ಸಿಂದಗಿ: ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದ ಸಲುವಾಗಿ ನೀಡುವ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಗಂಭಿರ ಆರೋಪದ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಹರನಾಳ ಅವರು ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು.
ಶಾಲೆ ಮುಖ್ಯಗುರು ಶರಣಪ್ಪ ಬಿದನೂರ ಅವರು ಬಿಸಿಯೂಟದ ಅಕ್ಕಿಯನ್ನು ಮಾರಾಟ ಮಾಡುತ್ತಿರುವುದನ್ನು ಖಚಿತ ಮಾಹಿತಿ ಪಡೆದು ಗ್ರಾಮಸ್ಥರು ಅಕ್ಕಿ ಸಾಗಾಣಿಕೆ ವಾಹನ ಹಿಡಿದ್ದಾರೆ. ಅಲ್ಲಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಹರನಾಳ ಅವರನ್ನು ಗ್ರಾಮಸ್ಥರು ಕರೆಸಿದ್ದಾರೆ. ಅಕ್ಕಿ ಮಾರಾಟ ಮಾಡು ವ ಮುಖ್ಯ ಶಿಕ್ಷಕ ಶರಣಪ್ಪ ಬಿದನೂರ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಅಕ್ಕಿ ಮಾರಾಟ ಮಾಡುತ್ತಿರುವ ಆರೋಪ ಹೊತ್ತಿರುವ ಮುಖ್ಯಗುರು ಶರಣಪ್ಪ ಬಿದನೂರ ಅವರನ್ನು ಸೇವೆಯಿಂದ ಹೊರಗಿಟ್ಟು ವಿಚಾರಣೆ ಮಾಡಲಾಗುವುದು. ಅಮಾನತು ಮಾಡಲು ಡಿಡಿಪಿಐ ಅವರಿಗೆ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದರು.