Advertisement

ಬಾಲಿವುಡ್ ನಟ ದಿಲೀಪ್ ಕುಮಾರ್ ಸಹೋದರರು ಕೋವಿಡ್ ಗೆ ಬಲಿ

08:53 PM Sep 03, 2020 | Hari Prasad |

ಮುಂಬಯಿ: ಬಾಲಿವುಡ್ ನ ಹಿರಿಯ ನಟ ದಿಲೀಪ್ ಕುಮಾರ್ ಅವರ ಇಬ್ಬರು ಸಹೋದರರು ಕೋವಿಡ್ 19 ಸೊಂಕಿಗೆ ಬಲಿಯಾಗಿದ್ದಾರೆ.

Advertisement

ದಿಲೀಪ್ ಕುಮಾರ್ ಅವರ ಕಿರಿಯ ಸಹೋದರ 90 ವರ್ಷದ ಎಹ್ಸಾನ್ ಖಾನ್ ಅವರು ಇಂದು ನಿಧನರಾಗಿದ್ದಾರೆ. ಇವರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದ್ದ ಹಿನ್ನಲೆಯಲ್ಲಿ ಎಹ್ಸಾನ್ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ವಿಚಾರವನ್ನು ದಿಲೀಪ್ ಕುಮಾರ್ ಅವರ ಕುಟುಂಬ ಸ್ನೇಹಿತ ಫೈಸಲ್ ಫಾರೂಖಿ ಅವರು ಈ ಹಿರಿಯ ನಟನ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ ಮಾಹಿತಿ ನೀಡಿದ್ದಾರೆ.

‘ದಿಲೀಪ್ ಸಾಹೇಬ್ ಅವರ ಕಿರಿಯ ಸಹೋದರ ಎಹ್ಸಾನ್ ಖಾನ್ ಅವರು ಕೆಲ ಸಮಯಗಳ ಹಿಂದೆ ನಿಧನರಾಗಿದ್ದಾರೆ. ಈ ಹಿಂದೆ, ಇನ್ನೋರ್ವ ಸಹೋದರ ಅಸ್ಲಂ ನಿಧನ ಹೊಂದಿದ್ದರು. ನಾವೆಲ್ಲರೂ ದೇವರ ಮಕ್ಕಳು ಮತ್ತು ಆತನಲ್ಲಿಗೇ ಹಿಂದಿರುಗಬೇಕಾದವರು. ದಯವಿಟ್ಟು ನೀವೆಲ್ಲರೂ ಅವರಿಗಾಗಿ ಪ್ರಾರ್ಥಿಸಿ’ ಎಂದು ಫೈಸಲ್ ಫಾರುಖಿ ಅವರು ಬರೆದುಕೊಂಡಿದ್ದಾರೆ.


ದಿಲೀಪ್ ಕುಮಾರ್ ಅವರ ಇಬ್ಬರು ಸಹೋದರರಿಗೆ ಆಗಸ್ಟ್ 15ರಂದು ಕೋವಿಡ್ 19 ಸೊಂಕು ದೃಢಪಟ್ಟಿತ್ತು. ಮತ್ತು ಅವರಿಬ್ಬರನ್ನೂ ನಗರದ ಲೀಲಾವತಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

Advertisement

ಇವರಲ್ಲಿ 88 ವರ್ಷ ಪ್ರಾಯದ ಅಸ್ಲಂ ಖಾನ್ ಅವರು ಆಗಸ್ಟ್ 21ಕ್ಕೆ ನಿಧನರಾಗಿದ್ದರು ಮತ್ತು 90 ವರ್ಷ ಪ್ರಾಯದ ಎಹ್ಸಾನ್ ಖಾನ್ ಅವರು ಇಂದು ನಿಧನರಾಗಿದ್ದಾರೆ.

ಮಾರ್ಚ್ ತಿಂಗಳಿನಲ್ಲಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಗೂ ಮುಂಚೆ ಟ್ವೀಟ್ ಮಾಡಿದ್ದ ಈ ಹಿರಿಯ ನಟ ತಾನು ಮತ್ತು ತನ್ನ ಪತ್ನಿ ನಟಿ ಸಾಯಿರಾ ಬಾನು ಅವರು ‘ಸಂಪೂರ್ಣ ಐಸೊಲೇಷನ್ ಹಾಗೂ ಕ್ವಾರೆಂಟೈನ್’ ನಲ್ಲಿರುವುದಾಗಿ ಟ್ವೀಟ್ ಮಾಡಿದ್ದರು.


ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ವಿಜೇತ ಹಿರಿಯ ನಟ ದಿಲೀಪ್ ಕುಮಾರ್ ಅವರು ಕೊಹಿನೂರ್, ಮುಘಲ್-ಎ-ಅಝಂ, ಶಕ್ತಿ, ರಾಮ್ ಔರ್ ಶ್ಯಾಮ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ತಮ್ಮ ನಟನಾ ಛಾಪನ್ನು ಮೂಡಿಸಿದ್ದಾರೆ. ಬಾಲಿವುಡ್ ನ ಈ ಹಿರಿಯ ನಟ 1998ರಲ್ಲಿ ಕೊನೆಯ ಬಾರಿಗೆ ‘ಕ್ವಿಲಾ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next