ಕ್ರಿಯೆ ಆಗಿರಬಹುದು. ಆದರೆ ಚರಿತ್ರೆಯನ್ನು ಅನುಭವಿಸುವುದು ಹಾಗಲ್ಲ. ಅನುಭವಿಸುವಾಗ ಅದು ನಮ್ಮನ್ನು ಅದರೊಳಗೆ ಜೀವಂತವಾಗಿ ಸಂಚಾರ ಮಾಡಿಸುತ್ತದೆ.  ಪ್ರತಿಯೊಂದು ಕಾಲಘಟ್ಟದ ವಾಸ್ತವ ಸತ್ಯದ ಸಾಕ್ಷಿಗಳಾಗಿ ಸೃಜನಶೀಲ ರಚನೆಗಳು ಇಂಥ ಸಂಚಾರಕ್ಕೆ ನಮಗೆ ಶಕ್ತಿ ನೀಡುವ ಸಾಧನಗಳಾಗುತ್ತವೆ. ಒಂದು ಸೃಜನಶೀಲ ಕೃತಿಯಲ್ಲಿ ಪ್ರತಿಯೊಂದು ಕಥಾಪಾತ್ರವೂ ಒಂದೊಮದು ಚಾರಿತ್ರಿಕ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸುವುದ ಹೇಗೆ ಎಂಬುದನ್ನು ಬಹಳ ತನ್ಮಯತೆಯಿಂದ ಪ್ರಸ್ತುತ ಪಡಿಸುವ ತಕಳಿ ಶಿವಶಂಕರ ಪಿಳ್ಳೆಯವರ ‘ಕಯರ್’ ಈ ರೀತಿಯ ರಚನೆಗಳಲ್ಲಿ ಮೊದಲನೆಯದಾಗಿ ನಿಲ್ಲುತ್ತದೆ.  ಭೌಗೋಳಿಕವಾಗಿ  ಒಂದಾಗುತ್ತಿದ್ದಂತೆ ಪೂರ್ತಿ ಭಿನ್ನವಾದ ಸಾಂಸ್ಕೃತಿಕ ಪರಂಪರೆಗಳಿಂದಾಗಿ ಕೇರಳದ ಬೇರೆ ಬೇರೆ ಪ್ರದೇಶಗಳಿಗೆ ಹಕ್ಕು ಅನುಭವಿಸಲು ಸಿಗುತ್ತದೆ.

Advertisement

ಅದು ವಳ್ಳುವನಾಡಿನ ಚರಿತ್ರೆಯಲ್ಲ, ಬದಲಾಗಿ ವೇನಾಡಿನದ್ದು.  ಕೊಚ್ಚಿರಾಜ್ಯದ ಪರಂಪರೆಯಲ್ಲಿ ನಾಂಜಿನಾಡಾಗಿ ಹೊಕ್ಕುಳಬಳ್ಳಿಯ ಬಂಧವನ್ನು  ಜತನದಿಮದ ಕಾಪಿಟ್ಟುಕೊಳ್ಳುವ ತಿರುವಿದಾಂಕೂರಿನ ದಕ್ಷಿಣ ಭಾಗಗಳ ಎಳೆಗಳನ್ನು ಸೇರಿಸಲು ಸಾಧ್ಯವಿಲ್ಲ. ಆದರೆ ಈ ಭಿನ್ನತೆಗಳನ್ನೆಲ್ಲ ಯಶಸ್ವಿಯಾಗಿ ಪ್ರತಿಫಲಿಸುವ ಕಾದಂಬರಿಗಳು ಮಲೆಯಾಳದ ಸಾಮಾನ್ಯ ಸಾಹಿತ್ಯ ಸಂಸ್ಕೃತಿಯ ¨ಬದುಕನ್ನು ಚಿತ್ರಿಸುವ ಮೂಲಕ ಅಲಿನಸೂಕ್ಷ್ಮ ರಾಜಕೀಯವನ್ನೂ ಸಾಮಾಜಿಕ ಪರಿವರ್ತನೆಗಳನ್ನೂ  ಆಗುತ್ತದೆ.  ಆದ್ದರಿಮದಲೇ, ತಿರುವಿದಾಂಕೂರಿನ, ಮುಖ್ಯವಾಗಿ ಮಧ್ಯ ತಿರುವಿದಾಂಕೂರಿನ ಚರಿತ್ರೆಯನ್ನು ಗುರುತಿಸುವ ‘ಕಯರ್’  ವಳ್ಳುವನಾಡಿನಲ್ಲೂ ಆಸ್ವಾದಿಸಲ್ಪಡುವುದಕ್ಕೆ  ಸಾಂಸ್ಕೃತಿಕ ಭಿನ್ನತೆಗಳು ಅಡ್ಡಿ ಪಡಿಸುವುದಿಲ್ಲ.  1935ರಲ್ಲಿ ‘ತ್ಯಾಗತ್ತಿನು ಪ್ರತಿಫಲಂ’ ಕಾದಂಬರಯ ಮೂಲಕ  ಮಲೆಯಾಳ ಸಾಹಿತ್ಯವನ್ನು ಪ್ರವೇಶಿಸಿದ  ತಕಳಿ,  ತಮ್ಮ ಜತೆಗೆ ಬದುಕುವ ಜನರ  ಜೀವನಕ್ರಮಗಳನ್ನೂ ಅವರು ಬದುಕುವ ಪರಿಯನ್ನೂ ಸಾಮಾಜಿಕ ಪರಿವರ್ತನೆಗಳನ್ನೂ ತಮ್ಮ ಕಾದಂಬರಿಗಳಲ್ಲಿ ಚಿತ್ರಿಸುವ ಕೆಲಸ ಮಾಡಿದರು.  ಆದರೆ ‘ಕಯರ್’ ಅವರ ಇತರ ಎಲ್ಲ ಕೃತಿಗಳಿಗಿಂತ ಬೃಹತ್ತಾಗಿಯೂ ಐತಿಹಾಸಿಕ ವಿಸ್ತಾರಗಳುಳ್ಳದ್ದಾಗಿಯೂ ಇದೆ. ಎರಡೂವರೆ ಶತಮಾನದ ರಾಜ್ಯದ ಚರಿತ್ರೆ ಇದರಲ್ಲಿದೆ.

