Advertisement

ಮುಂಬಯಿ ಶೇರು ಪೇಟೆಯಲ್ಲಿ ಎಚ್ಚರಿಕೆಯ ನಡೆ: 52 ಅಂಕ ಕುಸಿತ

05:26 PM Jan 17, 2017 | udayavani editorial |

ಮುಂಬಯಿ : ಭಾರತದ ಜಿಡಿಪಿ ಅಂದಾಜನ್ನು ಐಎಂಎಫ್ ಕಡಿತಗೊಳಿಸಿರುವುದು ಹಾಗೂ ರಿಲಯನ್ಸ್‌ ತ್ತೈಮಾಸಿಕ ಫ‌ಲಿತಾಂಶ, ಶೇ.3.6ರ ನಿವ್ವಳ ಲಾಭವನ್ನು ಗಳಿಸಿರುವ ಹೊರತಾಗಿಯೂ, ನಿರಾಶೆ ಮೂಡಿಸಿರುವುದು – ಇಂದು ಮಂಗಳವಾರದ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌  ಕುಸಿತಕ್ಕೆ ಕಾರಣವಾಗಿದೆ.

Advertisement

ಇಂದು ಮಂಗಳವಾರದ ವಹಿವಾಟನ್ನು ಸೆನ್ಸೆಕ್ಸ್‌ 52.51 ಅಂಕಗಳ ನಷ್ಟದೊಂದಿಗೆ 27,235.66 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 14.80 ಅಂಕಗಳ ನಷ್ಟದೊಂದಿಗೆ 8,398 ಮಟ್ಟದಲ್ಲಿ ಕೊನೆಗೊಳಿಸಿತು.

ಇಂದಿನ ವಹಿವಾಟಿನಲ್ಲಿ ಕೋಲ್‌ ಇಂಡಿಯಾ ಶೇ.2.14, ಓಎನ್‌ಜಿಸಿ ಶೇ.1.74, ಅದಾನಿ ಪೋರ್ಟ್‌ ಶೇ.1.68 ಮತ್ತು ಎಚ್‌ ಡಿ ಎಫ್ ಸಿ ಶೇ.1.02ರಷ್ಟು ಹಿನ್ನಡೆಗೆ ಗುರಿಯಾದವು. ಇದೇ ವೇಳೆ ಎನ್‌ಟಿಪಿಸಿ ಶೇ.3.08, ಏಶ್ಯನ್‌ ಪೇಂಟ್ಸ್‌ ಶೇ.2.72, ಎಕ್ಸಿಸ್‌ ಬ್ಯಾಂಕ್‌ ಶೇ.1.98, ಎಚ್‌ಯುಎಲ್‌ ಶೇ.1.52 ಮತ್ತು ಐಟಿಸಿ ಶೇ.1.35ರಷ್ಟು ಏರಿದವು. 

Advertisement

Udayavani is now on Telegram. Click here to join our channel and stay updated with the latest news.

Next