Advertisement

Chandrayaan-3 ಕುರಿತು ಸಿನಿಮಾ: ಟೈಟಲ್‌ ರಿಜಿಸ್ಟರ್‌ ಗೆ ಮುಗಿಬಿದ್ದ ನಿರ್ಮಾಣ ಸಂಸ್ಥೆಗಳು

05:41 PM Aug 24, 2023 | Team Udayavani |

 ಮುಂಬಯಿ: ಭಾರತದ ʼಚಂದ್ರಯಾನ-3ʼ ಯಶಸ್ವಿಯಾಗಿದೆ. ಆ ಮೂಲಕ ಭಾರತ ವೈಜ್ಞಾನಿಕ ಕ್ಷೇತ್ರದಲ್ಲಿ ಹೊಸ ಐತಿಹಾಸಿಕ ಮೈಲುಗಲ್ಲನ್ನು ಸೃಷ್ಟಿಸಿದೆ.

Advertisement

ಇಸ್ರೋ ಸಾಧನೆಗೆ ವಿಶ್ವದ ಬಹುತೇಕ ರಾಷ್ಟ್ರಗಳು ಅಭಿನಂದಿಸಿದೆ. ಇತ್ತ ʼಚಂದ್ರಯಾನ-3ʼ ಯ ಕುರಿತು ಸಿನಿಮಾರಂಗದಲ್ಲಿ ಕಥೆಗಳು ತಯಾರಾಗಲು ಶುರುವಾಗಿದ್ದು ಟೈಟಲ್‌ ರಿಜಿಸ್ಟಾರ್‌ ಮಾಡಲು ಕೆಲ ಪ್ರೊಡಕ್ಷನ್‌ ಹೌಸ್‌ ಗಳು ಮುಂದಾಗಿದೆ.

ಮುಂಬಯಿಯಲ್ಲಿರುವ ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ, ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ, ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ಮಾಪಕರ ಮಂಡಳಿ ಕಚೇರಿಯಲ್ಲಿ ಚಲನಚಿತ್ರ ನಿರ್ಮಾಪಕರು ಮತ್ತು ನಿರ್ಮಾಣ ಸಂಸ್ಥೆಗಳು ʼಚಂದ್ರಯಾನ-3ʼ ಐತಿಹಾಸಿಕ ಸಾಧನೆಯ ಕುರಿತ ಸಿನಿಮಾಕ್ಕೆ ಸಂಬಂಧಿಸಿ ಸಿನಿಮಾಗಳನ್ನು ಮಾಡಲು ಮುಂದಾಗಿದೆ.

ಇದಕ್ಕೆ ಸಂಬಂಧಿಸಿ ಟೈಟಲ್‌ ರಿಜಿಸ್ಟರ್‌ ಮಾಡಿಸಲು ನಿರ್ದೇಶಕರು, ನಿರ್ಮಾಣ ಸಂಸ್ಥೆಗಳು ಮುಂದಾಗಿವೆ.

ʼಚಂದ್ರಯಾನ-3ʼ, ʼಮಿಷನ್ ಚಂದ್ರಯಾನ-3ʼ, ʼಚಂದ್ರಯಾನ-3: ದಿ ಮೂನ್ ಮಿಷನ್ʼ, ʼವಿಕ್ರಮ್ ಲ್ಯಾಂಡರ್ʼ, ʼಚಂದ್ರಯಾನ-3: ದಿ ನ್ಯೂ ಚಾಪ್ಟರ್ʼ, ʼಭಾರತ್ ಚಂದ್ ಪರ್ʼ ಇತ್ಯಾದಿ ಟೈಟಲ್‌ ಗಳು ರಿಜಿಸ್ಟಾರ್‌ ಆಗಲು ನಿರ್ಮಾಣ ಸಂಸ್ಥೆಗಳು ಅರ್ಜಿ ಸಲ್ಲಿಸಿವೆ ಎಂದು ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘದ ಮೂಲಗಳು ಹೇಳಿರುವುದಾಗಿ ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

Advertisement

ನಮಗೆ ಟೈಟಲ್‌ ರಿಜಿಸ್ಟಾರ್‌ಗೆ ಬಂದ ಬಹುತೇಕ ಅರ್ಜಿಗಳನ್ನು ನಾವು ಸ್ವೀಕರಿಸಿದ್ದೇವೆ. ಈ ಸಂಬಂಧ ಮುಂದಿನ ವಾರ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ, ಕೆಲವೊಂದಕ್ಕೆ  ಮಾತ್ರ ಅನುಮತಿ ನೀಡುತ್ತೇವೆ.  ಪುಲ್ವಾಮಾ ದಾಳಿಯ ನಂತರ, ಅದರ ಕಥೆಗೆ ಟೈಟಲ್‌ ರಿಜಿಸ್ಟರ್‌ ಮಾಡಲು ನಮಗೆ 30-40 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅವು ಬಹುತೇಕ ಒಂದೇ ಆಗಿದ್ದವು ಮತ್ತು ಘಟನೆಯ ಕುರಿತು ಹೆಚ್ಚಿನ ಚಲನಚಿತ್ರಗಳು ಅಥವಾ ವೆಬ್ ಸರಣಿಗಳನ್ನು ಮಾಡಲಾಗಿಲ್ಲ. ನಾವು ನಿಜವೆಂದು ತೋರುವುದನ್ನು ಮಾತ್ರ ಅನುಮೋದಿಸಲು ನಾವು ಯೋಜಿಸುತ್ತಿದ್ದೇವೆ ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘದ ಮೂಲಗಳು ಹೇಳಿರುವುದಾಗಿ ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

ಬಾಲಿವುಡ್‌ ನಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿ ʼಮಿಷನ್‌ ಮಂಗಲ್‌ʼ ನಂತಹ ಸಿನಿಮಾಗಳು ತೆರೆ ಕಂಡಿದೆ. ಈ ಸಿನಿಮಾದಲ್ಲಿ ಅಕ್ಷಯ್‌ ಕುಮಾರ್‌ ನಟಿಸಿದ್ದಾರೆ.

ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್, ಸಾರಾ ಅಲಿ ಖಾನ್, ಕಾರ್ತಿಕ್ ಆರ್ಯನ್, ಹೃತಿಕ್ ರೋಷನ್, ಮತ್ತು ಕರೀನಾ ಕಪೂರ್ ಮುಂತಾದವರು ಈ ಐತಿಹಾಸಿಕ ಸಾಧನೆಗಾಗಿ ಇಸ್ರೋ ತಂಡವನ್ನು ಅಭಿನಂದಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next