Advertisement

ಸಂಬಂಧಗಳ ಇರಿಸುವಿಕೆಗೆ ದೊಡ್ಡ ಮನಸ್ಸು ಬೇಕು: ತೋನ್ಸೆ

05:59 PM Jan 01, 2020 | Suhan S |

ಮುಂಬಯಿ, ಡಿ. 31: ಇಂದು ಎರಡು ಕೃತಿಗಳ ಮೂಲಕ ಒಂದೊಂದು ವಿಷಯಗಳು ಲೋಕಾರ್ಪಣೆಗೊಂಡಿವೆ. ಸಂಬಂಧಗಳನ್ನು ಇಟ್ಟುಕೊಳ್ಳಬೇಕಾದರೆ ದೊಡ್ಡ ಮನಸ್ಸು ಬೇಕು. ಮುಂಬಯಿ ತುಳು ಸಾಹಿತ್ಯ ಕಂಡ ಒಂದು ವಿರಾಟ್‌ ರೂಪ ಶಿಮಂತೂರು ಅವರದ್ದು. ಇಂದು ನಮಗೆ ವಿಚಾರದ ಕೊರತೆ ಇದೆ. ಬದುಕು ಕಟ್ಟುವ ನಾವೂ ಇಂತಹ ಕೃತಿಗಳಿಂದ ವಿಚಾರಗಳನ್ನು ಓದಿ ಮನನ ಮಾಡಬೇಕು ಎಂದು ಕಲಾ ಜಗತ್ತು (ರಿ.) ಮುಂಬಯಿ ಸಂಸ್ಥೆಯ ಅಧ್ಯಕ್ಷ ಡಾ| ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ತಿಳಿಸಿದರು.

Advertisement

ಡಿ. 28ರಂದು ಸಂಜೆ ಸಾಂತಾ ಕ್ರೂಜ್‌ ಪೂರ್ವದಲ್ಲಿನ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಪೂಜಾ ಪ್ರಕಾಶನ ಮುಂಬಯಿ ಪ್ರಕಾಶಿತ ಪ್ರಶಸ್ತಿ ಪುರಸ್ಕೃತ ಕವಿ ಶಿಮಂತೂರು ಚಂದ್ರಹಾಸ ಸುವರ್ಣ ರಚಿತ ವೈಚಾರಿಕ ಲೇಖನಗಳ ಸಂಕಲನ “ಹಿಲಾಲು’ ಹಾಗೂ ಪ್ರಶಸ್ತಿ ವಿಜೇತ ಕವಯತ್ರಿ, ಲೇಖಕಿ ಶಾರದಾ ಆನಂದ್‌ ಅಂಚನ್‌ ರಚಿತ ವೈದ್ಯಕೀಯ ಲೇಖನಗಳ ಸಂಕಲನ “ಆರೋಗ್ಯ-ಆಯುಷ್ಯ’ ಕೃತಿಗಳ ಬಿಡುಗಡೆ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತು ಸಭಾ ಧ್ಯಕ್ಷತೆ ವಹಿಸಿ ವಿಜಯ ಕುಮಾರ್‌ ಶೆಟ್ಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಸುರೇಂದ್ರಕುಮಾರ್‌ ಹೆಗ್ಡೆ ಮುಖ್ಯ ಅತಿಥಿಯಾಗಿದ್ದರು. ಅತಿಥಿ ಅಭ್ಯಾಗತರಾಗಿದ್ದ ಗೋರೆಗಾಂವ್‌ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ರಮೇಶ್‌ ಶೆಟ್ಟಿ ಪಯ್ನಾರು ಅವರು “ಹಿಲಾಲು’ ಕೃತಿ ಮತ್ತು “ಆರೋಗ್ಯ-ಆಯುಷ್ಯ’ ಕೃತಿಯನ್ನು ಏಕಕಾಲಕ್ಕೆ ಬಿಡುಗಡೆಗೊಳಿಸಿದರು. ಮೊಗವೀರ ಮಾಸಿಕದ ಸಂಪಾದಕ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎಸ್‌.ಸುವರ್ಣ ಪುಸ್ತಕಗಳನ್ನು ಪರಿಚಯಿಸಿದರು. ತುಳು ನಾಡಿಗೆ, ಸಂಸ್ಕೃತಿಗೆ ಆಚಾರ ವಿಚಾರಗಳಿಗೆ ಸಂಬಂಧಿಸಿದ ವಿಷಯ ಗಳನ್ನು ಅನುಭವಿಸಿ ಬರೆದಂತಹ ಕೃತಿಗಳು ಇಂದು ಬಿಡುಗಡೆಗೊಂಡವುಗಳು. ಆದ್ದರಿಂದಲೇ ಇವು ಅತ್ಯು ತ್ತಮ ಕೃತಿಗಳಾಗಿ ಮೂಡಿಬಂದಿವೆ ಎಂದು ಸುರೇಂದ್ರಕುಮಾರ್‌ ತಿಳಿಸಿದರು.

