Advertisement

ಹಿಂದಿಚಿತ್ರರಂಗದ ಡ್ಯೂಪ್‌ ಕಲಾವಿದ, ಸಹನಿರ್ದೇಶಕ ವಸಂತ್‌ ಶೆಣೈ ನಿಧನ

02:15 AM Aug 25, 2018 | Team Udayavani |

ಉಡುಪಿ: ಎವರ್‌ ಗ್ರೀನ್‌ ಹೀರೋ ದೇವ್‌ ಆನಂದ್‌ ಅವರ ತದ್ರೂಪಿ (ಡ್ಯೂಪ್‌) ಕಲಾವಿದ, ಹಿಂದಿ ಚಿತ್ರರಂಗದ ಸಹ ನಿರ್ದೇಶಕ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ  ವಿಜೇತ, ಮಣಿಪಾಲ ಸಮೀಪದ ಸರಳೆಬೆಟ್ಟಿನ ವಸಂತ್‌ ಶೆಣೈ (74) ಅವರು ಆ.24ರಂದು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. 1967ರಿಂದ 1976ರವರೆಗೆ ಹಿಂದಿ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ಅವರು 20 ವರ್ಷಗಳ ಹಿಂದೆ ಊರಿಗೆ ಬಂದು ಸೋದರನ ಉದ್ಯಮದಲ್ಲಿ ತೊಡಗಿಸಿಕೊಂಡು ಅನಂತರ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಶೆಣೈ ಅವರು ಉಡುಪಿಯ ಕಟ್ಟೆ ಆಚಾರ್ಯ ಮಾರ್ಗದಲ್ಲಿ ಜನಿಸಿ 1963ರಲ್ಲಿ ಮುಂಬಯಿಗೆ ತೆರಳಿ ಅಲ್ಲಿನ ಪರೇಲ್‌ನಲ್ಲಿದ್ದ ಅಣ್ಣನ ಆಟೋಮೊಬೈಲ್‌ ಉದ್ಯಮದಲ್ಲಿ ತೊಡಗಿಕೊಂಡರು. ಪಕ್ಕದಲ್ಲಿದ್ದ ಫಿಲ್ಮ್ ಸ್ಟುಡಿಯೋಗಳಿಂದಾಗಿ ಚಿತ್ರೋದ್ಯಮ ಪರಿಚಯವಾಯಿತು.

Advertisement

ದೇವ್‌ ಆನಂದ್‌ ಅವರ ಸೂಪರ್‌ ಹಿಟ್‌ ಚಿತ್ರಗಳಾದ ‘ಗೈಡ್‌’, ‘ಬನರಾಸಿ ಬಾಬು’  ಸಹಿತ ಹಲವು ಚಿತ್ರಗಳಲ್ಲಿ ಡ್ಯೂಪ್‌ ಕಲಾವಿದರಾಗಿ ನಟಿಸಿದ್ದಾರೆ. 1964ರಲ್ಲಿ ಧರ್ಮೇಂದ್ರ ಅವರ ಅಭಿನಯದ ‘ಚಂದನ್‌ ಕಾ ಪಲಾ°’ ಚಿತ್ರದ ಸಹ ನಿರ್ದೇಶಕರಾಗಿದ್ದರು. ಅಲ್ಲದೆ 1966ರಲ್ಲಿ ದೇವಾನಂದ್‌ ಅವರ ‘ತೀನ್‌ ದೇವಿಯಾ’, 1967ರಲ್ಲಿ ದೇವಾನಂದ್‌ ಅವರ ‘ಜುವೆಲ್‌ ದೀಪ್‌’, 1968ರಲ್ಲಿ ದೇವಾನಂದ್‌ ಅವರ ‘ಪ್ರೇಮ್‌ ಪೂಜಾರಿ’, 1968ರಲ್ಲಿ ಸುನಿಲ್‌ ದತ್‌ ಅವರ ‘ಮೇರಾ ಸಾಯಾ’, 1969ರಲ್ಲಿ ದೇವಾನಂದ್‌ ಅವರ ‘ಹರೇ ರಾಮ ಹರೇ ಕೃಷ್ಣಾ’, 1969ರಲ್ಲಿ ಮನೋಜ್‌ ಕುಮಾರ್‌ ಅವರ ‘ದೋಬದನ್‌’, 1973ರಲ್ಲಿ ದೇವಾನಂದ್‌ ಅವರ ‘ಅಮೀರ್‌ ಗರೀಬ್‌’, 1973ರಲ್ಲಿ ಧರ್ಮೇಂದ್ರ, ಅಮಿತಾಬ್‌ ಬಚ್ಚನ್‌ ಅವರ ‘ಶೋಲೆ’, 1974ರಲ್ಲಿ ದೇವಾನಂದ್‌ ಅವರ ‘ಹೀರಾಪನ್ನಾ’, 1976ರಲ್ಲಿ ದೇವಾನಂದ್‌ ಅವರ ‘ಬನಾರಸಿ ಬಾಬು’, 1977ರಲ್ಲಿ ಸಂಜೀವ್‌ ಕುಮಾರ್‌ ಅವರ ‘ನೌಕರ್‌’, 1978ರಲ್ಲಿ ಶಶಿ ಕಪೂರ್‌ ಅವರ ‘ಶಂಕರ್‌ ದಾದಾ’, 1979ರಲ್ಲಿ ಅಮಿತಾಬ್‌ ಬಚ್ಚನ್‌ ಅವರ ‘ದೀವಾರ್‌’, 1982ರಲ್ಲಿ ‘ಅಮರ್‌ ಅಕ್ಬರ್‌ ಅಂತೋನಿ’ ಮೊದಲಾದ ಚಿತ್ರಗಳಿಗೆ ಸಹ ನಿರ್ದೇಶಕರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next