ಉಡುಪಿ: ಗಣೇಶೋತ್ಸವಗಳು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಬಾಂಡ್ ಒದಗಿಸಬೇಕೆ? ಕೆಲವು ಸಮಿತಿಗಳಿಗೆ ಪೊಲೀಸ್ ಠಾಣೆ ಯಿಂದ ಬಾಂಡ್ ಒದಗಿಸಬೇಕೆಂದು ಕರೆ ಹೋಗಿದೆಯಂತೆ. 100 ರೂ. ಬಾಂಡ್ ಪೇಪರ್‌ನಲ್ಲಿ ಬರೆದುಕೊಡಬೇಕು. ಇಲ್ಲವಾದರೆ ಧ್ವನಿವರ್ಧಕದ ಅನುಮತಿ ಕೊಡುವುದಿಲ್ಲ ಎಂದು ಹೇಳಿದ್ದಾರೆನ್ನಲಾಗುತ್ತಿದೆ.
ಇದರ ಕುರಿತು ಎಸ್ಪಿಯವರಲ್ಲಿ ಕೇಳಿದಾಗ “ಹಿಂದಿನ ವರ್ಷ ದಂತೆಯೇ ನಿಯಮಗಳು ಇವೆ. ಗಣೇಶೋತ್ಸವಗಳಿಗೆ ಯಾವುದೇ ತೊಂದರೆ ಮಾಡು ವು ದಿಲ್ಲವೆಂದು ಡಿಐಜಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆಯಾ ಪ್ರದೇಶದ ಆಸ್ಪತ್ರೆ, ಶಾಲೆ ಪರಿಸರದಲ್ಲಿ ತೊಂದರೆಯಾಗಬಾರದೆಂಬ ಕಾರಣಕ್ಕೆ ಎಸ್‌ಐಯವರು ಹೇಳಿರಬಹುದು. ಯಾವ ಠಾಣಾ ವ್ಯಾಪ್ತಿ ಯಲ್ಲಿ ಹೇಳಿದ್ದಾರೆಂದರೆ ವಿಚಾರಿಸಿಬಹುದು’ ಎಂದು ಹೇಳಿದ್ದಾರೆ.
“ಶಿರ್ವ ಗಣೇಶೋತ್ಸವ ಸಮಿತಿಗೆ ಕರೆ ಬಂದಿದೆ. ಖಾಲಿ ಪೇಪರ್‌ನಲ್ಲಿ ಸಹಿ ಮಾಡಿ ಕೊಡಬೇಕಂತೆ. ಬಾಂಡ್ ಕೊಡದಿದ್ದರೆ ಧ್ವನಿವರ್ಧಕದ ಅನು ಮತಿ ಕೊಡುವು ದಿಲ್ಲ ಎನ್ನುತ್ತಾರೆ. ಇತರ ಹಬ್ಬಗಳಿಗೆ ಇಲ್ಲದ ಕಾನೂನು ಗಣೇಶೋತ್ಸವ ಕ್ಕೇಕೆ? ಬಾಂಡ್ ಕೊಟ್ಟು ಗಣೇಶೋತ್ಸವ ನಡೆಸಲು ಬಿಡುವುದಿಲ್ಲ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
: ಗಣೇಶೋತ್ಸವಗಳು ಸ್ಥಳೀಯ ಪೊಲೀಸ್ ಠಾಣೆ ಗಳಿಗೆ ಬಾಂಡ್ ಒದಗಿಸಬೇಕೆ? ಕೆಲವು ಸಮಿತಿಗಳಿಗೆ ಪೊಲೀಸ್ ಠಾಣೆ ಯಿಂದ ಬಾಂಡ್ ಒದಗಿಸಬೇಕೆಂದು ಕರೆ ಹೋಗಿದೆಯಂತೆ. 100 ರೂ. ಬಾಂಡ್ ಪೇಪರ್‌ನಲ್ಲಿ ಬರೆದುಕೊಡಬೇಕು. ಇಲ್ಲವಾದರೆ ಧ್ವನಿವರ್ಧಕದ ಅನುಮತಿ ಕೊಡುವುದಿಲ್ಲ ಎಂದು ಹೇಳಿದ್ದಾರೆನ್ನಲಾಗುತ್ತಿದೆ.