Advertisement

ಬೀದಿಯಲ್ಲಿ ತಿರುಗಿದರೂ ನನ್ನನ್ನೂ ಯಾರೂ ಗುರುತಿಸಲಿಲ್ಲ : ನಟಿ ಸನ್ನಿ ಲಿಯೋನ್

06:00 PM Jul 06, 2021 | Team Udayavani |

ಮುಂಬೈ: ಬಹುಶಃ ಅದು ಎರಡು ವರ್ಷಗಳ ಹಿಂದೆ ನಡೆದ ಪ್ರಸಂಗ ಇರಬಹುದು. ಬಾಲಿವುಡ್ ಮೋಹಕ ತಾರೆ ಸನ್ನಿ ಲಿಯೋನ್ ಚೆನ್ನೈಗೆ ಭೇಟಿ ನೀಡಿದ್ದರು. ಈ ವೇಳೆ ಈ ಚೆಲುವೆನ್ನು ನೋಡಲೆಂದು ಲಕ್ಷಾಂತರ ಜನರ ಸೇರಿದ್ದರು. ಕಣ್ಣು ಹಾಯಿಸಿದಷ್ಟು ಅಭಿಮಾನಿಗಳು ತುಂಬಿಕೊಂಡಿದ್ದರು. ಸನ್ನಿ ಲಿಯೋನ್ ಗೆ ಅಷ್ಟೊಂದು ಫ್ಯಾನ್ ಫಾಲೋವಿಂಗ್ ಇದೆ ಎಂದು ಗೊತ್ತಾಗಿದ್ದೆ ಅವಾಗ. ಆದರೆ, ಇಂದು ಸನ್ನಿ ಲಿಯೋನ್ ಒಬ್ಬಂಟಿಯಾಗಿ ಬೀದಿಯಲ್ಲಿ ತಿರುಗಾಡಿದರೂ ಆಕೆಯನ್ನೂ ಯಾರೂ ಕೂಡ ಗುರುತು ಹಿಡಿದಿಲ್ಲ.

Advertisement

ಹೌದು, ಸನ್ನಿ ಲಿಯೋನ್ ಬೀದಿ ಸುತ್ತಿದ್ರೂ ಅವರನ್ನು ಯಾರು ಸನ್ನಿ ಲಿಯೋನ್ ಎಂದು ಗುರುತಿಸಲಿಲ್ಲ ಎಂದು ಅವರೇ ಹೇಳಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸನ್ನಿ  ತನ್ನ ಪತಿ ಡೆನಿಯಲ್ ಗೆ ಅನಾರೋಗ್ಯ ಹಿನ್ನೆಲೆ ಮಾತ್ರೆ ತರಲು ಹೊರಗಡೆ ಹೋಗಿದ್ದರಂತೆ. ಈ ವೇಳೆ ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಕ್ಯಾಪ್ ಹಾಕಿಕೊಂಡಿದ್ದರಿಂದ ಇವರನ್ನ ಯಾರೂ ಸಹ ಗುರುತು ಹಿಡಿದಿಲ್ಲ. ಈ ಬಗ್ಗೆ ಹೇಳಿಕೊಂಡಿರುವ ಅವರು, ಮಾಸ್ಕ್, ತಲೆಗೆ ಕ್ಯಾಪ್ ತೊಟ್ಟು ನಾನೇನು ಕಳ್ಳತನ ಮಾಡಲು ಹೊರಗಡೆ ಹೋಗಿರಲಿಲ್ಲ. ನನ್ನ ಪತಿ ಡೆನಿಯಲ್ ವೆಬರ್‍ ಗೆ ಆರೋಗ್ಯ ಸರಿ ಇರಲಿಲ್ಲ. ಈ ಕಾರಣಕ್ಕಾಗಿ ನಾನು ಮಾತ್ರೆ ತರಲು ಹೊರಗಡೆ ಹೋಗಿದ್ದೆ. ನನ್ನನ್ನು ಸನ್ನಿ ಲಿಯೋನ್ ಎಂದು ಹೊರಗಡೆ ಯಾರು ಗುರುತಿಸಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next