Advertisement

ಶೋಷಿತರಿಗೆ ಮೀಸಲಾತಿ ಕೈ ತಪ್ಪುವ ಭೀತಿ

01:53 PM Mar 15, 2021 | Team Udayavani |

ಹಾಸನ: ಶೋಷಿತ ವರ್ಗಗಳ ಪರಿಸ್ಥಿತಿ ಶೋಚನೀಯವಾಗುತ್ತಿದ್ದು, ಮೀಸಲಾತಿಯನ್ನು ಕಳೆದುಕೊಳ್ಳು ಪರಿಸ್ಥಿತಿ ನಿರ್ಮಾಣವಾಗಿದೆಎಂದು ಚಿಂತಕ ಹಾಗೂ ನಿವೃತ್ತ ಪ್ರಾಂಶುಪಾಲ ಎಚ್‌.ಎಂ.ರುದ್ರಸ್ವಾಮಿ ಆತಂಕ ವ್ಯಕ್ತಪಡಿಸಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಕರ್ನಾಟಕ ದಲಿತ ಚಳವಳಿಯ ನಾಯಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಲ್ಲೊಬ್ಬರಾಗಿದ್ದ ದಿವಂಗತ ಬಿ.ವಿ.ಚಂದ್ರಪ್ರಸಾದ್‌ತ್ಯಾಗಿ ಅವರ 15ನೇ ಸಂಸ್ಮರಣೆ ಹಾಗೂ ಆರ್‌ .ಬಿ. ಮೋರೆ ಮತ್ತು ಡಾ.ಆನಂದ ತೇಲ್ತುಂಬೆ ಅವರ “ಮಹಾಡ್‌ ಕೆರೆ ಸತ್ಯಾಗ್ರಹ ಮತ್ತುಮಹಾಡ್‌ ಮೊದಲ ದಲಿತ ಬಂಡಾಯ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗ ಮೀಸಲಾತಿಯ ಗದ್ದಲ ಜೋರಾಗಿದೆ. ಸಾಮಾನ್ಯ ವರ್ಗದಲ್ಲಿರುವವರು ಬಿಸಿಎಂಗೆ ಬರಲುಮುಂದಾದರೇ, ಬಿಸಿಎಂ ಸಮುದಾಯದವರು ಎಸ್ಸಿಗೆ ಬರಬೇಕೆಂದು, ಎಸ್‌ಟಿಯವರು ಎಸ್‌ಇಗೆ ಬರುವ ತವಕದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಚಂದ್ರ ಪ್ರಸಾದ್‌ ತ್ಯಾಗಿ ಅವರುಇದ್ದರೇ ಸರ್ಕಾರದ ವಿರುದ್ಧ ಪ್ರಬಲ ಹೋರಾಟಕ್ಕಿಳಿಯುತ್ತಿದ್ದರು ಎಂದು ಎಚ್ಚರಿಕೆ ನೀಡಿದರು.

ಧ್ವನಿ ಇಲ್ಲದಂತೆ ಮಾಡಿದ್ದಾರೆ: ಇಂದು ಸಂವಿಧಾನದ ಆಶಯ ಈಡೇರಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದವರು ಭಾರತೀಯರಿಗೆ ಧ್ವನಿ ಇಲ್ಲದಂತೆ ಮಾಡಿದ್ದಾರೆ. ದೇಶ ಭಕ್ತಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಮಹಿಳೆ ಯರ ಮೇಲೆ ಬಡವರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಈ ಬೆಳವಣಿಗೆ ಯನ್ನು ಗಮನಿಸಿದರೆ ದೇಶ ಸಾಗುತ್ತಿರುವ ಮಾರ್ಗ ಭಯಾನಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಮಾಜವಾದಿ ಚಳವಳಿ ಶುರು: ಶೋಷಿತ ಸಮುದಾಯಗಳಿಗೆ ಅನ್ಯಾಯವಾಗುವುದುಕಂಡು ಬಂದರೆ ತಕ್ಷಣದಲ್ಲಿ ಹೋರಾಟಕ್ಕಿಳಿದುನ್ಯಾಯ ಕೊಡಿಸುತ್ತಿದ್ದ ಅಪರೂಪದ ನಾಯಕ ಬಿ.ವಿ.ಚಂದ್ರಪ್ರಸಾದ್‌ ತ್ಯಾಗಿ ಎಂದ ಅವರು,ದಲಿತರ ನಾಗರಿಕಗಳ ಹಕ್ಕುಗಳಿಗಾಗಿ ಹಾಸನಜಿಲ್ಲೆಯಲ್ಲಿ ಒಂದು ಸಂಚಲನ ಪ್ರಾರಂಭವಾಗಿದ್ದೇ ಸಮಾಜವಾದಿ ಅಂದೋಲನದಿಂದಒಡನಾಡಿಗಲಾಗಿದ್ದ ತ್ಯಾಗಿ ಅವರಂತಹನಾಯಕ ಕಾಲದಲ್ಲಿ. ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಪಿ.ಲಂಕೇಶ್‌, ಕೆ.ಪಿ. ಪೂರ್ಣಚಂದ್ರತೇಜಸ್ವಿಯಂತಹ ಇನ್ನು ಅನೇಕರಿಂದ ಸಮಾಜವಾದಿ ಚಳವಳಿ ಶುರು ವಾಯಿತು ಎಂದು ಸ್ಮರಿಸಿದರು.

ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಎಂ.ಜಿ.ಪೃಥ್ವಿ, ದಲಿತ್‌ ಶೋಷಣ್‌ ಮುಕ್ತಿ ಮಂಚ್‌ ಅಖೀಲ ಭಾರತ ಸಮಿತಿ ಸದಸ್ಯ ಎನ್‌.ನಾಗರಾಜು, ಎವಿಕೆ ಕಾಲೇಜು ಸಹಪ್ರಾ ಧ್ಯಾಪಕ ಡಾ.ಸಿ.ಚ.ಯತೀಶ್ವರ್‌, ಚಿತ್ರಕಲಾವಿದಕೆ.ಟಿ.ಶಿವಪ್ರಸಾದ್‌, ದಲಿತ ಸಂಘರ್ಷ ಸಮಿತಿಕೃಷ್ಣದಾಸ್‌, ಹಿರಿಯ ರೈತ ಮುಖಂಡ ಎಸ್‌. ಎನ್‌.ಮಂಜುನಾಥ್‌ ದತ್ತ, ದಲಿತಸಂಘಟನೆಗಳ ಮುಖಂಡರಾದ ನಾರಾಯಣದಾಸ್‌, ಎಚ್‌.ಕೆ.ಸಂದೇಶ್‌, ಕೆ.ಈರಪ್ಪ, ರಾಜಶೇಖರ್‌, ಸಿಐಟಿಯು ಮುಖಂಡಧರ್ಮೇಶ್‌, ಜಿ.ಚಂದ್ರಶೇಖರ್‌, ಪ್ರಮೀಳಾ, ಕೊಟ್ಟೂರು ಶ್ರೀನಿವಾಸ್‌, ಅಂಬುಗ ಮಲ್ಲೇಶ್‌, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್‌. ವಿಜಯಕುಮಾರ್‌ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧು ಸೂದನ್‌ಸ್ವಾಗತಿಸಿದರು. ಬಿ.ಎಸ್‌.ಲಿಂಗರಾಜು ನಿರೂಪಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next