Advertisement

ಬೇಂದ್ರೆ ಅರ್ಥೈಸಿಕೊಳ್ಳಲು ಇನ್ನೂ ದೂರದ ದಾರಿ ಬೇಕು

04:46 PM Mar 08, 2021 | Team Udayavani |

ಧಾರವಾಡ: ನಾವಿಂದು ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಲ್ಲಿ ನಮ್ಮತನದ ಬೇರು, ಪರಂಪರೆಗಳನ್ನು ಕಳೆದುಕೊಂಡು ಬಿಟ್ಟಿದ್ದೇವೆ. ಅವುಗಳನ್ನು ಪುನಃ ಪಡೆದುಕೊಳ್ಳಬೇಕಾದರೆ ಅದಕ್ಕೆ ಬೇಂದ್ರೆಯವರ ಕಾವ್ಯಗಳೇ ದಾರಿಯಾಗಬಲ್ಲವು ಎಂದು ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ಹೇಳಿದರು.

Advertisement

ಕೆಸಿಡಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದ.ರಾ. ಬೇಂದ್ರೆಯವರ 125ನೇ ಜನ್ಮದಿನದಪ್ರಯುಕ್ತ ನಾಡಿನ 65 ಸಾಹಿತಿಗಳು ಬೇಂದ್ರೆ ಕುರಿತು ಬರೆದಿರುವ ಲೇಖನಗಳ ಸಂಗ್ರಹ ಕೃತಿ “ಕಂಡವರಿಗಷ್ಟೇ’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತೀಯ ಪರಂಪರೆ ಪ್ರಕಾರ ಯಾರು 125ನೇ ಜನ್ಮದಿನದ ನಂತರ ನೆನಪಿನಲ್ಲಿ ಉಳಿಯುತ್ತಾರೆಯೋ ಅವರು ಚಿರಂಜೀವಿ ಆಗುತ್ತಾರೆ ಎನ್ನುತ್ತಾರೆ. ಹಾಗೆಯೇ ಬೇಂದ್ರೆಯವರು ಈಗ ಚಿರಂಜೀವಿ ಆಗಿದ್ದಾರೆ. ಬೇಂದ್ರೆ ಓರ್ವ ಭಕ್ತ ಕವಿ ಆಗಿದ್ದರು. ಅವರಲ್ಲಿದೊಡ್ಡ ಪ್ರಮಾಣದ ಭಕ್ತಿ ಇತ್ತು. ವೇದವನ್ನು ತುಂಬಾ ಚೆನ್ನಾಗಿ ಅನುಸರಿಸಿಕೊಂಡು ಬಂದಿದ್ದರು. ಅವರನ್ನು ಕಾವ್ಯ ಮತ್ತು ಶಾಸ್ತ್ರದ ದೃಷ್ಟಿಯಿಂದ ತುಂಬಾ ಕಡಿಮೆ ಅರ್ಥೈಸಿಕೊಂಡಿದ್ದೇವೆ. ಅವರನ್ನು ಅರ್ಥೈಸಿಕೊಳ್ಳಲು ಇನ್ನೂ ದೂರದ ದಾರಿ ಬೇಕು ಎಂದರು.

ಹಿರಿಯ ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಬೇಂದ್ರೆ ಪುಸ್ತಕಗಳನ್ನು ಅನಂತಕಾಲ ಪ್ರಕಟಿಸಿದ ಹಾಗೂ ಇನ್ನೂ ಅನೇಕ ವರ್ಷ ಪ್ರಕಟಿಸುವ ಶಕ್ತಿವುಳ್ಳವರು ನಮ್ಮಲ್ಲಿದ್ದಾರೆ. ಅಂಥವರು ಯಾರೂ ನಾವೇ ಇಂತಹ ಪುಸ್ತಕಪ್ರಕಟಿಸುತ್ತೇವೆ ಬನ್ನಿ ಎಂದು ಆಹ್ವಾನ ನೀಡದೇ ಇರುವುದು ಬೇಸರದ ಸಂಗತಿ. ಅದೇನೇ ಆಗಿರಲಿ ಬೇಂದ್ರೆಯವರ ಸ್ವಾಭಿಮಾನದ ಆಶಯಭಾವದಂತೆಯೇ ಸ್ವಂತ ಪುಸ್ತಕ ಪ್ರಕಟಿಸಿ, ಸ್ವಂತ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.

ಕಂಡವರಿಗಷ್ಟೇ ಕೃತಿಯ ಸಂಪಾದಕರಾದ ಡಾ| ಗೀತಾ ವಸಂತ, ಡಾ| ರಾಜಕುಮಾರ ಮಡಿವಾಳರ ಇದ್ದರು.

Advertisement

ಕನ್ನಡ ಸಾಹಿತ್ಯಕ್ಕೆ ಬೇಂದ್ರೆ ಅಗಾಧ ಶಕ್ತಿ ಇದ್ದಂತೆ. ಅವರ ಸಮಾನರಾದ ಕವಿ ಮತ್ತೂಬ್ಬರಿಲ್ಲ. ಹಿಂದಿ, ಇಂಗ್ಲಿಷ್‌ನಲ್ಲಿಯೂ ಬೇಂದ್ರೆಯವರ ಮಾದರಿಯಲ್ಲಿ ಬರೆಯುವ ಕವಿಗಳ ಕಾವ್ಯಗಳನ್ನು ನಾನು ಓದಿದ್ದೇನೆ. ಆದರೆ ಅವರ್ಯಾರೂ ಸಹ ಬೇಂದ್ರೆಯವರಿಗೆ ಸಮಾನರಾಗುವುದೇ ಇಲ್ಲ. – ಡಾ| ಗುರುಲಿಂಗ ಕಾಪಸೆ, ಹಿರಿಯ ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next