ಓದಿ : ಡಿಕೆಶಿ ಮೇಲೆ ಗೂಬೆ ಕೂರಿಸುವ ಕೆಲಸವಾಗುತ್ತಿದೆ, ಆರೋಪಿಗೆ ಎಸ್ ಐಟಿ ರಕ್ಷಣೆ: ಮಿಥುನ್ ರೈ

ಭೂಮಿಯನ್ನು ಅಳೆದು ಪುನರ್ ಹಂಚಿಕೆ ಮಾಡುವ ಸರಕಾರದ ಕೆಲಸದ ಉಲ್ಲೇಖದೊಂದಿಗೆ ‘ಕಯರ್’ ಕಾದಂಬರಿ ಆರಂಭವಾಗುತ್ತದೆ.  ತೆರಿಗೆ ವಸೂಲಿಗಾಗಿ ಕ್ಲಾಸಿಪ್ಪೇರ ಎಂಬ ಅಧಿಕಾರಿಬರುತ್ತಾನೆ. ಕೊಚ್ಚುಪಿಳ್ಳೆ ಎಂದು ಅವನ ಹೆಸರು.  ಕ್ಲಾಸಿಪ್ಪೇರ್ ಗೆ ಲಂಚ ತಿನ್ನಿಸಿ ಊರಿನ ಮುಂದಾಳುಗಳೆನ್ನಿಸಿದವರು ಫಲವತ್ತಾದ ಭೂಮಿಯನ್ನೆಲ್ಲ ಒಳಗೆ ಹಾಕಿಕೊಳ್ಳುತ್ತಾರೆ.  ಅಲ್ಲಿಮದ ಆರಂಬವಾಗುವ ಕಥೆ  ನಂತರ ನಡೆದ ಸ್ವಾತಂತ್ರ್ಯ ಸಮರ, ಸ್ವಾತಂತ್ರ್ಯ ಲಬ್ಧಿ, ಸಾಮಾಜಿಕ ಸುಧಾರಣೆಗಳು, ನವೋದಯ ಕಾಲ, ಪ್ರಜಾಪ್ರಭುತ್ವ, ಕಮ್ಯೂನಿಸ್ಟ್ ಪಾರ್ಟಿ ಹಾಗೂ ಕಾರ್ಮಿಕ ಚಳುವಳಿಗಳ ಬೆಳವಣಿಗೆಗಳು-ಹೀಗೆ ಇತಿಹಾಸದ ಘಟ್ಟಗಳನ್ನು ದಾಟುತ್ತ ಹೋಗುತ್ತದೆ.  ಕೊನೆಗೆ ನಕ್ಸಲ್ ಚಳುವಳಿ ಹುಟ್ಟಿಕೊಳ್ಳುವುದರೊಂದಿಗೆ ಮುಕ್ತಾಯವಾಗುತ್ತದೆ.

