Advertisement

ಶೇರು ಪೇಟೆಯಲ್ಲಿ ಮತ್ತೆ ತಲ್ಲಣ ; ಸೆನ್ಸೆಕ್ಸ್ 2500 ಅಂಕ, ನಿಫ್ಟಿ 722 ಅಂಕ ಕುಸಿತ

10:26 AM Mar 13, 2020 | Hari Prasad |

ಮುಂಬಯಿ: ಎರಡು ದಿನಗಳ ಹಿಂದೆ ಭಾರೀ ಕುಸಿತಕ್ಕೊಳಗಾಗಿದ್ದ ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಇಂದು ಮತ್ತೆ ತಲ್ಲಣ ಕಾಣಿಸಿಕೊಂಡಿದೆ. ಇಂದು ಮುಂಜಾನೆ 11 ಗಂಟೆಗೆ ಸೆನ್ಸೆಕ್ಸ್ 2520.10 ಅಂಕಗಳಷ್ಟು ಕುಸಿತ ಕಂಡಿತು ಮತ್ತು ನಿಫ್ಟಿ 722.5 ಅಂಕಗಳಷ್ಟು ಕುಸಿತವನ್ನು ದಾಖಲಿಸಿತು.

Advertisement

ಎರಡು ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ನಿಫ್ಟಿ ಸೂಚ್ಯಂಕವು 9,800 ಅಂಕಗಳಷ್ಟು ಕುಸಿತವನ್ನು ದಾಖಲಿಸಿತು. 2018ರ ಮಾರ್ಚ್ 26ರ ಬಳಿಕ ನಿಫ್ಟಿ 10,000 ಅಂಕಗಳಿಗಿಂತ ಕೆಳಮಟ್ಟವನ್ನು ದಾಖಲಿಸುತ್ತಿರುವುದು ಇದೇ ಮೊದಲಾಗಿದೆ.

ಡಾಲರ್ ಎದುರು 82 ಪೈಸೆ ಕುಸಿತ ಕಂಡ ರೂಪಾಯಿ ದಿನದ ಪ್ರಾರಂಭದ ವ್ಯವಹಾರದಲ್ಲಿ 74.50 ರೂಪಾಯಿಗಳಿಗೆ ನಿಂತಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ವೈರಸ್ ಅನ್ನು ವಿಶ್ವವ್ಯಾಪಿ ಎಂದು ಘೋಷಿಸಿದ್ದು ಹಾಗೂ ಯುರೋಪಿನ ಪ್ರವಾಸಿಗರಿಗೆ 30 ದಿನಗಳ ನಿರ್ಬಂಧವನ್ನು ಅಮೆರಿಕಾ ವಿಧಿಸಿದ್ದು ಶೇರು ಮಾರುಕಟ್ಟೆ ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿತು.

Advertisement

Udayavani is now on Telegram. Click here to join our channel and stay updated with the latest news.

Next