ಮುಂಬಯಿ : ವಹಿವಾಟುದಾರರು ಮತ್ತು ಹೂಡಿಕೆದಾರರು ಲಾಭ ನಗದೀಕರಣಕ್ಕೆ ಮುಂದಾದ ಪ್ರಯುಕ್ತ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 119 ಅಂಕಗಳ ನಷ್ಟದೊಂದಿಗೆ 26,759.23 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 30 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 8,243.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ 1,512 ಶೇರುಗಳು ಹಿನ್ನಡೆಗೆ ಗುರಿಯಾದವು; 1,202 ಶೇರುಗಳು ಮುನ್ನಡೆ ಕಂಡವು. ನಿನ್ನೆಯಷ್ಟೇ ಸೆನ್ಸೆಕ್ಸ್ 245 ಅಂಕಗಳ ಏರಿಕೆಯನ್ನು ದಾಖಲಿಸಿತ್ತು.
ಐರೋಪ್ಯ ಶೇರು ಮಾರುಕಟ್ಟೆಗಳು ಇಂದು ಕೆಳಮಟ್ಟದಲ್ಲಿ ಆರಂಭಗೊಂಡದ್ದೇ ಭಾರತೀಯ ಶೇರು ಮಾರುಕಟ್ಟೆಗಳ ಮೇಲೆ ದುಷ್ಪರಿಣಾ ಬೀರಲು ಕಾರಣವಾಯಿತು.
ಇಂದಿನ ವಹಿವಾಟಿನಲ್ಲಿ ಓಎನ್‌ಜಿಸಿ, ಏಶ್ಯನ್ ಪೇಂಟ್ಸ್ , ಡಾ. ರೆಡ್ಡಿ ಲ್ಯಾಬೋರೇಟರಿ ಶೇರುಗಳು ಉತ್ತಮ ಬೇಡಿಕೆಯನ್ನು ಕಂಡವು. ಎಚ್ ಡಿ ಎಫ್ ಸಿ ಬ್ಯಾಂಕ್, ಸಿಪ್ಲಾ, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಗೇಲ್, ಟಾಟಾ ಸ್ಟೀಲ್, ಎಚ್‌ಯುಎಲ್, ಲೂಪಿನ್, ಹೀರೋ ಮೋಟೋ ಕಾರ್ಪ್ ಇವುಗಳನ್ನು ಅನುಸರಿಸಿದವು.