Advertisement

Om Raut: ರಾಮಾಯಣವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಯಾರಿಗೂ ಇಲ್ಲ:ʼಆದಿಪುರುಷ್‌ʼ ನಿರ್ದೇಶಕ

12:08 PM Jun 19, 2023 | Team Udayavani |

ಮುಂಬಯಿ: ರಾಮಾಯಣದ ಕಥೆಯನ್ನು ಆಧರಿಸಿ ಬಿಗ್‌ ಬಜೆಟ್‌ ನಲ್ಲಿ ತಯಾರಾದ ʼಆದಿಪುರುಷ್‌ʼ ಸಿನಿಮಾ ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವುದರ ಜೊತೆ ಒಂದಷ್ಟು ನೆಗೆಟಿವ್‌ ಕಮೆಂಟ್‌ ಗಳಿಗೆ ತುತ್ತಾಗಿದೆ.

Advertisement

ಸಿನಿಮಾ ರಿಲೀಸ್‌ ಆದ ಮೊದಲ ದಿನವೇ ಗ್ಲೋಬಲ್‌ ಮಟ್ಟದಲ್ಲಿ 140 ಕೋಟಿ ರೂ.ವನ್ನು ಕಲೆಕ್ಷನ್‌ ಮಾಡಿದೆ. ಸಿನಿಮಾದಲ್ಲಿ ನಟ ಪ್ರಭಾಸ್‌ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಪ್ರೇಕ್ಷಕರು ಭೇಷ್‌ ಎಂದಿದ್ದಾರೆ. ಆದರೆ ಇದುಬಿಟ್ಟರೆ ಸಿನಿಮಾ ಬೇರೆ ಯಾವುದೇ ವಿಚಾರದಲ್ಲಿ ಅಷ್ಟಾಗಿ ಸದ್ದು ಮಾಡುತ್ತಿಲ್ಲ ಎಂದು ಪ್ರೇಕ್ಷಕರು ಹೇಳಿದ್ದಾರೆ.

500 ಕೋಟಿ ರೂ. ನಿರ್ಮಾಣದಲ್ಲಿ ತಯಾರಾದ ಸಿನಿಮಾದ ವಿಎಫ್‌ ಎಕ್ಸ್‌ ಅತ್ಯಂತ ಕಳಪೆಯಾಗಿದೆ. ಬೇರೆ ಬೇರೆ ಕಡೆಯಿಂದ ಕದ್ದು ವಿಎಫ್‌ ಎಕ್ಸ್‌ ನ್ನು ಚಿತ್ರದಲ್ಲಿ ಬಳಸಲಾಗಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಸಿನಿಮಾದಲ್ಲಿ ಹನುಮಂತನ ಪಾತ್ರಧಾರಿಯ ಸಂಭಾಷಣೆಗೆ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ:Daaku Haseena; 8 ಕೋಟಿ ರೂ. ದರೋಡೆ- 10 ರೂ. ಜ್ಯೂಸ್‌ ಕುಡಿದು ಸಿಕ್ಕಿಬಿದ್ದ ದಂಪತಿ!

ಈ ಎಲ್ಲಾ ವಿವಾದ ಹಾಗೂ ನೆಗೆಟಿವ್‌ ಪ್ರತಿಕ್ರಿಯೆಗಳ ನಿರ್ದೇಶಕ ಓಂ ರಾವತ್ ಮಾತನಾಡಿದ್ದಾರೆ. “ಬಾಕ್ಸ್‌ ಆಫೀಸ್‌ ನಲ್ಲಿ ಸಿನಿಮಾ ಯಾವ ರೀತಿಯ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿದೆ ಎನ್ನುವುದು ಮುಖ್ಯ. ಮೊದಲ ದಿನವೇ ಗ್ಲೋಬಲ್‌ ಮಟ್ಟದಲ್ಲಿ ನಮ್ಮ ಸಿನಿಮಾ ನಿರೀಕ್ಷೆ ಮಾಡಿದಕ್ಕಿಂತಲೂ ಅಭೂತಪೂರ್ವವಾಗಿ ಪ್ರತಿಕ್ರಿಯೆ ಪಡೆದುಕೊಂಡಿರುವುದು ನನಗೆ ತುಂಬಾ ಸಂತೋಷವಾಗಿದೆ” ಎಂದರು.

Advertisement

ಇದನ್ನೂ ಓದಿ:ಕೆನಾಡದಲ್ಲಿ ಭಾರತಕ್ಕೆ ಬೇಕಾಗಿದ್ದ ಖಲಿಸ್ಥಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ

ನನಗೆ ರಾಮಾಯಣದಿಂದ ಏನು ಅರ್ಥವಾಯಿತೋ ಅದನ್ನು ಅರಿತೇ ನಾನು ʼಆದಿಪುರುಷ್‌ʼ ಮಾಡಿದ್ದೇನೆ. ರಾಮಾಯಣವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಯಾರಿಗೂ ಸಾಧ್ಯವಾಗಿಲ್ಲ. ನಾನು ನಾಟಕವನ್ನು ನೋಡಿ ರಾಮಾಯಣವನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ನಿಮಗೆ ಹೇಳಿದರೆ, ಅದು ಗಂಭೀರ ದೋಷವಾಗುತ್ತದೆ. ಏಕೆಂದರೆ ರಾಮಾಯಣವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಯಾರಿಗೂ ಇಲ್ಲ ಎಂದು ನಾನು ಭಾವಿಸುತ್ತೇನೆ.”

ಸಿನಿಮಾದಲ್ಲಿ ರಾಘವ್ ಆಗಿ ನಟ ಪ್ರಭಾಸ್, ಜಾನಕಿಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next