‘ಕಯರ್’ ಕಾದಂಬರಿಯ ಮುಖ್ಯ ಕಥಾಪಾತ್ರ ಯಾವುದು?  ಆಗ ಪ್ರಚಲಿತದಲ್ಲಿದ್ದ ಇತರ ಸಾಮಾನ್ಯ ಕಾದಂಬರಿಗಳಲ್ಲಿದ್ದಂತೆ  ಇಲ್ಲಿ  ತಕಳಿಯವರು ಒಬ್ಬ ವ್ಯಕ್ತಿಯ,  ಒಂದು ಕುಟುಂಬದ ಅಥವಾ ಒಂದು ತಲೆಮಾರಿನ ಕತೆಯನ್ನು ಹೇಳುತ್ತಿಲ್ಲ.  ಬದಲಾಗಿ ಮನುಷ್ಯ ಸ್ವಭಾವ-ಸಂಬಂಧಗಳ ವಿಭಿನ್ನ ಮುಖಗಳು, ಬೇರೆ ಬೇರೆ ಕಾಲಘಟ್ಟಗಳಲ್ಲಿ ಬದಲಾಗುವ ಸಾಮಾಜಿಕ ನಂಬಿಕೆಗಳು ಮತ್ತು ಪದ್ಧತಿಗಳು, ಆಗ ಸಂಭವಿಸಿದ ನೂರಾರು ಘಟನೆಗಳು-ಎಲ್ಲವನ್ನೂ ಒಂದು ಕ್ಯಾನ್ ವಾಸ್ ನೊಳಗೆ ಸೇರಿಸಿ ಬರೆಯುತ್ತಾರೆ.  ಮುಖ್ಯವಾಗಿ ಭೂಮಿ ಮತ್ತು ಅದರ ಮೇಲಿನ ಹಕ್ಕುಗಳು ಬುಡಮೇಲಾಗುವ  ಕುಟ್ಟನಾಡಿನ ಚರಿತ್ರೆಯನ್ನು ತೋರಿಸುವುದು ಅವರ ಉದ್ದೇಶವಾಗಿದೆ.  ಕಾದಂಬರಿಯೊಳಗೆ ತಕಳಿ ಒಂದೆಡೆ ಹೀಗೆ ಹೇಳುತ್ತಾರೆ : ಮನುಷ್ಯನ ಚರಿತ್ರೆಯೇ ಭೂಮಿಯ ಬಗೆಗಿನ ದಾಹ ಮತ್ತು ಅವನ ಅತಿಯಾಸೆಯ ಚರಿತ್ರೆ.  ಸಾಮ್ರಾಜಕ್ಯಗಳುಂಟಾದದ್ದು  ಭೂಮಿಯ ಮೇಲಿನ ದಾಹದಿಮದಲೇ. ಸಾಮ್ರಾಜ್ಯಗಳು ಪತನ ಹೊಂದಿದ್ದೂ ಬೇರಾವುದರಿಂದಲೂ ಅಲ್ಲ. ಮನುಷ್ಯನ ಪರಿಣಾಮಕ್ಕೆ ಅಡಿಪಾಯವೂ ಭೂಮಿಯ ಮೇಲಿನ ದಾಹವೇ.; ಹೀಗೆ ಹೇಳಿದ ನಂತರ ತಕಳೀಯವರು ಸಂಪೂರ್ಣ ದಾರ್ಶನಿಕವಾದ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ : ‘ಭೂಮಿಯನ್ನು ಹೋಳಾಗಿಸಿದರೆ ನ್ಯಾಯ ನೀತಿಗಳ ಪಾಲನೆಯಾಗುತ್ತದೆಯೆ? ಸಹೋದರತ್ವದ ಭಾವನೆ ಹುಟ್ಟಿಕೊಂಡೀತೆ?ಸಮಸ್ಯೆಗಳು ಪರಿಹಾರಗೊಂಡಾವೆ?

