ಮಂಡ್ಯ: ಇಂದಿನ ದೂರದರ್ಶನ, ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಅಬ್ಬರದಲ್ಲಿ ಪುಸ್ತಕಗಳನ್ನು ಓದುವ ಅಭಿರುಚಿ ಕಡಿಮೆಯಾಗಿದೆ. ಶಾಲಾ ಹಂತದಿಂದಲೇ ವಿದ್ಯಾರ್ಥಿಗಳಿಗೆ ಓದುವ ಅಭಿರುಚಿ ಬೆಳೆಸಬೇಕು ಎಂದು ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕಸಾಪ ಭವನದಲ್ಲಿ ನಡೆದ ಡಾ.ಬೆಸಗರಹಳ್ಳಿ ರಾಮಣ್ಣ ಗ್ರಂಥಾಲಯ ಸಭಾಂಗಣ ಉದ್ಘಾಟನೆಮತ್ತುಕೃತಿಲೋಕಾರ್ಪಣೆ ಸಮಾರಂಭದಲ್ಲಿಮಾತನಾಡಿ, ಎಲೆಕ್ಟ್ರಾನಿಕ್ ಮಾಧ್ಯಮಗಳು ಹಸ್ತದಲ್ಲೇ ಮಾಹಿತಿ ಒದಗಿಸಬಹುದು. ಆದರೆ, ಗ್ರಂಥ ಓದುವುದ ರಿಂದ ಸಿಗುವ ಖುಷಿ, ಮಹತ್ವ, ಅಭಿರುಚಿ ಪಡೆಯಲು ಸಾಧ್ಯವಾಗುವುದಿಲ್ಲ. ಸರ್ಕಾರ ಹಲವು ಕೋಟಿ ಹಣವ್ಯಯಿಸಿ ಲೇಖಕರಿಂದ ಗ್ರಂಥಗಳನ್ನು ಖರೀದಿಸಿ, ಗ್ರಂಥಾಲಯಗಳಿಗೆ ನೀಡುತ್ತದೆ.ಆದರೆ,ಜನರಲ್ಲಿ ಓದುವ ಅಭಿರುಚಿ ಕಡಿಮೆಯಾಗುತ್ತಿದೆ. ಕೆಲವರು ದುಡಿಮೆಗೆ ಪೂರಕವಾದ ಪುಸ್ತಕ ಓದುತ್ತಾರೆ ಎಂದರು.
ಅಮೆರಿಕದಲ್ಲಿ ಓದುವ ಪ್ರವೃತ್ತಿ ಹೆಚ್ಚಳ: ಅಮೆರಿಕದಂತಹ ದೇಶಗಳಲ್ಲಿ ಓದುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಗ್ರಂಥಾಲಯಗಳಲ್ಲಿ ಅತ್ಯಾಧುನಿಕ ವ್ಯವಸ್ಥೆಗಳಿವೆ. ಕುಳಿತಲ್ಲಿಗೆ ಗ್ರಂಥ ಕಲ್ಪಿಸುವ ವ್ಯವಸ್ಥೆ ಇದೆ. ನಮ್ಮ ದೇಶದಲ್ಲಿ ಅಂತಹ ವ್ಯವಸ್ಥೆ ರೂಪಿಸಲು ಇನ್ನೂ ನೂರು ವರ್ಷಗಳೇ ಬೇಕಾಗಬಹುದು. ಡಾ.ಬೆಸಗರಹಳ್ಳಿ ರಾಮಣ್ಣನವರ ಓದಿನ ಜ್ಞಾನ ಅಪಾರ. ಇಂಗ್ಲಿಷ್ ಸಾಹಿತ್ಯದ ಕೃತಿಗಳನ್ನುಅವರು ಅಭ್ಯಸಿಸುತ್ತಿದ್ದರು. ಅವರ ಓದು ಮತ್ತು ಲೋಕಾನುಭವ ಅವರನ್ನು ಉತ್ತಮ ಕತೆಗಾರರನ್ನಾಗಿ ರೂಪಿಸಿದೆ. ಅವರ ಮಂಡ್ಯ ಭಾಷಾ ಸೊಗಡು ಉತ್ತರ ಕರ್ನಾಟಕದ ಜನರನ್ನೂ ಆಕರ್ಷಿಸಿದೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಡಾ.ಪ್ರದೀಪಕುಮಾರ್ ಹೆಬ್ರಿಯವರ “ಕೃತಿ ಕಲರವ’ ಪುಸ್ತಕ ವನ್ನು ಪತ್ರಕರ್ತ ನವೀನ್ ಚಿಕ್ಕಮಂಡ್ಯ ಬಿಡುಗಡೆ ಮಾಡಿದರು.
ಸಾಹಿತ್ಯ ಲಯನ್ಸ್ ಕ್ಲಬ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಕೃತಿ ಕರ್ತೃ ಡಾ.ಪ್ರದೀಪಕುಮಾರ್ ಹೆಬ್ರಿ, ಕ ಸಾಪ ಜಿಲ್ಲಾಧ್ಯಕ್ಷ ರವಿಕುಮಾರ್ ಚಾಮಲಾಪುರ, ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ, ಖಜಾಂಚಿ ಡಾ.ವೈ.ಎಂ.ಶಿವರಾಮು, ಉಪಾಧ್ಯಕ್ಷ ಧನಂಜಯ ದರಸಗುಪ್ಪೆ, ಹೊಳಲು ಶ್ರೀಧರ್ , ಮಹೇಶ್ ಸುಂಡಹಳ್ಳಿ, ದ.ಕೋ.ಹಳ್ಳಿ ಚಂದ್ರಶೇಖರ್, ಬೇಕರಿ ರಮೇಶ್, ಎಲ್ಲೆಗೌಡ ಬೆಸಗರಹಳ್ಳಿ ಹಾಜರಿದ್ದರು.