Advertisement

ಎರಡು ಗ್ರಂಥ ಲೋಕಾರ್ಪಣೆ

05:05 PM Dec 27, 2020 | Suhan S |

ಬಸವಕಲ್ಯಾಣ: ಹಾರಕೂಡ ಮಠವು ಧಾರ್ಮಿಕ ಕಾರ್ಯಕ್ರಮದ ಜತೆಗೆ ಸಾಹಿತಿಕವಾಗಿಯೂ ಸಮಾಜದಲ್ಲಿ ಉತ್ತಮ ಕೆಲಸದ ಮೂಲಕ ಅಪಾರ ಭಕ್ತರನ್ನು ಹೊಂದಿದ ಈ ಭಾಗದ ಏಕೈಕ ಮಠವಾಗಿದೆ ಎಂದು ಧಾರವಾಡದ ಹಿರಿಯ ಸಾಹಿತಿ ಡಾ| ಸಂಗಮೇಶ ಸವದತ್ತಿ ಹೇಳಿದರು.

Advertisement

ತಾಲೂಕಿನ ಹಾರಕೂಡ ಗ್ರಾಮದ ಹಿರೇಮಠದಲ್ಲಿ ಡಾ| ಚೆನ್ನವೀರ ಶಿವಾಚಾರ್ಯರು ರಚಿಸಿರುವ ಚನ್ನ ಚಂದ್ರಹಾರ ಹಾಗೂ ರಾಯಚೂರಿನ ಡಾ| ಚೆನ್ನಬಸವಯ್ಯ ಹಿರೇಮಠರಚಿಸಿರುವ ಕಲ್ಯಾಣ ಕರ್ನಾಟಕದಸಂಸ್ಕೃತಿ ಎಂಬ ಎರಡು ಗ್ರಂಥಗಳನ್ನುಲೋಕಾರ್ಪಣೆಗೊಳಿಸಿ ಮಾತನಾಡಿದಅವರು, ಹಾರಕೂಡ ಮಠವು ಒಂದುಪುಟ್ಟ ಗ್ರಾಮದಲ್ಲಿ ಇದ್ದರೂ ವಿದೇಶದ ವರೆಗು ಪಸರಿಸಿದೆ ಎಂದರು.

ಈ ಮಠದಿಂದ ಪ್ರಕಟವಾದ ಗ್ರಂಥಗಳು ಕೆನಡಾ ದೇಶದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು, ಜಗತ್ತಿನತುಂಬ ಪ್ರಸಿದ್ಧವಾಗಿದೆ. ಅಲ್ಲದೆಡಾ| ಚೆನ್ನವೀರ ಶಿವಾಚಾರ್ಯರು ಸಮಾಜಕ್ಕೆ ಜ್ಞಾನದ ಬೆಳಕು ನೀಡುತ್ತಿದ್ದಾರೆ ಎಂದರು.

ಡಾ| ಚನ್ನಬಸವಯ್ಯ ಹಿರೇಮಠ ಅವರು ಕಲ್ಯಾಣ ಕರ್ನಾಟಕ ಸಂಸ್ಕೃತಿಕುರಿತು ಶಾಸನಗಳ ಕುರಿತು ವಿಶೇಷಉಪನ್ಯಾಸ ನೀಡಿದರು. ಸಾಹಿತಿ ಡಾ|ಗವಿಸಿದ್ಧಪ್ಪ ಪಾಟೀಲ ಮಾತನಾಡಿದರು.ಹಿರೇಮಠ ಸಂಸ್ಥಾನದ ಡಾ| ಚೆನ್ನವೀರಶಿವಾಚಾರ್ಯರು ಸಾನ್ನಿಧ್ಯ ವಹಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ರಾಜಶೇಖರ ಮೇತ್ರೆ, ಬಿ.ಕೆ. ಹಿರೇಮಠ, ಹುಮನಾಬಾದ್‌ನ ಸಾಹಿತಿ ಎಚ್‌.ಕಾಶಿನಾಥರೆಡ್ಡಿ, ರಾಜಕುಮಾರ ಪಾಟೀಲಸಿರಗಾಪುರ, ಮೇಘರಾಜ ನಾಗರಾಳೆ ಇದ್ದರು. ಸುಭಾಷ ಮುರುಡ ಬೆಳಂಗಿ ಸ್ವಾಗತಿಸಿದರು. ಅಂಬರಾಯ ಉಗಾಜಿ ನಿರೂಪಿಸಿದರು. ಮಲ್ಲಿನಾಥ ಹಿರೇಮಠ ವಂದಿಸಿದರು.

ನಾವದಗಿಯ ರೇವಪ್ಪಯ್ಯಾ ಜಾತ್ರೆ: ಪಲಕ್ಲಿ ಉತ್ಕವ :

Advertisement

ಭಾಲ್ಕಿ: ಸುಕ್ಷೇತ್ರ ನಾವದಗಿ ಗ್ರಾಮದ ಸದ್ಗುರು ರೇವಪ್ಪಯ್ಯಾ ಮಹಾಶಿವಶರಣರ 84ನೇ ಜಾತ್ರಾ ಮಹೋತ್ಸವ ನಿಮಿತ್ತ ಸಂಭ್ರಮ ಪಲ್ಲಕ್ಕಿ ಉತ್ಸವ ನಡೆಯಿತು.

ರೇವಪ್ಪಯ್ನಾ ಜಾತ್ರಾ ಮಹೋತ್ಸವ ಆಚರಣೆ ಸಮಿತಿ ವತಿಯಿಂದ ಕೋವಿಡ್‌-19 ಮುಂಜಾಗ್ರತಾಕ್ರಮವಾಗಿ ಜಾತ್ರಾ ಮಹೋತ್ಸವ ಸರಳ ರೀತಿಯಿಂದ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಭಕ್ತಾದಿಗಳಆಸಕ್ತಿಯ ಮೇರೆಗೆ ಅಗ್ನಿಪೂಜೆ, ಪಲ್ಲಕ್ಕಿ ಉತ್ಸವ ವೈಭವಪೂರಿತವಾಗಿ ನಡೆಸಲಾಯಿತು. ಪಲ್ಲಕ್ಕಿ ಉತ್ಸವದಲ್ಲಿ ಟ್ರಸ್ಟ್‌ಕಮಿಟಿ ಸದಸ್ಯರಾದ ಮಲ್ಲಿಕಾರ್ಜುನ ಸೇರಿಕಾರ, ಪ್ರದೀಪಪಾಟೀಲ, ಶಿವರಾಜ ಪಾಟೀಲ ಮಾವಿನಹಳ್ಳಿಯವರಜೊತೆಗೆ ಸಂಸ್ಥಾನ ಮಠದ ಶಾಂತವೀರ ಸ್ವಾಮಿ, ಸಿದ್ದಲಿಂಗ ಸ್ವಾಮಿ ಭಾಗಿಯಾಗಿದ್ದರು. ಪಲ್ಲಕ್ಕಿ ಉತ್ಸವಮೆರವಣಿಗೆಯಲ್ಲಿ ಕಾರಣಿಕ ಪುರವಂತರ ಕುಣಿತಮತ್ತು ಸುಮಂಗಲೆಯರ ಆರತಿ ಪ್ರದರ್ಶನ ಗಮನಸೆಳೆಯಿತು. ನೂರಾರು ಯುವಕರು ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next