ಸೇಡಂ: ಕವಿ, ಸಾಹಿತಿಗಳ ಸಾಹಿತ್ಯಿಕ ಕೃಷಿ ನಾಡುನುಡಿಗೆ ಅರ್ಪಿತವಾಗಲಿ ಎಂದು ಕಲ್ಯಾಣ ಕರ್ನಾಟಕಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದಅಧ್ಯಕ್ಷ ಡಾ| ಬಸವರಾಜ ಪಾಟೀಲ ಸೇಡಂ ಹೇಳಿದರು.
ಪಟ್ಟಣದ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಇತಿಹಾಸ ತಜ್ಞ ಡಾ| ಬಿರಾದಾರ ಶ್ರೀಶೈಲ ಅವರ ನೃಪಶೈಲ ಕೃತಿ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.
ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಹಿತ್ಯದ ಮೂಲಕವೂ ಸಾಧ್ಯವಿದೆ. ಸಾಹಿತಿಗಳು ತಮ್ಮ ಅಕ್ಷರ ಸೇವೆ ಮುಂದುವರಿಸಿಕೊಂಡು, ಯುವ ಸಮೂಹಕ್ಕೆಪುಸ್ತಕಗಳ ಪರಿಚಯ ಮಾಡಿಸಬೇಕು ಎಂದುಹೇಳಿದರು. ಶಾಸಕ ಹಾಗೂ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ್‌ಮಾತನಾಡಿ, ಡಾ| ಶ್ರೀಶೈಲ ಬಿರಾದಾರ ನೃಪತುಂಗನಾಡಿನಲ್ಲಿ ಉತ್ತುಂಗಕ್ಕೇರಿದ ಸಾಹಿತಿ. ಅವರ ನೆರಳಲ್ಲಿ ಬೆಳೆದ ಅನೇಕರು ಶೈಕ್ಷಣಿಕ ಮತ್ತು ಸಾಹಿತ್ಯಿಕವಾಗಿಬೆಳೆವಣಿಗೆ ಕಂಡಿದ್ದಾರೆ. ಅಂತವರ ಶಿಷ್ಯನಾಗಿ ಅವರಿಂದ ಶಿಕ್ಷಣ ಪಡೆಯುವ ಭಾಗ್ಯ ನನಗೂ ಲಭಿಸಿದ್ದು ನನ್ನ ಪುಣ್ಯ ಎಂದರು.
ಹಂಪಿ ವಿಶ್ವವಿದ್ಯಾಲಯ ಶಾಸನಶಾಸ್ತ್ರದ ಪ್ರಾಧ್ಯಾಪಕ ಡಾ| ಅಮರೇಶ ಯತಗಲ್ ಮಾತನಾಡಿ, ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವಜವಾಬ್ದಾರಿ ಸಾಹಿತಿಗಳ ಮೇಲಿದೆ. ಸಾಹಿತಿಗಳಿಗೆಶಿಷ್ಯ ವೃಂದವೇ ಬಹುದೊಡ್ಡ ಸಂಪತ್ತಾಗಿದೆ ಎಂದುಹೇಳಿದರು. ಬೆಂಗಳೂರು ಸಾರ್ವಜನಿಕ ಗ್ರಂಥಾಲಯಇಲಾಖೆ ನಿರ್ದೇಶಕ ಡಾ| ಸತೀಶಕುಮಾರ ಹೊಸಮನಿಮಾತನಾಡಿ, ಸಾಮಾಜಿಕ ಬದಲಾವಣೆ ತರುವಶಕ್ತಿ ಶಿಕ್ಷಕರಲ್ಲಿದೆ. ಶಿಕ್ಷಕರು ವಿದ್ಯಾರ್ಥಿಗಳ ಜೀವನ ರೂಪಿಸಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮಅಥವಾ ಶಾಸಕರ ಅನುದಾನ ದೊರೆತರೆ ಸೇಡಂನಲ್ಲಿ ಬಹುದೊಡ್ಡ ಗ್ರಂಥಾಲಯ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.
ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಪೀಠಾಧಿ ಪತಿ ಶ್ರೀ ಸದಾಶಿವ ಸ್ವಾಮೀಜಿ, ಹಾಲಪ್ಪಯ್ಯ ವಿರಕ್ತ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಮಾಜಿ ಶಾಸಕ ನಾಗರೆಡ್ಡಿ ಪಾಟೀಲ ಮಾತನಾಡಿದರು. ಶಿವಯ್ಯಸ್ವಾಮಿ ಬಿಬ್ಬಳ್ಳಿ ಸ್ವಾಗತಿಸಿದರು, ಡಾ| ಚಂದ್ರಕಲಾ ಬಿದರಿ ಸ್ವಾಗತ ಗೀತೆ ಹಾಡಿದರು, ಪ್ರೊ| ಶೋಭಾದೇವಿ ಚೆಕ್ಕಿ, ಗ್ರಂಥದ ಸಂಪಾದಕ-ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ಕಾರ್ಯಕ್ರಮ ನಡೆಸಿಕೊಟ್ಟರು.