ಬಾಲಿವುಡ್ ನಟಿ ಪೂಜಾ ಬೇಡಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.
“ನನ್ನ ಪತಿ ಮೆನೆಕ್ ಕಂಟ್ರಾಕ್ಟರ್, ಮನೆಯ ಸಹಾಯಕ ಹಾಗೂ ನನಗೆ ಕೋವಿಡ್ ಸೋಂಕು ದೃಢವಾಗಿದೆ.
ದೇಹದಲ್ಲಿ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನಾನು ಕೋವಿಡ್ ಲಸಿಕೆ ಪಡೆದಿಲ್ಲ. ಈಗ ಇನ್ನಷ್ಟು ಬಲಿಷ್ಠರಾಗುವ ಪ್ರಯತ್ನ ಮಾಡುತ್ತಿದ್ದೇವೆ. ಕೆಲವು ದಿನಗಳಲ್ಲೇ ಚೇತರಿಸಿಕೊಳ್ಳುತ್ತೇವೆ’ ಎಂದು ಬರೆದುಕೊಂಡಿದ್ದಾರೆ.
ಗೋವಾದಲ್ಲಿ ವಾಸವಾಗಿರುವ ಪೂಜಾ ಬೇಡಿ ಅವರು ಫಿಟ್ನೆಸ್ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಾಗ ಅವರು ಡಸ್ಟ್ ಅಲರ್ಜಿ ಆಗಿರಬಹುದು ಅಂತ ತಿಳಿದುಕೊಂಡಿದ್ದರು. ಆದರೆ ಪರಿಸ್ಥಿತಿ ನಿಧಾನಕ್ಕೆ ಹದಗೆಡಲು ಶುರುವಾಯಿತು.
ಹಾಗಾಗಿ ಟೆಸ್ಟ್ ಮಾಡಿಸಿಕೊಳ್ಳಲು ತೀರ್ಮಾನಿಸಿದರು. ಆಗ ಅವರಿಗೆ ಕೋವಿಡ್ ಪಾಸಿಟಿವ್ ಆಗಿರುವುದು ತಿಳಿಯಿತು.
ಇದನ್ನೂ ಓದಿ: 18 ತಿಂಗಳಲ್ಲಿ ಅತೀ ಕಡಿಮೆ ಕೋವಿಡ್ ಸೋಂಕು