Advertisement

ಇತಿಹಾಸವನ್ನು ಕೆದಕಿ ಭವಿಷ್ಯದತ್ತ ನೋಟ ಹರಿಸುವ ಚಿತಾದಂತ

03:09 PM Aug 15, 2018 | |

ಬೌದ್ಧ ಧರ್ಮ, ಬುದ್ಧನ ನಿರ್ವಾಣ, ಆತನ ದಂತದ ಇತಿಹಾಸ, ಅಲೆಕ್ಸಾಂಡರ್‌ನ ಸಾಮ್ರಾಜ್ಯದಾಹಿ ನೀತಿ ಮೊದಲಾದ ವಿಷಯಗಳನ್ನಿಟ್ಟುಕೊಂಡು ಹೆಣೆದ ಕೃತಿ ‘ಚಿತಾದಂತ’. ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆಯುತ್ತ ಸಾಗುವ ಕಥೆ ಕೊನೆ ಯವರೆಗೂ ಓದುಗರ ಕುತೂಹಲವನ್ನು ಹಿಡಿದಿಡುತ್ತದೆ. ಇತಿಹಾಸದ ಘಟನೆಗಳನ್ನು ಕಥಾ ರೂಪದಲ್ಲಿ ಅಭಿವ್ಯಕ್ತಿಪಡಿಸಿದ ಮಹತ್ವವಾದ ಕೃತಿ ಇದಾಗಿದೆ. ನಿಧಿ ಶೋಧನೆ ಮೂಲಕ ಆರಂಭಗೊಳ್ಳುವ ಕಥೆಯಲ್ಲಿ ಭೂತಕಾಲ ದತ್ತ ಇಣುಕು ನೋಟ ಹರಿಸಿ, ಭವಿಷ್ಯತ್ತಿನ ಕಲ್ಪನೆಯನ್ನೂ ಹೆಣೆದುಕೊಂಡಿದೆ.

Advertisement

ಘಟನೆ 1
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಒಂದು ಕೊಲೆಯಾಗು ತ್ತದೆ. ಇಲ್ಲಿಂದ ಕಥೆಯ ಆರಂಭ. ಬುದ್ಧನ ದಂತ ಹಾಗೂ ಅಲೆಕ್ಸಾಂಡರ್‌ನ ನಿಧಿಗಾಗಿ ನಡೆಯುವ ಶೋಧ, ತೇರವಾದಿಗಳ ಹಿಂಸಾತ್ಮಕ ಹೋರಾಟವೇ ಕಾದಂಬರಿಯ ಮೂಲ ವಸ್ತು. ಗತ ಇತಿಹಾಸವನ್ನು ಕೆದಕುತ್ತ ಸಾಗುವ ಕಥೆ ಯಲ್ಲಿ ಬೌದ್ಧ ಧರ್ಮದ ಬಗ್ಗೆ ಸಂಶೋಧನೆ ಮಾಡುತ್ತಿರುವ ಡಾ| ಪೂಜಾ ಹಾಗೂ ರಚಿತಾ ಅವರಿಗೆ ನಿಧಿಯ ಕುರುಹು ಸಿಗುತ್ತದೆ.

ಘಟನೆ 2
ಇಡೀ ಜಗತ್ತಿನಾದ್ಯಂತ ದಂಡಯಾತ್ರೆ ಮಾಡಿ ಭಾರತಕ್ಕೆ ಬಂದ ಅಲೆಕ್ಸಾಂಡರ್‌ ಬೌದ್ಧ ಧರ್ಮದ ಬಗ್ಗೆ ತುಂಬಾ ತಿಳಿದುಕೊಂಡಿರುತ್ತಾನೆ. ಹಾಗೆಯೇ ಭಾರತವನ್ನು ಗೆಲ್ಲಬೇಕೆಂಬ ಅತ್ಯುತ್ಸಾಹವನ್ನು ಹೊಂದಿರುತ್ತಾನೆ. ಆದರೆ ಆತ ಇದರಲ್ಲಿ ಸೋಲು ಅನುಭವಿಸಬೇಕಾಗುತ್ತದೆ. ಅದಕ್ಕಾಗಿ ತನ್ನಲ್ಲಿರುವ ಸಂಪತ್ತು ಇಲ್ಲಿಯೇ ನಿಧಿಯಾಗಿ ಇಡುತ್ತಾನೆ. ತನ್ನ ಜತೆಗೆ ಬಂದ ಕಲಾಶ್‌ ಎಂಬ ಜನಾಂಗದ ಭವಿಷ್ಯಕ್ಕೆ ಉಪಯೋಗವಾಗಲಿ ಎಂದು ಆಶಿಸುತ್ತಾನೆ. ಕೆಲವು ಘಟನೆಗಳಿಂದ ನಿಧಿ ಕಣ್ಮರೆಯಾಗಿ ಉಳಿಯುತ್ತದೆ. ಇದನ್ನು ಕಲಾಶ್‌ ಜನಾಂಗ ತಲುಪಿಸಬೇಕು ಎಂಬ ಬಯಕೆ ಸಂಶೋಧಕಿ ರಚಿತಾಳದ್ದು.

ಘಟನೆ 3
ಅಲೆಕ್ಸಾಂಡರ್‌ ಸಣ್ಣ ವಯಸ್ಸಿನಲ್ಲೇ ತಂದೆ ಜತೆ ಕುದುರೆ ಕೊಳ್ಳಲು ಹೋಗುತ್ತಾನೆ. ಅಲ್ಲಿ ಒಂದು ಕುದುರೆ ಪಳಗಿಸಲು ಎಲ್ಲರೂ ಹೆದರುತ್ತಾರೆ. ಆದರೆ ಚಿಕ್ಕ ಹುಡುಗ ಅಲೆಕ್ಸಾಂಡರ್‌ ಅದನ್ನು ಪಳಗಿಸಿ, ಕರೆ ತರುತ್ತಾನೆ. ಅದಕ್ಕೆ ಬ್ಯುಸಫ‌ಲಾ (ಗೋಶಿರ) ಎಂದು ಕರೆಯುತ್ತಾನೆ. ಮುಂದೆ ಪೇಶಾವರದ ಪುರುರವ ಜತೆ ಯುದ್ಧದಲ್ಲಿ ಆತನ ಕುದುರೆ ಸತ್ತು ಹೋಗುತ್ತದೆ. ಅಲೆಕ್ಸಾಂಡರ್‌ ಕುದುರೆ ಸತ್ತುದ್ದಕ್ಕೆ ತುಂಬಾ ದುಃಖ ಪಟ್ಟು ಪೇಶಾವರದ ನದಿ ದಡದಲ್ಲಿ ಅಂತ್ಯ ಸಂಸ್ಕಾರ ಮಾಡಿ, ಅಲ್ಲಿಯೇ ಬ್ಯುಸಫ‌ಲಾ ಅಲೆಕ್ಸಾಂಡ್ರೀಯಾ ಎಂಬ ನಗರವನ್ನು ನಿರ್ಮಿಸುತ್ತಾನೆ.

 ಶಿವ ಸ್ಥಾವರಮಠ 

Advertisement
Advertisement

Udayavani is now on Telegram. Click here to join our channel and stay updated with the latest news.

Next