ಸಾಗರ: ಅಪರೂಪವಾದ ಬಾಂಬೆ ಬ್ಲಡ್ ಗ್ರೂಪ್ ಹೊಂದಿರುವ ನಗರದ ಎಲ್.ಬಿ. ಕಾಲೇಜಿನ ಪ್ರಥಮ ಬಿಎಸ್‌ಸಿ ವಿದ್ಯಾರ್ಥಿ ಉದಯಕುಮಾರ್ ಅವರು ಅಗತ್ಯವಿರುವ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ರಕ್ತದಾನ ಮಾಡಿದ ಘಟನೆ ಸೋಮವಾರ ನಡೆದಿದೆ.
ಈಚೆಗೆ ಎಲ್‌ಬಿ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆದ ಸಂದರ್ಭ ವಿದ್ಯಾರ್ಥಿ ಉದಯಕುಮಾರ ಅವರ ರಕ್ತದ ಗುಂಪು ಬಹಳ ಅಪರೂಪದ್ದು ಎಂಬ ಮಾಹಿತಿ ಇಲ್ಲಿನ ರಕ್ತನಿಧಿ ಕೇಂದ್ರಕ್ಕೆ ಲಭ್ಯವಾಗಿದೆ. ಉದಯಕುಮಾರ ಮೂಲತಃ ಸಿದ್ದಾಪುರ ತಾಲೂಕಿನ ಆಡುಕಟ್ಟಾ ಸಮೀಪದ ಕೊರ್ಲಕೈ ಗ್ರಾಮದವರಾಗಿದ್ದು, ಎಲ್‌ಬಿ ಕಾಲೇಜಿನಲ್ಲಿ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದಾರೆ.
ಇಲ್ಲಿನ ರಕ್ತನಿ ಧಿ ಕೇಂದ್ರದಲ್ಲಿ ಬಾಂಬೆ ಬ್ಲಿಡ್ ಗ್ರೂಪ್‌ನ ರಕ್ತ ಲಭ್ಯವಿದೆ ಎಂಬ ಮಾಹಿತಿಯನ್ನು ಕೇಂದ್ರದವರು ಸಂಕಲ್ಪ ಇಂಡಿಯನ್ ಎಂಬ ಆನ್ ಲೈನ್ ಮಾಹಿತಿ ಮೂಲಕ ಪೋಸ್ಟ್ ಮಾಡಿದ್ದರು. ಈ ಗ್ರೂಪ್ ಅಗತ್ಯವಿರುವ ಬೆಂಗಳೂರು ಮೂಲದ ವ್ಯಕ್ತಿ ಮತ್ತವರ ಕುಟುಂಬದವರು ರಕ್ತನಿಧಿ ಕೇಂದ್ರ ಸಂಪರ್ಕಿಸಿ ಸೋಮವಾರ ಇಲ್ಲಿಗೆ ಬಂದಿದ್ದಾರೆ.
ಇಲ್ಲಿನ ಸುಮುಖ ಆಸ್ಪತ್ರೆಯಲ್ಲಿ ಸೂಕ್ತ ಪರಿಶೀಲನೆ ನಂತರ ರಕ್ತ ನೀಡಲಾಗಿದೆ. ರಕ್ತವನ್ನು ಪಡೆದುಕೊಂಡವರಿಂದ ಯಾವುದೇ ಶುಲ್ಕ ಪಡೆದುಕೊಳ್ಳದೆ ಉಚಿತವಾಗಿ ಬಾಂಬೆ ಬ್ಲಿಡ್ ಗ್ರೂಪ್ ನೀಡುವ ಮೂಲಕ ರೋಟರಿ ರಕ್ತ ನಿಧಿ ಕೇಂದ್ರ ಮಾನವೀಯತೆ ಮೆರೆದಿದೆ. ಕೇಂದ್ರದ ಡಾ.ಎಚ್.ಎಂ.ಶಿವಕುಮಾರ, ಡಾ. ಬಿ.ಜಿ.ಸಂಗಂ, ಡಾ.ಅರುಣ್‌ಕುಮಾರ್, ಟೆಕ್ನಿಶಿಯನ್ ಹರೀಶ್, ಸಿಬ್ಬಂದಿ
ಹಾಜರಿದ್ದರು.