Advertisement
ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ದಾಳಿಯ ಹೊಣೆ ಹೊತ್ತಿದೆ. ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಿಂದ 25 ಕಿಲೋಮೀಟರ್ ದೂರದಲ್ಲಿರುವ ಕ್ವೆಟ್ಟಾ-ಮಸ್ತುಂಗ್ ರಸ್ತೆಯಲ್ಲಿರುವ ಅರೆಸೈನಿಕ ಗಡಿನಾಡು ದಳದ ಸಿಬ್ಬಂದಿಯಿರುವ ಚೆಕ್ ಪೋಸ್ಟ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಎಎಫ್ ಪಿ ತಿಳಿಸಿದೆ.
Related Articles
Advertisement
ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಭದ್ರತಾ ಪಡೆಗಳು ಲೆಕ್ಕವಿಲ್ಲದಷ್ಟು ತ್ಯಾಗಗಳನ್ನು ಮಾಡಿವೆ. ಹುತಾತ್ಮರಿಗೆ ಇಡೀ ರಾಷ್ಟ್ರ ಋಣಿಯಾಗಿದೆ. ನಾವು ನಮ್ಮ ಸಂಪೂರ್ಣ ಶಕ್ತಿಯಿಂದ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದೇವೆ ಮತ್ತು ಅದನ್ನು ಇನ್ನೂ ಮುಂದುವರಿಸುತ್ತೇವೆ. ಈ ಹಿಂಸಾತ್ಮಕ ದಾಳಿಗಳು ಭದ್ರತಾ ಪಡೆಗಳ ಮನೋಬಲವನ್ನು ಕಡಿಮೆ ಮಾಡುವುದಿಲ್ಲ ಎಂದು ಬಲೂಚಿಸ್ಥಾನದ ಗೃಹ ಸಚಿವ ಮಿರ್ ಜಿಯಾವುಲ್ಲಾ ಹೇಳಿಕೆ ನೀಡಿದ್ದಾರೆ.