Advertisement

ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಶಿಕ್ಷಣ ಸಮಿತಿಯಿಂದ ಸಾಧಕರಿಗೆ ಸಮ್ಮಾನ

04:12 PM Jul 28, 2017 | Team Udayavani |

ನವಿಮುಂಬಯಿ: ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಶಿಕ್ಷಣ ಉಪ ಸಮಿತಿಯ ವತಿಯಿಂದ ವಾರ್ಷಿಕ ಶೈಕ್ಷಣಿಕ ಸಹಾಯಧನ ವಿತರಣೆ ಸಮಾರಂಭವು ಜು. 23ರಂದು ಪೂರ್ವಾಹ್ನದಿಂದ ಜೂಯಿನಗರ ಪಶ್ಚಿಮದ ಗಾಂವೆªàವಿ ಚೌಕ್‌ ಸಮೀಪದ ಪ್ಲಾಟ್‌ ನಂಬರ್‌-42ರ ಬಂಟ್ಸ್‌ ಸೆಂಟರ್‌ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ನಡೆಯಿತು.

Advertisement

ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ನ್ಯಾಯವಾದಿ ಉಪ್ಪೂರು ಶೇಖರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಉಪಾಧ್ಯಕ್ಷ ಮತ್ತು ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಸುಭಾಷ್‌ ಬಿ. ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಜಾಸ್ಮಿನ್‌ ಗ್ರೂಪ್‌ ಆಫ್‌ ಕಂಪೆನೀಸ್‌ ಇದರ ಸಿಎಂಡಿ ಡಾ| ಸುರೇಂದ್ರ ವಿ. ಶೆಟ್ಟಿ, ಭಾಯಂದರ್‌ ಸಾಯಿಬಾಬಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಅಂಬರೀಷ್‌ ಹೆಗ್ಡೆ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಲಾಯಿತು.

ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ ಕ್ರೀಡಾಪಟು, ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದ  ಮಾಸ್ಟರ್ ಆಥ್ಲೆಟಿಕ್ಸ್‌

ನಲ್ಲಿ ಚಿನ್ನ ಗೆದ್ದ ಶಿವಾನಂದ ಶೆಟ್ಟಿ ಮತ್ತು ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪೂರ್ವಿ ವಿ. ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಶಾಲು ಹೊದೆಸಿ, ಫಲುಪುಷ್ಪ‌³, ಸ್ಮರಣಿಕೆಯನ್ನಿತ್ತು ಅಭಿನಂದಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ವಿಶ್ವತ್‌ ಕೆಮಿಕಲ್ಸ್‌ನ ಬಿ. ವಿವೇಕ್‌ ಶೆಟ್ಟಿ, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮಾಜಿ ಅಧ್ಯಕ್ಷ ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ, ಶಿವಾನಿ ಮದರ್‌ ಆ್ಯಂಡ್‌ ಚೈಲ್ಡ್‌ ಕೇರ್‌ ಆಸ್ಪತ್ರೆ ಮುಲುಂಡ್‌ ಇದರ ಡಾ| ಸತ್ಯಪ್ರಕಾಶ್‌ ಶೆಟ್ಟಿ, ದೀಪಕ್‌ ಆಸ್ಪತ್ರೆ ಮೀರಾರೋಡ್‌ ಇದರ ಸಿಎಂಡಿ ಡಾ| ಭಾಸ್ಕರ ಶೆಟ್ಟಿ, ಪನ್ವೇಲ್‌ ನಗರ ಸೇವಕ ಸಂತೋಷ್‌ ಜಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

ಸಮಾರಂಭದ ವೇದಿಕೆಯಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಕರುಣಾಕರ ಎಂ. ಶೆಟ್ಟಿ, ಜತೆ ಕೋಶಾಧಿಕಾರಿ ಶ್ಯಾಂ ಸುಂದರ್‌ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ ವಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಜೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ವೈಶಾಲಿ ಕೆ. ಶೆಟ್ಟಿ, ಪತ್ರಕರ್ತ ದಯಾ ಸಾಗರ್‌ ಚೌಟ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿಕ್ಷಣ ಸಮಿತಿಯ ಸದಸ್ಯರಾದ ಕಾರ್ಯದರ್ಶಿ ಸರಳಾ ಬಿ. ಶೆಟ್ಟಿ, ಮಾಜಿ ಅಧ್ಯಕ್ಷ ಎನ್‌. ಸಿ. ಶೆಟ್ಟಿ, ಮಾಜಿ ಅಧ್ಯಕ್ಷ ಜಯಂತ್‌ ಕೆ. ಶೆಟ್ಟಿ, ಮುರಳಿ ಕೆ. ಶೆಟ್ಟಿ, ಶ್ರೀಧರ ಕೆ. ಶೆಟ್ಟಿ, ವಿನೋದಾ ಜೆ. ಶೆಟ್ಟಿ, , ಶೈಲಜಾ ಎ. ಶೆಟ್ಟಿ, ಸುಶೀಲಾ ಸಿ. ಶೆಟ್ಟಿ, ಆಶಾ ಎಸ್‌. ಶೆಟ್ಟಿ, ಶ್ಯಾಮಲಾ ಎಸ್‌. ಶೆಟ್ಟಿ, ಲತಾ ಜಿ. ಶೆಟ್ಟಿ, ಹಾಗೂ ಅಸೋಸಿಯೇಶನ್‌ನ ಪದಾಧಿಕಾರಿಗಳ ಮಾರ್ಗದರ್ಶನ, ಸಹಕಾರದೊಂದಿಗೆ  ಕಾರ್ಯಕ್ರಮವು ಅದ್ದೂರಿಯಾಗಿ ಜರಗಿತು. ಅಸೋಸಿಯೇಶನ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಮಾಜ ಬಾಂಧವರು, ಮಕ್ಕಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

  ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next