Advertisement
ಕೆಲವು ತಿಂಗಳುಗಳಿಂದ ದಾಪುಗಾಲಿಕ್ಕುತ್ತಿರುವ ಷೇರು ಬಜಾರಿನ ಈ ನಡೆ ಅಚ್ಚರಿಯನ್ನು ತಂದಿದೆ. ಒಂದೆಡೆ ಕೊರೊನಾದ ಭಯದಿಂದ ಸಂಪೂರ್ಣ ಮುಕ್ತಿಯೇ ಸಿಗದೆ, ಮುಂದಿನ ಅಲೆಯ ಭೀತಿಯಿಂದ ಒದ್ದಾಡುತ್ತಿರುವ ವಿಶ್ವದ ಆರ್ಥಿಕತೆಯಾದರೆ ಇನ್ನೊಂದೆಡೆ ಭರ್ಜರಿ ದಾಖಲೆ ಮಾಡಿ ಓಡುತ್ತಿರುವ ಬಾಂಬೆ ಷೇರುಪೇಟೆ ಸೂಚ್ಯಂಕ. ಈ ವಿಪರ್ಯಾಸಕ್ಕೆ ಸಮಾಧಾನಕರವಾದ ಕಾರಣವೇನೆಂಬುದು ಹಲವರ ಕುತೂಹಲಕ್ಕೆ ಕಾರಣವಾಗಿದೆ.
Related Articles
Advertisement
ಜಾಗತಿಕ ಮಟ್ಟದಲ್ಲಿ ಪ್ರಗತಿಶೀಲ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿ ಭಾರತ ಇಂದಿಗೂ ಇದೆ. ಬೇರೆ ಪ್ರಗತಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ಕೊರೊನಾ ನಿಯಂತ್ರಣ, ಆರ್ಥಿಕ ಉತ್ತೇಜನ ಇತ್ಯಾದಿಗಳು ಬಹಳಷ್ಟು ಚೆನ್ನಾಗಿವೆ. ಸ್ವಾಭಾವಿಕ ವಾಗಿ ಅಂತಹ ದುಡ್ಡೆಲ್ಲವೂ ಭಾರತದ ಷೇರು ಮಾರುಕಟ್ಟೆಯನ್ನು ಅರಸುತ್ತಾ ಬರುವುದರಲ್ಲಿ ಅಚ್ಚರಿಯೇನಿಲ್ಲ.
ಉತ್ತೇಜನದಾಯಕ ಬೆಳವಣಿಗೆ:
ಕೊರೊನಾ ಹಾವಳಿಯ ಬಳಿಕ ಇತ್ತೀಚೆಗೆ ದಾಖಲೆಯಾದ ಶೇ.20 ಪ್ರಗತಿ ದರ, ಉತ್ಪಾದನ ವಲಯದ ಆಶಾದಾಯಕ ಪಿಎಂಐ ಸೂಚ್ಯಂಕ, ಲಸಿಕೆ ನೀಡುವಿಕೆಯಲ್ಲಿ ತುಸು ನಿಧಾನವಾಗಿಯಾದರೂ ಸಾಧಿಸುತ್ತಿರುವ ಪ್ರಗತಿ, ವಿದೇಶೀ ವಿನಿಮಯ ದಾಸ್ತಾನಿನ ದಾಖಲೆ ಮೊತ್ತ, ಇತ್ಯಾದಿಗಳು ಭಾರತದ ಮಾರುಕಟ್ಟೆಗೆ ಉತ್ತೇಜನದಾಯಕವಾಗಿಯೇ ನಡೆಯುತ್ತಿದೆ. ಅದಲ್ಲದೆ ಇತ್ತೀಚೆಗೆ ಪ್ರಕಟವಾದ ಸರಕಾರಿ ಸೊತ್ತುಗಳ ನಗದೀಕರಣ ಯೋಜನೆಯು ಹಲವರ ಕಣ್ಣು ಕೆಂಪಗಾಗಿಸಿದರೂ ಷೇರುಗಲಿಗಳ ಮನಸ್ಸನ್ನು ತಂಪಾಗಿಸಿದ್ದು ಸುಳ್ಳಲ್ಲ. ಇವೆಲ್ಲಾ ಒಟ್ಟಾರೆ ಕಾರಣಗಳಿಂದ ಭಾರತೀಯ ಷೇರು ಮಾರುಕಟ್ಟೆ ಕೊರೊನಾದ ಮೂರನೇ ಅಲೆಯ ಸಂಭಾವ್ಯವನ್ನೂ ಅವಗಣಿಸಿ ಸದÂಕ್ಕೆ ಗೂಳಿ ನರ್ತನ ನೀಡುತ್ತಿದೆ. ಇದು ಷೇರುಗಟ್ಟೆಯ ಭಾಷೆಯನ್ನು ಅರಿತವರಿಗೆ ಅಚ್ಚರಿಯೇನೂ ಅಲ್ಲ.
