Advertisement

ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ವಿದ್ಯಾರ್ಥಿ ಸಮ್ಮೇಳನದಲ್ಲಿ ಬೊಮ್ಮಾಯಿ

02:32 AM Jun 02, 2022 | Team Udayavani |

ಮಂಗಳೂರು: ಮುಖ್ಯಮಂತ್ರಿ ಮಾರ್ಗದರ್ಶಿ ಆ್ಯಪ್‌ ಸ್ವರೂಪದಲ್ಲಿ ವಿದ್ಯಾರ್ಥಿಗಳಿಗೆ ನಾಗರಿಕ ಸೇವೆಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ತರಬೇತಿ ನೀಡಲು ಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಮೂಡುಬಿದಿರೆಯ ಆಳ್ವಾಸ್‌ ಕಾಲೇಜು ಆವರಣದಲ್ಲಿ ಬುಧವಾರ “ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ’ ವಿದ್ಯಾರ್ಥಿ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಈಗಾಗಲೇ ಸಿಇಟಿ, ನೀಟ್‌ನಂತಹ ಪರೀಕ್ಷೆಗಳ ತರಬೇತಿಗೆ “ಮುಖ್ಯಮಂತ್ರಿ ಮಾರ್ಗದರ್ಶಿ’ ಎಂಬ ಆ್ಯಪ್‌ ಇದೆ. ಇದೇ
ರೀತಿ ಸಿವಿಲ್‌ ಸರ್ವಿಸ್‌ ಪರೀಕ್ಷೆಗೂ ತರಬೇತಿ ನೀಡಲು ಯೋಜನೆ ರೂಪಿಸ ಲಾಗುವುದು ಎಂದು ಸಮ್ಮೇಳನದ ವೇಳೆ
ವಿದ್ಯಾರ್ಥಿನಿಯೊಬ್ಬರ ಬೇಡಿಕೆಗೆ ಉತ್ತರಿಸಿದರು.

ರೈತ ಮಕ್ಕಳಿಗೂ ಬೆಂಬಲ
ರೈತ ಮಣ್ಣು, ಬಿಸಿಲು, ಕಲ್ಲು, ಮಳೆ, ಗಾಳಿ ಚಳಿಯೆನ್ನದೆ ದುಡಿಯುತ್ತಾನೆ. ದೇವರು ಕಾರ್ಮಿಕರ ಶ್ರಮದಲ್ಲಿದ್ದಾನೆ, ರೈತರ ಬೆವರಿನಲ್ಲಿದ್ದಾನೆ ಎಂದು ಕವಿ ರವೀಂದ್ರನಾಥ ಠಾಗೋರರು ಹೇಳಿದ್ದಾರೆ. ಇಂತಹ ರೈತರ ಬಗ್ಗೆ ಗೌರವ ಇರಬೇಕು. ಬೆಲೆ ಕೊಡಬೇಕು. ರೈತರ ಮಕ್ಕಳೂ ಉನ್ನತ ಸಾಧನೆ ಮಾಡಬೇಕು. ಆರ್ಥಿಕವಾಗಿ ಸಶಕ್ತರಾಗಬೇಕು ಎಂಬ ಉದ್ದೇಶದಿಂದ ಅ ಧಿಕಾರ ವಹಿಸಿ ಕೊಂಡ ನಾಲ್ಕೇ ಗಂಟೆಯಲ್ಲಿ ಈ ಯೋಜ ನೆಯನ್ನು ಘೋಷಿಸಲಾಯಿತು ಎಂದು ಸಿಎಂ ವಿವರಿಸಿದರು.

4 ಲಕ್ಷ ಮಹಿಳೆಯರಿಗೆ ಉದ್ಯೋಗ
ದೇಶದ ಒಟ್ಟು ಆದಾಯಕ್ಕೆ ಶೇ. 30ರಷ್ಟು ಜನರು ಮಾತ್ರ ಕೊಡುಗೆ ನೀಡುತ್ತಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು, ಅದರಲ್ಲೂ ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬೇಕು. ಇದಕ್ಕಾಗಿ 4 ಲಕ್ಷ ಮಹಿಳೆ ಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

Advertisement

ಶಾಸಕ ಉಮಾನಾಥ ಕೋಟ್ಯಾನ್‌ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಗೋವಿಂದ ಎಂ. ಕಾರಜೋಳ, ಆರ್‌.
ಅಶೋಕ್‌, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್‌ ಕುಮಾರ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ| ಎಂ. ಮೋಹನ ಆಳ್ವ, ಶಾಸಕರಾದ ವೇದವ್ಯಾಸ ಕಾಮತ್‌, ರಾಜೇಶ್‌ ನಾಯ್ಕ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಕರಾವಳಿ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಸಂತೋಷ್‌ ರೈ ಬೋಳಿಯಾರು, ಮಂಗಳೂರು ಮೇಯರ್‌ ಪ್ರೇಮಾನಂದ ಶೆಟ್ಟಿ, ಮೂಡುಬಿದಿರೆ ಪುರಸಭೆ ಅಧ್ಯಕ್ಷ ಪ್ರಸಾದ್‌ ಕುಮಾರ್‌, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲಸಾರ್‌, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಉಪಸ್ಥಿತರಿದ್ದರು. ಜಿ.ಪಂ. ಸಿಇಒ ಡಾ| ಕುಮಾರ್‌ ಸ್ವಾಗತಿ
ಸಿದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್‌ ನಿರೂಪಿಸಿದರು.

