Advertisement
“ಒನ್ ಅರೆಂಜ್ಡ್ ಮ್ಯಾರೇಜ್ ಮರ್ಡರ್’ ಲೇಖಕ ಚೇತನ್ ಭಗತ್‌ರ ಕಾದಂಬರಿ. ಈ ಕಾದಂಬರಿಯು ಹೊಸದಿಲ್ಲಿಯ ಒಂದು ನಿರ್ದಿಷ್ಟ ವರ್ಗದ ಸೂಕ್ಷ್ಮತೆಗಳನ್ನು ಸೆರೆ ಹಿಡಿಯುವಲ್ಲಿ ಸಮರ್ಥವಾಗಿದೆ. ಪ್ರಸಿದ್ಧ ತನಿಖಾ ಸಂಸ್ಥೆಯಲ್ಲಿ ಕಾರ್ಯ ಪ್ರವೃತ್ತರಾಗಿರುವ ಕೇಶವ ಹಾಗೂ ಸೌರಭ್ ಎಂಬ ಇಬ್ಬರು ಗೆಳೆಯರು ಕೊಲೆಗಾರನನ್ನು ಹುಡುಕುವ ತನಿಖೆಯ ಸುತ್ತ ಈ ಕಾದಂಬರಿ ಹೆಣೆದಿದೆ. ಪ್ರೇರಣಾ ಎಂಬಾಕೆ ಸೌರಭನ ಪ್ರಿಯ ತಮೆ. ಶ್ರೀಮಂತರಾದ ಮಲ್ಹೋತ್ರಾ ಕುಟುಂಬದ ಪ್ರೀತಿಯ ಪುತ್ರಿ. ಅತ್ಯಂತ ಚೆಲುವೆ ಹಾಗೂ ಜಾಣೆಯೂ ಆಗಿದ್ದಳು.
Related Articles
Advertisement
ಹರೆಯದ ಪ್ರಾಯದಲ್ಲಿ ಉಂಟಾಗುವ ಮಾನಸಿಕ ತುಮುಲ ಈ ಕಾದಂಬರಿಯ ಇನ್ನೊಂದು ಮುಖ್ಯ ವಿಚಾರ. ಇಲ್ಲಿ ಲೈಂಗಿಕತೆ ಎನ್ನುವುದು ಮುಚ್ಚಿಡುವ ಭಾವನೆಯಲ್ಲ. ಉಳಿದ ಭಾವನೆಯಂತೆಯೇ ಅದನ್ನು ಸಹ ಸಹಜವಾಗಿ ಕಾಣುತ್ತಾರೆ. ಭಾರತದಂತಹ ಸಾಂಸ್ಕೃತಿಕ, ಸಾಂಪ್ರದಾಯಿಕ ಹಿನ್ನೆಲೆ ಇರುವ ದೇಶದಲ್ಲಿ ಈ ರೀತಿಯ ಸಂಬಂಧ ಕಾನೂನು ರೀತಿ ಅಪರಾಧವಾಗುತ್ತದೆ. ಈ ಕಾರಣಕ್ಕಾಗಿಯೇ ಚೇತನರ ಹೆಚ್ಚಿನ ಕೃತಿಗಳು ಸಂಪ್ರದಾಯ ವಾದಿಗಳ ಮೆಚ್ಚುಗೆ ಪಡೆಯದಿರುವುದು.
ಧೂಮಪಾನ, ಮದ್ಯಪಾನ, ಮಾದಕ ವಸ್ತುವಿನ ಸೇವನೆಗೆ ಅಂಜಲಿಯಂತಹ ಹೆಣ್ಣೊಬ್ಬಳು ಬಲಿಯಾಗುವುದು ದೊಡ್ಡ ವಿಷಯವಾಗಿ ಕಾಣುವುದಿಲ್ಲ. ಆಕೆಯ ಸ್ವಭಾವದ ಬಗ್ಗೆ ಇಡೀ ಕುಟುಂಬಕ್ಕೆ ಗೊತ್ತು. ಆದರೂ ಅದನ್ನು ವಿರೋಧಿಸುವವರಿಲ್ಲ. ಇದರೆಡೆಗೆ ಬಲಿಯಾಗುವುದು ಮುಗªಳಾದ ಪ್ರೇರಣ. ಅಂಜಲಿಯ ಅಹಂಕಾರ, ಅಸೂಯೆ ,ಯಾರನ್ನು ಬಲೆಗೆ ಸೆಳೆದು ಮನವೊಲಿಸಿ ಸೋಲಿಸುವ ಗುಣ ಕೊನೆಗೆ ಆಕೆಯನ್ನೇ ಸೋಲಿಸುತ್ತದೆ.
