Advertisement

Book Release: ಟಿಪ್ಪು ಅತ್ಯಂತ ಸಂಕೀರ್ಣ ವ್ಯಕ್ತಿ: ವಿದೇಶಾಂಗ ಸಚಿವ ಜೈಶಂಕರ್‌

03:20 AM Dec 02, 2024 | Team Udayavani |

ಹೊಸದಿಲ್ಲಿ: ಭಾರತ ಇತಿಹಾಸದಲ್ಲಿ ಟಿಪ್ಪು ಸುಲ್ತಾನ್‌ ಅತ್ಯಂತ ಸಂಕೀರ್ಣ ವ್ಯಕ್ತಿ. ಟಿಪ್ಪು ವಿಷಯದಲ್ಲಿ ಬೇಕಾದ ಸಂಗತಿಗಳನ್ನೆಷ್ಟೇ ಎತ್ತಿಕೊಂಡು ಕಥನ ಕಟ್ಟಲಾಗುತ್ತಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಇತಿಹಾಸಕಾರ ವಿಕ್ರಮ್‌ ಸಂಪತ್‌ ಅವರ ಟಿಪ್ಪು ಸುಲ್ತಾನ್‌ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಒಂದೆಡೆ ಟಿಪ್ಪು ಸುಲ್ತಾನ್‌ ದಕ್ಷಿಣ ಭಾಗದಲ್ಲಿ ಬ್ರಿಟಿಷರ್‌ ವಸಾಹತುಶಾಹಿ ನಿಯಂತ್ರಣಕ್ಕೆ ಪ್ರಯತ್ನಿಸಿದ ಪ್ರಮುಖ ವ್ಯಕ್ತಿ. ಇದು ದಕ್ಷಿಣ ಭಾರತದ ಭವಿಷ್ಯಕ್ಕೆ ಬಂದಾಗ ಅವರ ಸೋಲು ಮತ್ತು ಮರಣವು ಒಂದು ಮಹತ್ವದ ತಿರುವು ಎನ್ನುವುದು ಅಷ್ಟೇ ನಿಜ. ಆದರೆ, ಅವರ ಆಡಳಿತದ ಪ್ರತಿಕೂಲ ಪರಿಣಾಮಗಳನ್ನು ಮೈಸೂರು ಪ್ರಾಂತ ಕಾಣಬೇಕಾಯಿತು. ವಿಶೇಷವಾಗಿ ಮಡಿಕೇರಿ ಮತ್ತು ಮಲಬಾರ್‌ನಲ್ಲಿ ಹೆಚ್ಚು ಕಾಣಬಹುದು. ಆದರೆ ಅದನ್ನು ಇತಿಹಾಸಕಾರರು ನಿರ್ಲಕ್ಷಿಸಿದರು ಎಂದರು.

ಇತಿಹಾಸವು ಸಂಕೀರ್ಣವಾಗಿದ್ದು, ತಮಗೆ ಬೇಕಾದ ಸಂಗತಿಗಳನ್ನು ಮಾತ್ರವೇ ಮುಂದು ಮಾಡುವ ಪ್ರವೃತ್ತಿ ಬೆಳೆದಿದೆ. ಟಿಪ್ಪು ವಿಷಯದಲ್ಲಿ ಆತನ ಬ್ರಿಟಿಷರ ವಿರುದ್ಧ ಹೋರಾಟವನ್ನು ಮಾತ್ರ ಹೆಚ್ಚು ಪ್ರಚುರಪಡಿಸಲಾಗಿದೆ. ಆದರೆ, ಈಗ ನಾವು ವೋಟ್‌ ಬ್ಯಾಂಕ್‌ನ ಕೈದಿಗಳಾಗಿ ಉಳಿದಿಲ್ಲ. ಪರ್ಯಾಯ ಆಲೋಚನೆಗಳಿಗೂ ಅವಕಾಶ ನೀಡುತ್ತಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next