ರಮೇಶ್‌ ಶೆಟ್ಟಿ ಶಿಮಂತೂರು ಹಾಗೂ ಶಾರದಾ ಅಂಚನ್‌ ಈಗಾಗಲೇ ಸಾರಸ್ವತ ಲೋಕಕ್ಕೆ ವೈವಿಧ್ಯಪೂರ್ಣವಾದ ಕೃತಿಗಳನ್ನು ನೀಡಿದ್ದಾರೆ. ಸುಮಾರು ಹದಿ ನೇಳು ಕೃತಿಗಳನ್ನು ನೀಡಿರುವ ಶಿಮಂತೂರು ನನ್ನಂಥವರಿಗೆ ಗುರು ಸ್ಥಾನದಲ್ಲಿರುವವರು ಎಂದು ಇಬ್ಬರಿಗೂ ಶುಭವನ್ನು ಕೋರಿದರು. ಅಶೋಕ್‌ ಸುವರ್ಣ ಮಾತನಾಡಿ ಊರಿನ ಕಟ್ಟುಕಟ್ಟಲೆಗಳಲ್ಲಿ ಬರುವ ‘ಹಿಲಾಲು ಪವಿತ್ರವಾದ ಒಂದು ಧಾರ್ಮಿಕ ಕ್ರಿಯೆ. ಅದನ್ನು ದಾಖಲಿಸುವ ಕೆಲಸ ಶಿಮಂತೂರು ಈ ಕೃತಿಯಲ್ಲಿ ಮಾಡಿದ್ದಾರೆ. ತುಳುನಾಡಿನ ಬಗ್ಗೆ ಅಧ್ಯಯನ ಮಾಡುವವರಿಗೆ ಒಂದು ಆಕರ ಗ್ರಂಥವಾಗಬಲ್ಲ ಈ ಕೃತಿ ಶಿಮಂತೂರು ಅವರ ಇತರ ಕೃತಿಗಳಿಗಿಂತ ಬಹಳ ಮಹತ್ವದ ಕೃತಿ ಎಂದು ಶಿಮಂತೂರು ಅವರ ಹಿಲಾಲು ಕೃತಿ ಪರಿಚಯಿಸಿದರು.

ಪೂಜಾ ಪ್ರಕಾಶನದ ಪ್ರಕಾಶಕ, ಕೃತಿಕಾರ ಚಂದ್ರಹಾಸ ಸುವರ್ಣ ಮತ್ತು ಕೃತಿಕರ್ತೆ ಶಾರದಾ ಅಂಚನ್‌ ಸಾಂದರ್ಭಿಕವಾಗಿ ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಿ ತಮ್ಮ ಕೃತಿಗಳು ಹೊರ ಬರಲು ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಅಭಿನಯ ಸಾಮ್ರಾಜ್ಯ (ರಿ.) ಮುಂಬಯಿ ಮತ್ತು ಪೇಜಾವರ ಮಠ ಮುಂಬಯಿ ಶಾಖೆ ಸಹಯೋಗದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಹಲವಾರು ಲೇಖಕರು, ಸಾಹಿತ್ಯಾಭಿಮಾನಿ ಗಳು ಉಪಸ್ಥಿತರಿದ್ದು ಕೃತಿಕಾರರನ್ನು ಅಭಿನಂದಿಸಿದರು. ಶಾರದಾ ಎ. ಅಂಚನ್‌ ಪ್ರಾರ್ಥನೆಗೈದರು. ಪೂಜಾ ಪ್ರಕಾಶನದ ಸರಸ್ವತಿ ಸಿ. ಸುವರ್ಣ, ಆನಂದ್‌ ಅಂಚನ್‌, ಪೂಜಾಶ್ರೀ ಹರ್ಷಿದ್‌, ಹರ್ಷ ಪಾಲನ್‌, ಹೇಮಾ ಹರಿದಾಸ್‌, ಲಲಿತಾ ಕೋಟ್ಯಾನ್‌, ಅನುರಾಗ್‌ ಆನಂದ್‌ ಅಂಚನ್‌ ಅತಿಥಿಗಳಿಗೆ ಪುಷ್ಪಗುತ್ಛ ವನ್ನಿತ್ತು ಗೌರವಿಸಿದರು. ನವೀನ್‌ ಕರ್ಕೇರ ಸುಖಾಗಮನ ಬಯಸಿ, ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣ ರಾಜ್‌ ಸುವರ್ಣ ವಂದಿಸಿದರು.

Advertisement

 

 ಚಿತ್ರ-ವರದಿ: ರೋನ್ಸ್‌ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next