ಷೇರುಗಟ್ಟೆಯ ಭಾಷೆಯನ್ನು ಅರಿತವರು ಈಗ ಜಾಗರೂಕರಾಗ ತೊಡಗುತ್ತಾರೆ. ಮಿತಿಮೀರಿ ಏರಿದ ಬೆಲೆ ಇಳಿಯಲೇ ಬೇಕು. ಬಾಂಬೆ ಶೇರು ಬಾಜಾರಿನಲ್ಲಿ ಒಂದು ಗಾದೆ ಪ್ರಚಲಿತವಾಗಿದೆ. ಟ್ಯಾಕ್ಸಿ ಚಾಲಕರು ನಿಮ್ಮ ಬಳಿ ಷೇರುಗಟ್ಟೆಯ ಚರ್ಚೆ ಮಾಡತೊಡಗಿದರು ಎಂದರೆ ಇರುವ ಹೂಡಿಕೆ ಯನ್ನು ಮಾರಿ ಬಚಾವಾಗುವ ಸಮಯ ಬಂದಿದೆ ಎಂದರ್ಥ. ಸೂಕ್ಷ್ಮವಾಗಿ ಗಮನಿಸಿ ನೋಡಿ ಹಾಗೂ ನಿಮ್ಮ ಜಾಗರೂಕತೆಯಲ್ಲಿ ನೀವಿರಿ. ಮಾರುಕಟ್ಟೆಯ ನಡೆಯನ್ನು ನಿಖರವಾಗಿ ಭವಿಷ್ಯ ನುಡಿಯುವ ಜೋತಿಷಿ ಯಾರೂ ಇಲ್ಲ. ಕೆಟ್ಟು ನಿಂತ ಗಡಿಯಾರವೂ ದಿನಕ್ಕೆರಡು ಬಾರಿ ನಿಖರವಾದ ಸಮಯ ಹೇಳಬಲ್ಲುದು !!
25 ವರ್ಷಗಳಲ್ಲಿ 30,000; ಕೇವಲ 6 ವರ್ಷಗಳಲ್ಲಿ ಉಳಿದ 30 ಸಾವಿರ!:
1980ರ ದಶಕದಲ್ಲೇ ಷೇರುಪೇಟೆಯ ಯುಗ ಆರಂಭವಾಗಿದ್ದರೂ, 1,000 ಅಂಕಕ್ಕೆ ತಲುಪಿದ್ದು, 1990ರಲ್ಲಿ. ಹೀಗಾಗಿ, ಇದನ್ನೇ ಆರಂಭಿಕ ವರ್ಷವೆಂದು ಕರೆಯಲಾಗುತ್ತದೆ. ಇಲ್ಲಿಂದ ಹಲವಾರು ಏರಿಳಿತಗಳನ್ನು ದಾಟಿ ಬಂದಿದೆ ಬಾಂಬೆ ಷೇರುಪೇಟೆ. ವಿಶೇಷವೆಂದರೆ, 1990ರಲ್ಲಿ 1 ಸಾವಿರ ಅಂಕ ತಲುಪಿದ್ದ ಷೇರುಪೇಟೆ 10 ಸಾವಿರ ಅಂಕಕ್ಕೆ ಬರಲು 16 ವರ್ಷ ಕಾಯಬೇಕಾಯಿತು. 2008ರಲ್ಲೇ 20 ಸಾವಿರ ತಲುಪಿ, 2014ಕ್ಕೆ 25 ಸಾವಿರಕ್ಕೆ ಬಂದಿತು. 2015ರಲ್ಲೇ 30 ಸಾವಿರ ತಲುಪಿತು. ಆದರೆ 2015ರಿಂದ ಇಲ್ಲಿವರೆಗೆ ಅಂದರೆ 2021ರ ಹೊತ್ತಿಗೆ ಸೆನ್ಸೆಕ್ಸ್ 60ರ ಗಡಿ ದಾಟಿದೆ. ಕೊರೊನಾ ಅಡ್ಡಿಯನ್ನು ದಾಟಿ 60 ಸಾವಿರಕ್ಕೆ ಬಂದಿರುವುದು ಅಚ್ಚರಿಯೇ ಸರಿ.
ಸೆನ್ಸೆಕ್ಸ್‌ಗೆ ಹೊಡೆತ:
1992 ಹರ್ಷದ್ ಮೆಹ್ತಾ ಹಗರಣ
1999 ಕಾರ್ಗಿಲ್ ಯುದ್ಧ
2001 ಸಂಸತ್ ಭವನಕ್ಕೆ ಉಗ್ರ ದಾಳಿ ಮತ್ತು ಅಮೆರಿಕದಲ್ಲಿ ಡಬ್ಲ್ಯುಟಿಸಿ ಮೇಲೆ ದಾಳಿ
2007-2008 ವಿಶ್ವ ಆರ್ಥಿಕ ಬಿಕ್ಕಟ್ಟು
2009 ಸತ್ಯಂ ಹಗರಣ
2016 ನೋಟು ಅಮಾನ್ಯ
2018 ಪಿಎನ್‌ಬಿ ಹಗರಣ
–ಜಯದೇವ ಪ್ರಸಾದ ಮೊಳೆಯಾರ