ಶಿವಮೊಗ್ಗ: ಅಡಕೆ ಬೆಲೆಯ ಹೆಚ್ಚಳದಿಂದ ಸಮುದಾಯದ ಆರ್ಥಿಕ ಸ್ಥಿತಿ, ಜೀವನ ಶೈಲಿ ಬದಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತೋಟ ವಿಸ್ತರಣೆ ಮಾಡುವ ಬದಲಿಗೆ, ಈಗ ಇರುವ ಅಡಕೆಯ ಮರ್ಯಾದೆ ಉಳಿಸಿಕೊಳ್ಳುವತ್ತಬೆಳೆಗಾರರು ಗಮನಹರಿಸಬೇಕು ಎಂದು ಗೃಹ ಸಚಿವ, ಅಡಕೆ ಟಾಸ್ಕ್ಪೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ತಿಳಿಸಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ಅಡಕೆ ವರ್ತಕ, ಬೆಳೆಗಾರ, ಡಾ| ಕಡಿದಾಳ್ ಅವರ ಕರ್ನಾಟಕದಲ್ಲಿ ಅಡಕೆ ಕೃಷಿ-ಆರ್ಥಿಕಮತ್ತು ಸಾಂಸ್ಕೃತಿಕ ಅಧ್ಯಯನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವರ್ಷದಿಂದ ವರ್ಷಕ್ಕೆ ಅಡಕೆ ಬೆಳೆಯುವ ಪ್ರದೇಶ ವಿಸ್ತರಣೆಯಾಗುತ್ತಿದೆ. ಬಯಲುಸೀಮೆಯಲ್ಲೂ ಅಡಕೆ ವಿಸ್ತರಣೆಯಾಗುತ್ತಿದೆ. ಬರ ಪ್ರದೇಶಗಳಲ್ಲೂ ಜನ ಅಡಕೆ ಬೆಳೆಯಲು ಮುಂದಾಗಿದ್ದು ಆತಂಕಕಾರಿ ಬೆಳವಣಿಗೆ ಎಂದರು.
ಗುಟ್ಕಾದೊಂದಿಗೆ ಸೇರಿದ ಬಳಿಕವೇ ಅಡಕೆಗೆ ಹೆಚ್ಚಿನ ಧಾರಣೆ ಬಂದಿತು. ಅದೇ ಸಂದರ್ಭದಲ್ಲೇ ಅಡಕೆಯ ವಿರುದ್ಧ ಲಾಬಿಯೂ ಆರಂಭಿಸಲಾಯಿತು. ಯಾವ ಬೆಳೆ ವಿರುದ್ಧವೂಇಲ್ಲದ ಲಾಬಿ ಅಡಕೆಗೆ ಇದೆ. ಈ ಲಾಬಿ ನಿವಾರಣೆಗೆ ಟಾಸ್ಕ್ಫೋರ್ಸ್ ಬದ್ಧವಿದೆ ಎಂದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ಗುಟ್ಕಾಗಿಂತಲೂ ಹಾನಿಕಾರಕವಾದ ಮದ್ಯಪಾನ, ಧೂಮಪಾನದ ನಿಷೇಧ ಬಗ್ಗೆ ಯಾರೂ ಮಾತನಾಡದೆ ಇರುವುದು ಆಶ್ಚರ್ಯಕರ. ಎಲ್ಲಿಯವರೆಗೆಈ ಸಮಾಜದಲ್ಲಿ ಮದ್ಯಪಾನ, ಧೂಮಪಾನ, ನಿಷೇಧವಾಗುವುದಿಲ್ಲವೋ ಅಲ್ಲಿಯವರೆಗೂಅಡಕೆ ನಿಷೇಧವಾಗುವುದಿಲ್ಲ ಎಂದರು.
ರೈತರಪರವಾಗಿ ಯಾವ ಕೆಲಸ ಮಾಡದೆ ಇದ್ದರೂಪರವಾಗಿಲ್ಲ. ಆದರೆ ರೈತರ ವಿರುದ್ಧದ ಯಾವುದೇ ತೀರ್ಮಾನ ಸರಿಯಲ್ಲ. ಹೀಗಾಗಿ ಅಡಕೆಗೆ ಯಾವುದೇ ಆತಂಕವಾಗುವುದಿಲ್ಲ ಎಂದರು. ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ|ಟಿ. ಎನ್. ಪ್ರಕಾಶ್ ಕಮ್ಮರಡಿ ಮಾತನಾಡಿ, ಬೇರೆ ಕೃಷಿ ಉತ್ಪನ್ನಗಳ ಬೇಡಿಕೆ, ಪೂರೈಕೆ, ಬೆಲೆ, ಬೆಳೆ, ಮಾರುಕಟ್ಟೆ ಬಗ್ಗೆ ಅಪಾರ ಜ್ಞಾನ ಹೊಂದಿರುವ ನಮ್ಮ ರೈತರಿಗೆ ಅಡಕೆ ಮಾರುಕಟ್ಟೆ ಮಾತ್ರ ಅರ್ಥಕ್ಕೆ ನಿಲುಕದೆ ಇರುವುದು ವಿಪರ್ಯಾಸವಾಗಿದೆ ಎಂದರು.
ಪುಸ್ತಕದ ಕರ್ತೃ ಕಡಿದಾಳ್ ಗೋಪಾಲ್ ಮಾತನಾಡಿ, ಅಡಕೆ ಮೇಲಿರುವ ನಿಷೇಧದ ತೂಗುಗತ್ತಿ ನಿವಾರಣೆ ಆಗಬೇಕು. ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಯಾರೋಕೇಂದ್ರ ಸರಕಾರಕ್ಕೆ ವರದಿ ನೀಡಿದ್ದಾರೆ. ಈಗಸರಿಯಾದ ವರದಿ ಸಲ್ಲಿಸುವ ಕೆಲಸವಾಗಬೇಕು. ಸರಕಾರ ನೀತಿ ನಿಯಮಾವಳಿಗಳು ಬದಲಾಗಬೇಕು. ಮೌಲ್ಯವರ್ಧಿತ ಉತ್ಪನಗಳ ಸಂಖ್ಯೆ ಹೆಚ್ಚಿಸಬೇಕು ಎಂದರು.
ಹಂಪಿ ಕನ್ನಡ ವಿವಿ ಕುಲಪತಿ ಡಾ|ಸ.ಚಿ.ರಮೇಶ್ ಇದ್ದರು. ಮಾದರಿ ಕೃಷಿಕರಾದ ತಿಮ್ಮಪ್ಪ ಪುಟ್ಟೋಡ್ಲು, ಸೀತಾರಾಮಕೊಂಬಿನ ಕೇರಿ, ದೇವಣ್ಣ ಮತ್ತಿಬೈಲು, ಯೋಗನರಿಸಂಹಪುರದ ಕ್ಷಮಾ ಲಿಂಗರಾಜ್ ದಂಪತಿಯನ್ನು ಸನ್ಮಾನಿಸಲಾಯಿತು.