12 ಸಾವಿರ ವಿದ್ಯಾರ್ಥಿಗಳಿಗೆ ಕಾರ್ಯ ಕ್ರಮದಲ್ಲಿ ಅವಕಾಶ ನೀಡಲಾಗಿತ್ತು. ವೇದಿಕೆಗೆ ನುಗ್ಗಲೆತ್ನಿಸಿದ ವಿದ್ಯಾರ್ಥಿ
ಸಿಎಂ ಕಾರ್ಯಕ್ರಮದ ವೇಳೆ ತನಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದು ವಿದ್ಯಾರ್ಥಿಯೊಬ್ಬ ಪೊಲೀಸ್‌ ರಕ್ಷಣೆ ಭೇದಿಸಿ ವೇದಿಕೆಗೆ ನುಗ್ಗಲು ಯತ್ನಿಸಿದ ಘಟನೆಯೂ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ಯಾರ್ಥಿಗಳು ಯಾರೂ ರೈತರಾಗಲು ಅಸಕ್ತಿ ತೋರುತ್ತಿಲ್ಲ; ಇದು ಸರಿಯಲ್ಲ ಎನ್ನುವುದಾಗಿ ಆತ ಹೇಳಬಯಸಿದ್ದ.

ಮೊದಲ ಬಾರಿಗೆ ವಿದ್ಯಾನಿಧಿ ಸಮ್ಮೇಳನ: ಸುನಿಲ್‌
ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ವಿದ್ಯಾನಿಧಿ ಸಮಾವೇಶವನ್ನು ಮೂಡುಬಿದಿರೆಯಲ್ಲಿ ಏರ್ಪಡಿಸ ಲಾಗಿದೆ. ದ.ಕ. ಜಿಲ್ಲೆಯಲ್ಲಿ 28,966 ವಿದ್ಯಾರ್ಥಿಗಳು ಇದುವರೆಗೆ ಯೋಜನೆಗೆ ನೋಂದಾಯಿಸಿದ್ದಾರೆ. 7.87 ಕೋಟಿ ರೂ. ಮೊತ್ತವನ್ನು 21,823 ವಿದ್ಯಾರ್ಥಿಗಳ ಖಾತೆಗೆ ವರ್ಗಾಯಿಸಲಾಗಿದೆ. ಫ‌ಲಾನುಭವಿ ಗಳನ್ನೇ ನೇರವಾಗಿ ಕರೆದು ಸಮ್ಮೇಳನ ಹಾಗೂ ಸಂವಾದ ನಡೆಸುವ ಮೂಲಕ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಯತ್ನ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ಸಿಎಂ ಜತೆ ವಿದ್ಯಾನಿಧಿ ವಿದ್ಯಾರ್ಥಿ ಸಂವಾದ
ಪೃಥ್ವಿ ಎಚ್‌.ಎಸ್‌., ಕೆಪಿಟಿ ಪಾಲಿಟೆಕ್ನಿಕ್‌ ವಿದ್ಯಾರ್ಥಿ
ತಂದೆಗೆ ಬೆನ್ನುನೋವು ಇದೆ, ತೆಂಗಿನ ತೋಟದ ಕೆಲಸ ಮಾಡಲಾಗುತ್ತಿರಲಿಲ್ಲ. ಹಣದ ತೊಂದರೆಯೂ ಇತ್ತು. ನಮ್ಮನ್ನು ಗುರುತಿಸಿ 2,500 ರೂ. ಕೊಟ್ಟಿದ್ದರಿಂದ ಹಳೆ ಬೈಕ್‌ಗೆ ಒಂದು ಕ್ಯಾರಿಯರ್‌ ಅಳವಡಿಸಿ ತಂದೆಗೆ ತೆಂಗಿನಕಾಯಿ ಸಾಗಿಸಲು ನೆರವಾದೆ. ಇದು ತಂದೆಗೂ ಖುಷಿಕೊಟ್ಟಿದೆ.
ಸಿಎಂ: ಒಳ್ಳೆಯದು, ಅದರೆ ಈ ಮೊತ್ತವನ್ನು ವಿದ್ಯಾಭ್ಯಾಸ ಕ್ಕೆಂದು ನೀಡಿದ್ದೇವೆ. ನೀವು ತಂದೆಗೆ ನೆರವಾಗಿದ್ದೀರಿ, ಮುಂದೆ ವಿದ್ಯಾರ್ಜನೆ ಮೂಲಕ ಕುಟುಂಬಕ್ಕೆ ನೆರವಾಗಬೇಕು.

