ವಿಜಯಪುರ: ಲೇಖನಿ ಯಾವತ್ತೂಖಡ್ಗವಾಗಬಾರದು ಹಾಗೂ ಕವಿ ಸಮಾಜದ ಪ್ರೀತಿಯಾಗಬೇಕು. ಎಲ್ಲರನ್ನೂ ಒಗ್ಗೂಡಿಸುವ, ಒಂದನ್ನೊಂದು ಬೆಸೆಯುವ ಕೊಂಡಿಯಾಗಬೇಕು. ಕೃತಿಗಳ ಸಂಖ್ಯೆಗಿಂತಸಾಹಿತ್ಯದಲ್ಲಿ ಗಟ್ಟಿತನ ಮುಖ್ಯ. ಹೀಗಾಗಿ ಲೇಖನಿಸಮಾಜದ ಪ್ರೀತಿಯಾಗಲಿ ಎಂದು ಇಂಗ್ಲಿಷ್‌ಪ್ರಾಧ್ಯಾಪಕರಾದ ಸಾಹಿತಿ ಡಾ| ರಾಜಶೇಖರ ಮಠಪತಿ (ರಾಗಂ) ಅಭಿಪ್ರಾಯಪಟ್ಟರು.
ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಆವರಣದಲ್ಲಿ ನಾಗಠಾಣದ ಸೃಜನಶೀಲ ಸಂಸ್ಥೆಹಾಗೂ ವಿಜಯಪುರದ ವಚನ ಶರ ಸಂಸ್ಥೆಸಹಯೋಗದಲ್ಲಿ ಹಮ್ಮಿಕೊಂಡಿದ್ದ ಇಂಗ್ಲಿಷ್‌ಉಪನ್ಯಾಸಕ ಮುಸ್ತಾಕ್ ಮಲಘಾಣ ಅವರಪ್ರಥಮ ಕೃತಿ ಕಾವಿಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಜಗತ್ತನ್ನು ನೋಡಿ ಬದಲಾಗುತ್ತಾನೋಇಲ್ಲವೋ ಎಂಬುದು ಸಾಹಿತಿಯ ಆತ್ಮಸಾಕ್ಷಿಗೆಸೇರಿದ್ದು. ಆದರೆ ಜಗತ್ತನ್ನು ಬದಲಿಸುವ ಶಕ್ತಿ ಒಬ್ಬ ಸಾಹಿತಿಗಿದೆ ಎಂಬುದನ್ನು ಮಾತ್ರಮರೆಯಬಾರದು. ಹೀಗಾಗಿ ಎಲ್ಲ ವರ್ಗದ ಜನರು ಓದುವಂತಹ ಸಾಹಿತ್ಯ-ವಿಚಾರಗಳುಹೊರ ಹೊಮ್ಮಬೇಕು. ಉತ್ಕೃಷ್ಟವಾದಬರಹ-ಚಿಂತನೆಗಳು ಸರ್ವಕಾಲಕ್ಕೂಪ್ರಸ್ತುತವಾಗಿರುತ್ತವೆ ಎಂದು ನುಡಿದರು.
