ಬೆಂಗಳೂರು: ಈ ಬಾರಿ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಲವ್ ಜಿಹಾದ್ ನಿಷೇಧ ಕಾಯಿದೆ ಜಾರಿಗೆ ತರಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ದಿಲ್ಲಿಯಲ್ಲಿ ನಡೆದ ಶ್ರದ್ಧಾ ಹತ್ಯೆ ಪ್ರಕರಣ ಇಡೀ ದೇಶವನ್ನೆ ಬೆಚ್ಚಿ ಬೀಳಿಸಿದೆ.ರಾಜ್ಯದಲ್ಲೂ ಲವ್ ಜಿಹಾದ್ ಪ್ರಕರಣಗಳು ಆಗಾಗ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕಾನೂನು ತರಲು ತಯಾರಿ ನಡೆಯುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ:ವಿಡಿಯೋ : ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲಿ ‘ಸಾಮಿ ಸಾಮಿ’ ಡ್ಯಾನ್ಸ್ ಮೂಲಕ ಮಿಂಚಿದ ಜಾಹ್ನವಿ ಕಪೂರ್
ಕಳೆದ ಬಾರಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಈ ವಿಧೇಯಕ ಜಾರಿಗೆ ತರಲು ಸಿದ್ಧತೆ ನಡೆದಿತ್ತು. ಕೊನೆಗೆ ಮತಾಂತರ ನಿಷೇಧ ಕಾಯಿದೆ ಮಂಡನೆಯಾಗಿತ್ತು.
ಸಾವಿರಾರು ಮಂದಿ ಯುವತಿಯರನ್ನು ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ಮಾಡಲಾಗುತ್ತಿದೆ ಎಂಬುದು ಬಿಜೆಪಿ ಆರೋಪ. ಇದಕ್ಕೆ ಹಲವಾರು ದಾಖಲೆಗಳನ್ನು ಬಿಜೆಪಿ ಈಗಾಗಲೇ ಸಂಗ್ರಹಿಸಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ಅಕ್ರಮ ಮತಾಂತರ ನಿಗ್ರಹ, ಲವ್ ಜಿಹಾದ್ ಕಾನೂನು ಜಾರಿಗೆ ತರಲಾಗಿದೆ. ಇದೇ ಮಾದರಿಯನ್ನು ರಾಜ್ಯ ಸರ್ಕಾರ ಅನುಸರಿಸಲಿದೆ ಎಂದು ಹೇಳಲಾಗುತ್ತಿದೆ.