Advertisement

ಬೊಮ್ಮಾಯಿಗೆ ಯುಪಿ ಮಾದರಿ ಮೇಲೆ ಪ್ರೀತಿ: ಎಂ.ಬಿ. ಪಾಟೀಲ್‌

09:24 PM Sep 05, 2022 | Team Udayavani |

ಕೊಪ್ಪಳ: ಪ್ರಸ್ತುತ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದೇವೆ. ಬಿಜೆಪಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ನಮ್ಮ ಸಿಎಂಗೆ ಯುಪಿ ಮಾದರಿ ಮೇಲೆ ಮೋಹ ಬಂದಿದೆ. ಸರ್ವ ಜನಾಂಗದ ಶಾಂತಿಯ ತೋಟ ಇಲ್ಲ. ಸರ್ಕಾರದಲ್ಲಿ 40 ಪರ್ಸೆಂಟ್‌ ಕಮಿಷನ್‌ ನಡೆದಿದೆ. ಅಭಿವೃದ್ಧಿಯೂ ಇಲ್ಲ. ಈಗ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ. ಸಹಸ್ರಾರು ಸಂಖ್ಯೆಯ ಜನರ ತ್ಯಾಗ-ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ ಬಿಜೆಪಿಯವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿಲ್ಲ. 52 ವರ್ಷಗಳ ನಂತರ ಅವರು ಧ್ವಜ ಹಾರಿಸಿದ್ದಾರೆ. ಈಗ ಬಿಜೆಪಿ ತಿರಂಗಾ ಯಾತ್ರೆ ಮೂಲಕ ಜನರನ್ನು ಮರಳು ಮಾಡುತ್ತಿದೆ. ಕಾಂಗ್ರೆಸ್‌ ಏನು ಮಾಡಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ನಾವು ಆಹಾರ ಸ್ವಾವಲಂಬನೆ ಸಾಧಿಸಿದ್ದೇವೆ. 2 ಸಾವಿರ ಅಣೆಕಟ್ಟುಗಳು ನಿರ್ಮಿಸಿದ್ದು ಕಾಂಗ್ರೆಸ್‌ ಕಾಲಾವಧಿಯಲ್ಲಿ. 2014ರಲ್ಲಿ ಮೋದಿ ಕಾಲದಲ್ಲಿ ಡ್ಯಾಂ ನಿರ್ಮಾಣವಾದವಾ? ಪ್ರಾಥಮಿಕ ಶಾಲೆಯಿಂದ ಐಐಟಿಯಾಗಿರುವುದು ಕಾಂಗ್ರೆಸ್‌ ಪಕ್ಷದ ಅವಧಿ ಯಲ್ಲಿ, ಆಸ್ಪತ್ರೆ ಕಟ್ಟಿದ್ದೇವೆ. ಮೋದಿ ಮಾಡಿದ್ದೇನು ಎಂದರು.

ಕಾಂಗ್ರೆಸ್‌ನಲ್ಲಿ ಯಾವತ್ತೂ ಸಿಎಂ ಯಾರು ಎನ್ನುವುದನ್ನು ಘೋಷಣೆ ಮಾಡಿಲ್ಲ. ಶಾಸಕಾಂಗ ಪಕ್ಷದ ನಿರ್ಧಾರ ಮಾಡುತ್ತದೆ. ಬೊಮ್ಮಾಯಿ ಸರ್ಕಾರದಿಂದ ಯಾವ ಅಭಿವೃದ್ಧಿ ಕೆಲಸ ನಡೆದಿಲ್ಲ. ಬಿಜೆಪಿಗೆ ಮತ ಹಾಕಿದ ಶೇ.50 ಜನ ಕಾಂಗ್ರೆಸ್‌ ಬೆಂಬಲಿಸುತ್ತಿದ್ದಾರೆ. ಬಿಜೆಪಿಯ ಜಾತಿ, ಧರ್ಮ ಏನೂ ನಡೆಯಲ್ಲ. ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ ಎಂದರು

ಅವರು ಪ್ರಣಾಳಿಕೆಯಲ್ಲಿ ನೀಡಿದ್ದ 300ರಲ್ಲಿ 9 ಬೇಡಿಕೆ ಈಡೇರಿಸಿದ್ದಾರಷ್ಟೇ. ಸಾವರ್ಕರ್‌ ಜೈಲಿಗೆ ಹೋಗಿದ್ದರ ಬಗ್ಗೆ ವಾದಗಳಿವೆ, ತಪ್ಪೊಪ್ಪಿಗೆ ಬರೆದುಕೊಟ್ಟಿದ್ದು ಐತಿಹಾಸಿಕ ಸತ್ಯ. ಕನ್ನಡನಾಡಿನ ವೀರರ ಬಗ್ಗೆ ಏಕೆ ಯಾತ್ರೆ ಮಾಡುತ್ತಿಲ್ಲ. ಮುರುಘಾ ಮಠ ಪುರಾತನ ಐತಿಹಾಸಿಕ ಮಠವಾಗಿದೆ. ಅದಕ್ಕೆ ದೊಡ್ಡ ಕೊಡುಗೆಯಿದೆ. ಆದರೆ ಸರ್ಕಾರ ತನಿಖೆಯಲ್ಲಿ ಎಡವಿದೆ. ನಿಷ್ಪಕ್ಷಪಾತ ತನಿಖೆಯಾಗಬೇಕು. ತನಿಖೆಯಿಂದ ಸತ್ಯ ಹೊರಬರಬೇಕು. ಸ್ವಾಮೀಜಿಯವರು ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next