Advertisement

ಮರುಮಕ್ಕತ್ತಾಯ( ಅಳಿಯ ಕಟ್ಟು ) ವ್ಯವಸ್ಥೆಯಲ್ಲಿ  ಸ್ತ್ರೀಯರು ಪ್ರಬಲರಾಗಿದ್ದರು  ಮತ್ತುಲಾ ಕಾಲ  ಸ್ತ್ರೀವಾದಿಗಳ ಸ್ವರ್ಗವಾಗಿತ್ತು ಎಂಬ ಒಂದು ವಾದವಿದೆ.  ಆದರೆ ‘ಕಯರ್’ಓದುವಾಗ  ನಮಗೆ ಹಾಗನ್ನಿಸುವುದಿಲ್ಲ. ಸ್ಪಷ್ಟವಾದ ಒಡೆತನದ ಹಕ್ಕಿಲ್ಲದೆ ಇದ್ದ ಒಮದು ಪ್ರದೇಶವು ಕಾಲಕ್ರಮೇಣ ಪರಿಣಮಿಸಿ ಬರುವುದನ್ನೂ, ಸಾಮಾಜಿಕ ಸಂಬಂಧಗಳು ಬದಲಾಗುತ್ತ ಹೋಗುವುದನ್ನೂ ನಾವು ಈ ಕಾದಂಬರಿಯಲ್ಲಿ ನೋಡುತ್ತೇವೆ.  ಸಾಮಾಜಿಕ  ಸುಧಾರಣಾವಾದಿ ಚಳುವಳಿಗಳನ್ನು ಸ್ಪರ್ಶಿಸಿ ಇಳಿಯುತ್ತೇವೆ.  ಆದರೆ ಅಲಿಯೂ ನಾಡಿನಲ್ಲಾಗುವ ಪರಿವರ್ತನೆಗಳನ್ನು ಅಂಗೀಕರಿಸಲು ಹಿಂದೆ ಮುಂದೆ ನೋಡುವ ದೊಡ್ಡದೊಂದು ವರ್ಗವಿದೆ. ಉದಾಹರಣೆಗೆ- ಕುಂಜನ್ ನಾಯರ್ ಎಂಬ ಒಬ್ಬ ಗಾಂಧಿವಾದಿ, ಬಿಲ್ಲವ ಮುಂದಾಳುವಾದ  ಕೊಚ್ಚುರಾಮನ್ ವೈದ್ಯರನ್ನು  ಹೋಗಿ ಕಾಣುವ ಒಂದು ಸನ್ನಿವೇಶವಿದೆ. ದಲಿತರಾದಿಯಾಗಿ ಎಲ್ಲಾ ಜಾತಿಯವರಿಗೂ ಒಟ್ಟಿಗೆ ಕಲಿಯಲು ಅವಕಾಶ ಮಾಡಿ ಕೊಡುವ ಒಂದು ಶಾಲೆ ನಿರ್ಮಾಣವಾಗಬೇಕು  ಎಂಬುದು ಅವರ ಬೇಡಿಕೆ. ‘ಸ್ವಚ್ಛತೆ, ಶುಚಿತ್ವಗಳಿಲ್ಲದ  ಇವರನ್ನು ನನ್ನ ಸೂರಿನಡಿಗೆ ಬರಲು ನಾನು ಬಿಡಲಾರೆ.  ಶಾಲೆಯೆಂದರೆ ಸರಸ್ವತಿಯ ಕ್ಷೇತ್ರ ‘ ಎಂಬ ವೈದ್ಯರ ಉತ್ತರದಿಂದ ಕುಞರಾಮನ್ ನಾಯರ್ ದಂಗಾಗುತ್ತಾರೆ. ದಲಿತ ವಿಭಾಗಕ್ಕೆ ಸೇರಿದ ಕೃಷಿ ಕೂಲಿಕಾರರ ದುರಿತಮಯ ಬದುಕನ್ನು ತಕಳಿಯವರು ಕಾದಂಬರಿಯಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾರೆ. ಅಲ್ಲಿಯೂ ವಿಶೇಷವಾಗಿ ದಲಿತ ಸ್ತ್ರೀಯರ ಬದುಕು. ಮೇಲುವರ್ಗದ ಮನೆಗಳಲ್ಲಿ  ಸ್ತ್ರೀಯರ ಶೋಷಣೆ ನಡೆದರೆ ತುಲನಾತ್ಮಕವಾಗಿ ದಲಿತ ಸ್ತ್ರೀಯರು ಸಮಾನತೆಯ ಆನಂದವನ್ನು ತಮ್ಮ ತಮ್ಮ ಕುಟುಂಬಗಳ ಮಟ್ಟದಲ್ಲಿ ಅನುಭವಿಸುತ್ತಿದ್ದರು ಎಂಬಂತಹ ಒಂದು ಚಿತ್ರಣ ಇಲ್ಲಿದೆ. ಉದಾಹರಣೆಗೆ ಪಾಪ್ಪ ಎಂಬ ಒಬ್ಬ ದಲಿತ ಹೆಣ್ಣು. ಸ್ವಂತ ನಿಲುವು ಹಾಗೂ ಅದ್ಭುತ ಧೈರ್ಯಗಳಿದ್ದ ದಲಿತ ಸ್ತ್ರೀಯರ ಪ್ರತಿನಿಧಿ ಆಕೆ.  ತಾನು ವಿವಾಹವಾದ ಪುರುಷನನ್ನು ಇಷ್ಟವಾಗದಿದ್ದ ಕಾರಣ ಆಕೆ ಪಿತೃಗೃಹಕ್ಕೆ ಮರಳಿ ಬರಲು ಹೆದರುವುದಿಲ್ಲ. ಮುಂದೆ ಆಕೆ ಕಾರ್ಮಿಕ ನಾಯಕನಾದ ಸುರೇಂದ್ರನನ್ನು ಪ್ರೇಮಿಸುತ್ತಾಳೆ. ಅವಳು ರಾಜಕೀಯದಲ್ಲೂ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲಳು. ಆ ವಿಚಾರದಲ್ಲಿ ಸುರೇಂದ್ರನ ಯಾವುದೇ ಅಭಿಪ್ರಾಯಕ್ಕೂ ಆಕೆ ಕಾಯುವುದಿಲ್ಲ.

ಓದಿ : ಡಾ| ಸಂಧ್ಯಾ ಎಸ್‌. ಪೈ ಸಹಿತ ಐವರಿಗೆ ಮಾಸ್ತಿ ಪ್ರಶಸ್ತಿ ಪ್ರದಾನ

‘ಕಯರ್’ ಕಾದಂಬರಿಯಲ್ಲಿ ತಿರುವಿದಾಂಕೂರಿನ ¨ಭಾಷೆಯನ್ನು ಉಳಿಸಿಕೊಳ್ಳಬೇಕೆಂಬ ಕಾಳಜಿಯನ್ನೂ ಕಾಣಬಹುದು. ‘ಕಯರ್’ ಒಂದು ರಾಜಕೀಯ ಕಾದಂಬರಿಯಲ್ಲ. ಐತಿಹಾಸಿಕ ಕಾದಂಬರಿಯೂ ಇಲ್ಲ. ಯಥಾಸ್ಥಿತಿಯನ್ನು ಚಿತ್ರಿಸುವ …. ಆದರೆ ಇದರಲ್ಲಿ ಚರಿತ್ರೆ-ರಾಜಕೀಯಗಳೆರಡೂ ಯಥೇಚ್ಛವಾಗಿ ಇವೆ. 1970ರ ದಶಕದ ವರೆಗಿನ ಮಧ್ಯ ತಿರುವಿದಾಂಕೂರಿನ ಬಗ್ಗೆ ತಿಳಿಯುವ ಆಸಕ್ತಿಯಿದ್ದವರು ಖಂಡಿತಾ ‘ಕಯರ್’ ಓದಬೇಕು. ಇಂಥ ಬೃಹತ್ ಕಾದಂಬರಿಯನ್ನು ಸುಂದರ ಕನ್ನಡದಲ್ಲಿ ಅನುವಾದಿಸಿದ್ದಾರೆ ಕೆ.ಕೆ.ನಾಯರ್ ಮತ್ತು ಡಾ.ಅಶೋಕ ಕುಮಾರ್.

ಡಾ. ಪಾರ್ವತಿ ಜಿ. ಐತಾಳ್

ಹಿರಿಯ ಸಾಹಿತಿಗಳು, ಅನುವಾದಕರು

 

ಅನುವಾದ : ಕೆ.ಕೆ.ನಾಯರ್ ಮತ್ತು ಡಾ.ಅಶೋಕ ಕುಮಾರ್

ಪ್ರಕಟಣೆ : ಕೇಂದ್ರ ಸಾಹಿತ್ಯ ಅಕಾಡೆಮಿ    

ಓದಿ : ಕನಕಪುರಕ್ಕಾದರೂ ಬರಲಿ ಬೆಂಗಳೂರಿಗಾದರೂ ಬರಲಿ ಬಂದಾಗ ನೋಡೋಣ: ಡಿ ಕೆ ಸುರೇಶ್

Advertisement

Udayavani is now on Telegram. Click here to join our channel and stay updated with the latest news.

Next