ಹೊಸದಿಲ್ಲಿ/ಮುಂಬಯಿ: ಬಾಂಬೆ ಷೇರು ಪೇಟೆಯಲ್ಲಿ ಸೂಚ್ಯಂಕ ಬುಧವಾರ ಅಲ್ಪ ಇಳಿಕೆಯ ದಾರಿ ಹಿಡಿದಿತ್ತು.
ಉಕ್ರೇನ್ ಮತ್ತು ರಷ್ಯಾ ಸಂಘ ರ್ಷದಿಂದಾಗಿ ದಿನದ ಆರಂಭದಲ್ಲಿ ಸೂಚ್ಯಂಕ 300 ಪಾಯಿಂಟ್ಸ್‌ಗಿಂತ ಏರಿಕೆ ದಾಖ ಲಿಸಿದ್ದರೂ ದಿನಾಂತ್ಯಕ್ಕೆ 68.62 ಪಾಯಿಂಟ್ಸ್‌ಗೆ ಕೊನೆಗೊಂಡು 57, 232.06ರಲ್ಲಿ ಸ್ಥಿರವಾಯಿತು.
ನಿಫ್ಟಿ ಸೂಚ್ಯಂಕ ಕೂಡ 28.95 ಪಾಯಿಂಟ್ಸ್ ಇಳಿಕೆ ಕಂಡು, 17,063.25ರಲ್ಲಿ ಮುಕ್ತಾಯವಾ ಯಿತು. ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾ ವಿರುದ್ಧ ಹೇರಿದ ನಿರ್ಬಂಧದಿಂದಾಗಿ ಪುತಿನ್ ಅವರು ರಾಜತಾಂತ್ರಿಕ ಮಾರ್ಗದ ಮೂಲಕ ಮಾತು ಕತೆಗೆ ಅವಕಾಶ ಇದೆ ಎಂದು ಹೇಳಿದ್ದು ಏಷ್ಯಾ ರಾಷ್ಟ್ರಗಳಲ್ಲಿನ ಇತರ ಷೇರು ಪೇಟೆಯಲ್ಲಿ ತೃಪ್ತಿದಾಯಕ ಎನ್ನಬಹುದಾದ ವಹಿವಾಟು ಕಂಡು ಬಂದಿತು. ಅದರ ಪ್ರಭಾವ ಬಿಎಸ್‌ಇ ಮೇಲೆ ಕೂಡ ಆಗಿದೆ.
ಚಿನ್ನ ಇಳಿಕೆ: ಹೊಸದಿಲ್ಲಿ ಚಿನಿವಾರ ಪೇಟೆ ಯಲ್ಲಿ ಪ್ರತೀ ಹತ್ತು ಗ್ರಾಂ ಚಿನ್ನಕ್ಕೆ 126 ರೂ. ಇಳಿಕೆಯಾಗಿ 49,960 ರೂ.ಗೆ ಮುಕ್ತಾಯ ವಾಗಿದೆ. ಪ್ರತೀ ಕೆ.ಜಿ .ಬೆಳ್ಳಿಯ ಬೆಲೆ ಪ್ರತೀ ಕೆ.ಜಿ.ಗೆ 63,939 ರೂ. ಆಗಿತ್ತು.
ಚೇತರಿಕೆ: ಅಮೆರಿಕದ ಡಾಲರ್ ಎದುರು ಮಂಗಳವಾರ 29 ಪೈಸೆ ಕುಸಿತ ಅನುಭವಿ ಸಿದ್ದ ರೂಪಾಯಿ ಬುಧವಾರ 25 ಪೈಸೆ ಏರಿಕೆ ಯಾಗಿತ್ತು. ದಿನಾಂತ್ಯಕ್ಕೆ 74.59 ರೂ.ಗೆ ಅಂತ್ಯ ವಾಗಿದೆ. ಇದರ ಜತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಶೇ. 0.90 ಇಳಿಕೆಯಾಗಿದೆ. ಅಂದರೆ ಪ್ರತೀ ಬ್ಯಾರೆಲ್‌ಗೆ 95.97 ಡಾಲರ್‌ಗೆ ಇಳಿಕೆಯಾಗಿದೆ.