Advertisement

ಬಾಲಿವುಡ್ ನಟ ರಿಷಿ ಕಪೂರ್ ಆಸ್ಪತ್ರೆಗೆ ದಾಖಲು

09:54 AM Feb 03, 2020 | Hari Prasad |

ನವದೆಹಲಿ: ಬಾಲಿವುಡ್ ನ ಹಿರಿಯ ನಟ ರಿಷಿ ಕಪೂರ್ ಅವರು ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಂಕು ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ರಾಷ್ಟ್ರ ರಾಜಧಾನಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ರಿಷಿ ಜೊತೆ ಅವರ ಪತ್ನಿ ನೀತು ಸಿಂಗ್, ಪುತ್ರ ರಣ್ ಬೀರ್ ಕಪೂರ್ ಹಾಗೂ ರಣ್ ಬೀರ್ ಗೆಳತಿ ಆಲಿಯಾ ಭಟ್ ಇದ್ದು ಹಿರಿಯ ನಟನ ಆರೋಗ್ಯದ ಕಾಳಜಿ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

Advertisement

ಇದೊಂದು ಗಂಭೀರವಾದ ಸಮಸ್ಯೆಯಲ್ಲಿ, ಬಹುಷಃ ಮಾಲಿನ್ಯದ ಕಾರಣದಿಂದುಂಟಾಗಿರುವ ಸೋಂಕಿನ ಕಾರಣದಿಂದ ನಾನು ಆಸ್ಪತ್ರೆಗೆ ದಾಖಲುಗೊಳ್ಳುವಂತಾಗಿದೆ ಎಂದು ನಟ ರಿಷಿ ಕಪೂರ್ ಅವರು ಹೇಳಿಕೊಂಡಿದ್ದಾರೆ.

ರಿಷಿ ಅವರು ಆಸ್ಪತ್ರೆಗೆ ದಾಖಲಾಗಿದ್ದುದೇ  ಫೆಬ್ರವರಿ 01ರಂದು ನಡೆದಿದ್ದ ರಿಷಿ ಕಪೂರ್ ಅವರ ಸಹೋದರಿ ರೀಮಾ ಕಪೂರ್ ಅವರ ಮಗ ಅರ್ಮಾನ್ ಜೈನ್ ಅವರ ಮೆಹಂದಿ ಕಾರ್ಯಕ್ರಮಕ್ಕೆ ರಿಷಿ ಕಪೂರ್ ಕುಟುಂಬ ಗೈರಾಗಿದ್ದರ ಹಿಂದಿನ ಕಾರಣ ಎಂದು ಇದೀಗ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next