Advertisement

ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರು ನಿರಾಳ

06:54 AM Jun 12, 2020 | Lakshmi GovindaRaj |

ಕುದೂರು: ಹೋಬಳಿಯ ಬೆಟ್ಟಹಳ್ಳಿ ಕಾಲೋನಿ ಜನರ ನಿದ್ದೆಗೆಡಿಸಿದ್ದ ಚಿರತೆಯೊಂದು ಗುರುವಾರ ಬೆಳಗ್ಗೆ ಗ್ರಾಮಸ್ಥರೇ ಇಟ್ಟಿದ್ದ ಬೋನಿಗೆ ಬಿದ್ದಿದೆ. ಕಳೆದ ವರ್ಷದಿಂದ 3ಕ್ಕೂ ಹೆಚ್ಚು ಚಿರತೆಗಳು ಗ್ರಾಮದ ಪಕ್ಕದಲೇ ಬೀಡು ಬಿಟ್ಟು,  ಅವುಗಳ ಚೀರಾಟ, ಹೆಜ್ಜೆ ಗುರುತುಗಳು ಗ್ರಾಮಸ್ಥರ ನಿದ್ದೆಗಡಿಸಿದ್ದವು.

Advertisement

ಮಾತಿನ ಚಕಮಕಿ: ಬೆಟ್ಟಹಳ್ಳಿ ಕಾಲೋನಿಯಲ್ಲಿ ಅರಣ್ಯ ಅಧಿಕಾರಿಗಳು ಹೊಲದಲ್ಲಿಟ್ಟಿದ್ದ ಬೋನನ್ನು ಗ್ರಾಮಸ್ಥರೇ ಮೃತ ಕೆಂಚಯ್ಯನ ಮನೆ ಪಕ್ಕದಲ್ಲಿ 15 ದಿನಗಳಿಂದ ಬೋನಿಗೆ ನಾಯಿ ಕಟ್ಟಿಬಿಟ್ಟಿದ್ದರು. ಗುರುವಾರ ಮುಂಜಾನೆ 3 ಗಂಟೆಯ ಸಮಯದಲ್ಲಿ ಚಿರತೆ ಕೂಗಾಟದ ಶಬ್ದ ಕೇಳಿ ಚಿರತೆ ಬೋನಿಗೆ ಬಿದಿದ್ದೆ ಎಂದು ಗ್ರಾಮಸ್ಥರು, ಬೋನಿನ ಹತ್ತಿರ ಬಂದು ನೋಡಿದಾಗ ದೊಡ್ಡಗಾತ್ರದ  ಚಿರತೆಯೊಂದು ಬೋನಿಗೆ ಬಿದ್ದಿರುವುದು ಕಂಡು ಬಂದಿದೆ. ವಿಷಯ ತಿಳಿದ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಬಂದಾಗ, ಗ್ರಾಮಸ್ಥರು ಮೃತ ಕೆಂಚಯ್ಯನ ಕುಟುಂಬದವರಿಗೆ ಪರಿಹಾರ ಸಿಕ್ಕಿಲ್ಲ.

ಪರಿಹಾರ ಸಿಗುವವರೆಗೂ ಚಿರತೆ ಒಯ್ಯಲು ಬಿಡುವುದಿಲ್ಲ ಎಂದು  ಅರಣ್ಯಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಬಳಿಕ ನೆಲಮಂಗಲ ಅರಣ್ಯಾಧಿಕಾರಿ ಶಾಂತಕುಮಾರ್‌, ಗ್ರಾಮಸ್ಥರನ್ನು ಶಾಂತಗೊಳಿಸಿ, ಮೃತ ಕೆಂಚಯ್ಯನ ಕುಟುಂಬಕ್ಕೆ 15 ದಿನಗಳ ಗಡುವು ಕೇಳಿ ಪರಿಹಾರ ದೊರಕಿಸಲಾಗುವುದು ಎಂದ ಬಳಿಕ ಗ್ರಾಮಸ್ಥರು ಚಿರತೆ ಸ್ಥಳಾಂತರಕ್ಕೆ ಅನುವು ಮಾಡಿಕೊಟ್ಟರು.

ಚಿರತೆ ಹಿಡಿಯಲು ಮನವಿ: ಬೆಟ್ಟಹಳ್ಳಿ ಸುತ್ತಮುತ್ತ 3 ಚಿರತೆಗಳು ಓಡಾಡುತ್ತಿರುವುದು ಗ್ರಾಮಸ್ಥರಿಗೆ ಕಾಣಿಸುತ್ತಿರುವ ಹಿನ್ನಲೆ ಮತ್ತೆರಡು ಚಿರತೆಗಳನ್ನು ಹಿಡಿಯುವಂತೆ  ಗ್ರಾಮಸ್ಥರು ಮನವಿ ಮಾಡಿದರು. ಪಿಎಸ್‌ಐ ಮಂಜುನಾಥ್‌, ಜಯರಾಮು, ಶಾಸಕರ ಅಪ್ತ ಸಹಾಯಕ ಪುರುಷೋತ್ತಮ್‌ ಮಂಜೇಶ್‌, ಚಂದ್ರುಶೇಖರ್‌ ಗ್ರಾಮಸ್ಥರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next