Advertisement

ಬೊಮ್ಮಾಯಿ ಬಜೆಟ್ 2022: ಅಲ್ಪಸಂಖ್ಯಾತ ಸಮುದಾಯಕ್ಕೆ ವಿವಿಧ ಯೋಜನೆ ಘೋಷಿಸಿದ ಸಿಎಂ

02:19 PM Mar 04, 2022 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಿದರು. ಹಲವು ವರ್ಗಗಳಿಗೆ ಅನುದಾನ ಘೋಷಣೆ ಮಾಡಿರುವ ಸಿಎಂ ಬೊಮ್ಮಾಯಿ, ಅಲ್ಪಸಂಖ್ಯಾತ ಸಮುದಾಯಕ್ಕೂ ಬಜೆಟ್ ನಲ್ಲಿ ವಿವಿಧ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

Advertisement

ಪ್ರಮುಖ ಅಂಶಗಳು:

ಮುಸ್ಲಿಂ ಸಮುದಾಯಕ್ಕೆ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಘೋಷಣೆ

ಜತೆಗೆ ಪದವಿ ಪೂರ್ವ ತರಗತಿಯೂ ಪ್ರಾರಂಭ

ಸಿಬಿಎಸ್ಇ ಮಾನ್ಯತೆ ಪಡೆಯಲು 25 ಕೋಟಿ ರೂ ಅನುದಾನ

Advertisement

ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 50 ಕೋಟಿ ರೂ

ಜೈನ್, ಸಿಖ್, ಬೌದ್ಧ ಸಮುದಾಯಗಳ‌ ಅಭಿವೃದ್ಧಿಗೆ 50 ಕೋಟಿ ರೂ

ಇದನ್ನೂ ಓದಿ:Karnataka Budget: ಜನಸಾಮಾನ್ಯರಿಗೆ ಸಿಹಿ ಸುದ್ದಿ- ಈ ಬಾರಿ ಯಾವುದೇ ತೆರಿಗೆ ಹೆಚ್ಚಳ ಇಲ್ಲ

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಪ್ರತೀ ಜಿಲ್ಲೆಯ ಕನಿಷ್ಟ ಒಂದು ಶಾಲೆಯಲ್ಲಿ ಪಿಯುಸಿ ತರಗತಿಗಳು ಆರಂಭಕ್ಕೆ ಕ್ರಮ. ಇಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್, ವಿಜ್ಞಾನ ಪ್ರಯೋಗಾಲಯಗಳನ್ನು ಒದಗಿಸಲು ಕ್ರಮ. ಈ ಶಾಲೆಗಳನ್ನು ಎಪಿಜೆ ಅಬ್ದುಲ್ ಕಲಾಂ ಶಾಲೆಗಳೆಂದು ನಾಮಕರಣ ಮಾಡಿ ಸಿಬಿಎಸ್ಇ ಮಾನ್ಯತೆ.

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ 100 ವಿದ್ಯಾರ್ಥಿನಿಲಯಗಳಲ್ಲಿ ತಲಾ 25 ದಾಖಲಾತಿ ಸಂಖ್ಯೆ ಹೆಚ್ಚಳಕ್ಕೆ 10 ಕೋಟಿ ಅನುದಾನ

ವಕ್ಫ್ ಆಸ್ತಿಗಳ ರಕ್ಷಣೆಗೆ ಕ್ರಮ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ, ಡ್ರೋಣ್ ತಂತ್ರಜ್ಞಾನ ಬಳಸಿ ಸರ್ವೆ

ಶಾಸ್ತ್ರೀಯ ಭಾಷೆಗಳ ಉತ್ಕೃಷ್ಟ ಸಾಹಿತ್ಯಿಕ ಪುಸ್ತಕಗಳನ್ನು ಉರ್ದು ಭಾಷೆಗೆ ಅನುವಾದ. ಉರ್ದು ಅಕಾಡೆಮಿಯಿಂದ ಕ್ರಮ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ನೋಂದಾಯಿತ ಬೀದಿ ಬದಿ, ತಳ್ಳುಗಾಡಿ, ಹೂ ಹಣ್ಣು ತರಕಾರಿ ಮಾರಾಟಗಾರರು, ಆಟೋ ಚಾಲಕರಿಗೆ ಆರ್ಥಿಕ ಸಹಾಯಧನ.

ಅಲ್ಪಸಂಖ್ಯಾತ ಸಮುದಾಯದವರಿರುವ ಇರುವ ಕೊಳಚೆ ಪ್ರದೇಶಗಳ ಅಭಿವೃದ್ಧಿ

Advertisement

Udayavani is now on Telegram. Click here to join our channel and stay updated with the latest news.

Next