ಈ ಕಾದಂಬರಿಯಲ್ಲಿ ತನ್ನತನದ ಉಳಿವಿಗಾಗಿ ಎರಡು ಪಾತ್ರಗಳು ಹೋರಾಡುತ್ತದೆ. ರಮೇಶ ತಾನು ಕಾಪಾಡಿಕೊಂಡು ಬಂದ ಸಂಸ್ಕೃತಿಯನ್ನು ಸಂಪ್ರದಾಯವನ್ನು ಉಳಿಸಲು ಸೆಣಸಾಡಿದರೆ ಅಂಜಲಿಯು ಅದರಿಂದ ವಿಮೋಚನೆ ಪಡೆಯಲು ಆಸೆಪಡುತ್ತಾಳೆ. ಬದುಕುವ ಮೋಹ ಇಬ್ಬರಲ್ಲೂ ಇದೆ. ಸಂಪ್ರದಾಯವಾದೀ ಮಧ್ಯಮವರ್ಗದ ಕುಟುಂಬವೊಂದು ಆಧುನಿಕತೆಗೆ ತೆರೆದುಕೊಳ್ಳಲು ಪ್ರಯತ್ನಿಸುತ್ತದೆ. ಕೆಲವೊಮ್ಮೆ ಹೆತ್ತವರ ನಿರ್ಧಾರ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತದೆ. ಮುಗª ಪ್ರೇಮಿಗಳನ್ನು ದೂರವಾಗಿಸುತ್ತದೆ. ಕಾದಂಬರಿಯಲ್ಲಿ ಕೊನೆಗೂ ಉಳಿಯುವುದು ಎಲ್ಲವನ್ನು ಮೀರಿ ದ ಗೆಳೆತನ ಮಾತ್ರ, ಕೇಶವ ಹಾಗೂ ಸೌರಭರ ಅನ್ಯೋನ್ಯ ಸ್ನೇಹ.
ಈ ಕಾದಂಬರಿಯಲ್ಲಿ ಹತ್ಯೆ ಎಂಬುದು ಒಂದು ನಿಮಿತ್ತ ಮಾತ್ರ. ಈ ಮೂಲಕ ಹಲವು ಸತ್ಯಗಳನ್ನು ಬಯಲಿಗೆಳೆಯುವುದೇ ಚೇತನರ ಉದ್ದೇಶ. ಇಂದು ಕಾಲ ಬದಲಾಗಿದೆ. ಸಾರ್ವಕಾಲಿಕ ಮೌಲ್ಯವನ್ನು ಸಾರುವ ಹಳೆಯ ಕಥೆ, ಕವನ ,ಕಾದಂಬರಿಗಳ ಜತೆಗೆ ಆ ಮೌಲ್ಯಗಳನ್ನು ಬಳಸಿಕೊಂಡೇ ರಚಿತವಾದ ಹೊಸ ರಚನೆಯತ್ತ ಇಂದಿನ ಯುವ ಪೀಳಿಗೆ ಆಸಕ್ತಿಯನ್ನು ತೋರುತ್ತದೆ. ಎಲ್ಲವನ್ನು ಬಿಚ್ಚು ಮನಸ್ಸಿನಿಂದ ಹೇಳುವ ಚೇತನರ ಕೃತಿಗಳು ಎಲ್ಲರಿಗೂ ಇಷ್ಟವಾಗಬೇಕೆಂದಿಲ್ಲ. ವ್ಯಕ್ತಿನಿಷ್ಠವಾಗಿ ನೋಡದೆ ವಸ್ತುನಿಷ್ಠವಾಗಿ ಗಮನಿಸಿದಾಗ ಕೃತಿಯ ಸಂಪೂರ್ಣ ಸತ್ವವನ್ನು ನಮಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತದೆ.
ಸುನೀತಾ ಮಯ್ಯ
ಕಾಸರಗೋಡು