 ಲೋಹಿತ್‌, ಜಿಎಫ್‌ಜಿಸಿ ಮಂಗಳೂರು
ವಿದ್ಯಾನಿಧಿ ಉತ್ತಮ ಯೋಜನೆ ಆದರೆ ಹಣದ ಮೊತ್ತ ಇನ್ನಷ್ಟು ಜಾಸ್ತಿ ಇದ್ದರೆ ಒಳ್ಳೆಯದು.
ಸಿಎಂ: ಮೊತ್ತ ಚಿಕ್ಕದಾಗಿರಬಹುದು, ಆದರೆ ಇದರಿಂದ ಸಿಗುವ ಪ್ರೇರಣೆ ದೊಡ್ಡದು. ಈ ವರ್ಷವಷ್ಟೇ ಯೋಜನೆ ಆರಂಭವಾಗಿದೆ. ಮುಂದೆ ನೋಡೋಣ.

ಭಾವನಾ, ಎಕ್ಸಲೆಂಟ್‌ ಪಿಯು ಕಾಲೇಜ್‌
ನಾನು ಮಂಡ್ಯದವಳು. ಯೋಜನೆಯು ನಮ್ಮ ಕುಟುಂಬಕ್ಕೆ ಭರವಸೆಯ ಬೆಳಕಾಗಿದೆ. ತಂದೆಗೆ ನಾನು ವೈದ್ಯಳಾಗ ಬೇಕು ಎಂಬ ಕನಸು. ಅದಕ್ಕೆ ಈ ಮೊತ್ತ ನೆರವಾಗುತ್ತದೆ.
ಸಿಎಂ: ಒಳ್ಳೆಯ ಸಲಹೆ. ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿ ಗಳ ಸಾಮರ್ಥಯ ವರ್ಧನೆ ಹಾಗೂ ತರಬೇತಿಗಾಗಿ ನಾವು ಯೋಜನೆಯೊಂದನ್ನು ರೂಪಿಸುತ್ತೇವೆ.

ಹಿತಾಶ್ರೀ, ಎಕ್ಸಲೆಂಟ್‌ ಪಿಯು ಕಾಲೇಜ್‌
ಎರಡು ತಿಂಗಳ ಹಿಂದೆಯಷ್ಟೇ ನನಗೆ ಈ ಮೊತ್ತ ಸಿಕ್ಕಿದೆ. ಪಠ್ಯಪುಸ್ತಕ ಖರೀದಿಗೆ ಇದನ್ನು ಬಳಕೆ ಮಾಡಿದ್ದೇನೆ.
ಸಿಎಂ: ಸಿಇಟಿ ನೀಟ್‌ ಶುಲ್ಕವನ್ನು ಭರಿಸುವ ಮೂಲಕ ಮುಂದೆ ರೈತರ ಮಕ್ಕಳಿಗೆ ನೆರವಾಗುವ ಯೋಜನೆ ಇದೆ.

ಅಕ್ಷತಾ ಎಂ., ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜ್‌
ನನಗೆ ಇದು ಮೊದಲ ಸ್ಕಾಲರ್‌ಶಿಪ್‌. 11,000 ರೂ. ಬಂದಿದೆ, ಮನೆಯಿಂದ ದಿನ 60 ಕಿ.ಮೀ¬ ಸಂಚರಿಸ ಬೇಕಾಗುತ್ತದೆ. ಮನೆಯಲ್ಲಿ ಕುಟುಂಬದವರಿಗೆ ಆರೋಗ್ಯ ಸಮಸ್ಯೆ ಇರುತ್ತದೆ, ಆಗ ತಂದೆಯಲ್ಲಿ ಹಣ ಕೇಳಲಾಗುವುದಿಲ್ಲ, ಹಾಗಾಗಿ ಈ ಮೊತ್ತ ಪಿಜಿಗೆ ಬಳಕೆಯಾಗುತ್ತದೆ.

ಮಂಜುನಾಥ್‌, ಕೆಪಿಟಿ ಮಂಗಳೂರು
ನನ್ನ ತಂದೆ ಕಟ್ಟಡ ಕಾರ್ಮಿಕ, ಮೊದಲು ಈ ಮೊತ್ತ ಸಣ್ಣ ಎನಿಸಿತ್ತು. ಆದರೆ ತಮ್ಮನ ವ್ಯಾಸಂಗದ ಶುಲ್ಕ ತುಂಬುವುದಕ್ಕೆ ಕಷ್ಟವಾಗಿತ್ತು. ಈ ಮೊತ್ತ ನೆರವಾಯಿತು.

ಶರಣ್ಯಾ, ಜಿಎಫ್‌ಜಿಸಿ ಮಂಗಳೂರು
ನನ್ನ ತಂದೆಗೆ ಕೋವಿಡ್‌ ಸಮಯದಲ್ಲಿ ಆರ್ಥಿಕ ಸಂಕಷ್ಟ ಇತ್ತು. ಈ ಮೊತ್ತದಿಂದ ಕಾಲೇಜು ಶುಲ್ಕ, ಸ್ಟೇಶನರಿ ಖರೀದಿಸಲು ನೆರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next