Advertisement
ಬಳಿಕ ಮಾತನಾಡಿದ ಅವರು, ಕೇಂದ್ರದ ಜನಪರ ಯೋಜನೆಗಳ ಮಾಹಿತಿಯುಳ್ಳ ಈ ಪುಸ್ತಕದ ಮೂಲಕ ಜನರನ್ನು ಮತ್ತು ಇನ್ನಷ್ಟು ಫಲಾನುಭವಿಗಳನ್ನು ತಲುಪು ವಂತಾಗಲಿ. ಪ್ರಧಾನಿಯವರ ಪ್ರತಿ ಯೊಬ್ಬರ ಸಶಕ್ತೀಕರಣದ ಕನಸು ನನಸಾಗಲು ಇದು ಸಹಾಯಕ ಎಂದು ಹೇಳಿದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಉಜ್ವಲಾ, ಉಜಾಲಾ, ಮುದ್ರಾ, ಸ್ಕಿಲ್ ಇಂಡಿಯಾ, ಜನೌಷಧಿ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ, ಸ್ವಚ್ಛ ಭಾರತ್, ಮೇಕ್ ಇನ್ ಇಂಡಿಯಾ, ಸುರಕ್ಷಿತ ಮಾತೃತ್ವ, ಬೇಟಿ-ಬಚಾವೋ ಬೇಟಿ-ಪಡಾವೋ, ಡಿಜಿಟಲ್ ಇಂಡಿಯಾ, ಖೇಲೋ ಸಹಿತ ಕೆಲವು ಪ್ರಮುಖ ಯೋಜನೆಗಳ ಮಾಹಿತಿ ಇದರಲ್ಲಿದೆ ಎಂದು ವಿವರಿಸಿದರು. ಸ್ಕೀಮ್ ವೆಬ್ ಪುಟಗಳಿಗಾಗಿ ಕ್ಯೂಆರ್ ಕೋಡ್‌ಗಳನ್ನು ನೀಡಲಾಗಿದೆ. ಸ್ಕ್ಯಾನ್ ಮಾಡುವ ಮೂಲಕ ನೇರವಾಗಿ ಆಯಾ ವೆಬ್ ಪುಟಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ಸ್ಕೀಮ್ ಮಾಹಿತಿಯನ್ನು ಪಡೆಯಬಹುದು ಎಂದು ಪ್ರಕಾಶಕರು ತಿಳಿಸಿದ್ದಾರೆ.
Related Articles
Advertisement