Advertisement
ಮೇ3 ರಂದು ʼವೀರ ಸಾವರ್ಕರ್ʼ ಹಾಗೂ ʼಅಟಲ್ʼ, ʼಬಾಲ್ ಶಿವಾಜಿʼ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಸಂದೀಪ್ ಶರ್ಮಾ, ರಶ್ಮಿ, ಇರೋಸ್ ಇಂಟರ್ ನ್ಯಾಷನಲ್ ನೊಂದಿಗೆ ಸೇರಿಕೊಂಡು ʼಟಿಪ್ಪುʼ ಈ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು.
Related Articles
Advertisement
“ಹಜರತ್ ಟಿಪ್ಪು ಸುಲ್ತಾನ್ ಕುರಿತ ಚಿತ್ರ ನಿರ್ಮಾಣವಾಗುವುದಿಲ್ಲ. ನನ್ನ ಕುಟುಂಬ, ಸ್ನೇಹಿತರು ಮತ್ತು ನನಗೆ ಬೆದರಿಕೆ ಅಥವಾ ನಿಂದನೆ ಮಾಡುವುದನ್ನು ತಡೆಯಿರಿ ಎಂದು ಈ ಮೂಲಕ ನಾನು ನನ್ನ ಸಹೋದರ- ಸಹೋದರಿಯರಲ್ಲಿ ಕೇಳಿಕೊಳ್ಳುತ್ತೇನೆ.ನಾನು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದರೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಹೀಗೆ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ನಾನು ಎಲ್ಲಾ ನಂಬಿಕೆಗಳನ್ನು ಗೌರವಿಸುತ್ತೇನೆ. ಭಾರತೀಯರಾಗಿ ನಾವು ಎಂದೆಂದಿಗೂ ಒಂದಾಗಿರೋಣ ಮತ್ತು ಯಾವಾಗಲೂ ಪರಸ್ಪರ ಗೌರವವನ್ನು ನೀಡೋಣ” ಎಂದು ಟ್ವೀಟ್ ಮಾಡಿದ್ದಾರೆ.
ಸಿನಿಮಾ ಘೋಷಣೆ ಮಾಡುವ ವೇಳೆ “ಟಿಪ್ಪು ಸುಲ್ತಾನನ ನಿಜವಾದ ಸತ್ಯವನ್ನು ತಿಳಿದು ನಾನು ಬೆಚ್ಚಿಬಿದ್ದೆ. ನಮ್ಮ ಇತಿಹಾಸದ ಪಠ್ಯಪುಸ್ತಕಗಳಲ್ಲಿ ತೋರಿಸಿರುವಂತೆ ಅವನನ್ನು ಧೈರ್ಯಶಾಲಿ ಎಂದು ನಂಬುವಂತೆ ನಮ್ಮ ಬ್ರೈನ್ ವಾಶ್ ಮಾಡಲಾಗಿದೆ. ಅವನ ದುರುದ್ದೇಶ ಯಾರಿಗೂ ತಿಳಿದಿಲ್ಲ. ಭವಿಷ್ಯದ ಪೀಳಿಗೆಗೆ ಅವರ ಕರಾಳ ಮುಖವನ್ನು ಬಹಿರಂಗಪಡಿಸಲು ನಾನು ಬಯಸುತ್ತೇನೆ” ಎಂದು ಹೇಳಿದ್ದರು.
ಸದ್ಯ ಪಂಕಜ್ ತ್ರಿಪಾಠಿ ನಾಯಕನಾಗಿ ನಟಿಸುತ್ತಿರುವ ‘ಮೇನ್ ಅಟಲ್ ಹೂನ್’ ಸಿನಿಮಾದ ಕೆಲಸದಲ್ಲಿ ಸಂದೀಪ್ ಸಿಂಗ್ ಬ್ಯಸಿಯಾಗಿದ್ದಾರೆ.