ಹಿಟ್ಟಿನಹಳ್ಳಿಯ ಫೂಲ್‌ಸಿಂಗ್ ಚವ್ಹಾಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ| ಸುನೀತಾ ಚವ್ಹಾಣ ಮಾತನಾಡಿ, ಸಾಹಿತ್ಯ ಎಂಬುದು ಸರ್ವರಿಗೂ ಒಳಿತನ್ನು ಬಯಸುತ್ತದೆ. ಸಾಹಿತ್ಯದಿಂದ ನಮ್ಮ ಸಮಾಜ, ಸುತ್ತಲಿನ ವಾತಾವರಣ ಅರಳಿಸಿ, ಬೆಳೆಸುವಂತಿರಬೇಕು. ಪ್ರಸ್ತುತ ವಿಜ್ಞಾನದ ಯುಗದಲ್ಲೂ ಈಗಿನ ತೋರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಅರಕೇರಿ ಕರ್ನಾಟಕ ಎಜ್ಯುಕೇಶನ್ ಟ್ರಸ್ಟ್‌ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ,ನಮ್ಮ ಹಿರಿಯ ಸಾಹಿತಿಗಳು ರಚಿಸಿರುವ ಶ್ರೇಷ್ಠಸಾಹಿತ್ಯ ಕೃತಿಗಳ ಅಧ್ಯಯನ ಮಾಡುವ ಮೂಲಕಇಂದಿನ ಪೀಳಿಗೆ ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯ.ಸಾಹಿತ್ಯ ಕ್ಷೇತ್ರದಲ್ಲಿ ಒಲವಿರುವ ಬಡ ಲೇಖಕರಿಗೆಆರ್ಥಿಕವಾಗಿ ಉಳ್ಳವರು ಗ್ರಂಥ ದಾಸೋಹಮಾಡಬೇಕು. ಇದಕ್ಕಾಗಿ ನಮ್ಮ ಟ್ರಸ್ಟ್ ಪೋಷಕ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಮುಸ್ತಾಕ್ ಅವರಂಥ ಯುವಕರು ಸಾಹಿತ್ಯ ಕೃಷಿಗೆಮುಂದಾಗಿರುವುದು ಅತ್ಯಂತ ಹರ್ಷದಾಯಕ ಎಂದು ನುಡಿದರು.
ಸಾನ್ನಿಧ್ಯ ವಹಿಸಿದ್ದ ಶಿವಬಸವ ಯೋಗಾಶ್ರಮದ ಶಂಭುಲಿಂಗ ಶ್ರೀಗಳುಮಾತನಾಡಿ, ಉತ್ತಮ ಸಾಹಿತ್ಯಕ್ಕೆ ಸದಾಬೆಲೆಯಿದೆ. ಶರಣರ ಸಾಹಿತ್ಯ ಕನ್ನಡ ನಾಡಿನಲ್ಲಿ ಹಲವು ಸಾಹಿತ್ಯಗಳಿಗೆ ಪ್ರೇರಕ ಶಕ್ತಿಯಾಗಿಕೆಲಸ ಮಾಡಿದೆ. ವಚನ ಸಾಹಿತ್ಯದಲ್ಲಿಬಗೆದಷ್ಟು ಸಿಗುವ ಬಂಗಾರದಂತೆ ಆಸಕ್ತಿಯುಗಹನವಾದಷ್ಟು ಉತ್ತಮ ಸಂಗತಿಗಳುನಮ್ಮೊಳಗೆ ಹೊಳೆಯುತ್ತವೆ. ಹೀಗಾಗಿ ಕವಿಗಳು ಹಾಗೂ ಲೇಖಕರು ಸದಾ ಚಿಂತನಶೀಲತೆ ಮೈಗೂಡಿಸಿಕೊಳ್ಳಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಯಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರಮುಸ್ತಾಕ್ ಮಲಘಾಣ, ರಾಜೇಂದ್ರಕುಮಾರಬಿರಾದಾರ ಮಾತನಾಡಿದರು. ಉದ್ಯಮಿಶರಣಬಸಪ್ಪ ಅರಕೇರಿ, ಪದ್ಮಶ್ರೀ ರಾಗಂಎಂ.ಎ. ಮಲಘಾಣ ನಜೀಬ್ ಅಶ್ರಫ್ ಇನಾಮದಾರ ವೇದಿಕೆಯಲ್ಲಿದ್ದರು.
ತಾಲೂಕು ಕಸಾಪ ಅಧ್ಯಕ್ಷ ಯು.ಎನ್. ಕುಂಟೋಜಿ ಪ್ರಾಸ್ತಾವಿಕ ಮಾತನಾಡಿದರು. ಸಿದ್ದನಗೌಡ ಕಾಶಿನಕುಂಟೆ ಪ್ರಾರ್ಥಿಸಿದರು. ಶರಣಗೌಡ ಪಾಟೀಲ ಸ್ವಾಗತಿಸಿದರು.
ದಾಕ್ಷಾಯಣಿ ಬಿರಾದಾರ ನಿರೂಪಿಸಿದರು. ಮನು ಪತ್ತಾರ ವಂದಿಸಿದರು.