Advertisement

ನಟ ಸೋನುಗೆ ಹ್ಯಾಟ್ಸಾಪ್ ಹೇಳಲು 712 ಕಿ.ಮೀ ಪಾದಯಾತ್ರೆ ಕೈಗೊಂಡ ಅಭಿಮಾನಿ

02:04 PM Jun 11, 2021 | Team Udayavani |

ಮುಂಬೈ : ಬಾಲಿವುಡ್ ನಟ ಸೋನು ಸೂದ್ ತಮ್ಮ ಜನಪರ ಕಾರ್ಯದಿಂದ ಸಾಕಷ್ಟು ಜನರಿಗೆ ಸ್ಫೂರ್ತಿಯ ಚಿಲುಮೆಯಂತಾಗಿದ್ದಾರೆ. ಕೆಲವರ ಪಾಲಿಗೆ ಆರಾಧ್ಯ ದೈವದಂತಾಗಿದ್ದಾರೆ.  ಈ ನಟನಿಗೆ ದೇಶಾದ್ಯಂತ ಲಕ್ಷಾಂತರ ಜನ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇದೀಗ ಸೋನು ಅವರನ್ನು ಭೇಟಿ ಮಾಡಲು ಅಭಿಮಾನಿಯೋರ್ವ 712 ಕಿ,.ಮೀ ಪಾದಯಾತ್ರೆ ಕೈಗೊಂಡಿದ್ದಾನೆ

Advertisement

ಸೋನು ಸೂದ್ ಮಾಡಿರುವ ಸಾಮಾಜಿಕ ಕಾರ್ಯಗಳಿಂದ ಇಂಪ್ರೆಸ್ ಆಗಿರುವ ವೆಂಕಟೇಶ್ ಎಂಬ ಅಭಿಮಾನಿ ಹೈದರಾಬಾದ್‌ನಿಂದ ಮುಂಬೈವರೆಗೂ ಪಾದಯಾತ್ರೆ ಕೈಗೊಂಡಿದ್ದರು.

ಹೈದರಾಬಾದ್‌ನಿಂದ ಮುಂಬೈವರೆಗೂ ಸುಮಾರು 712 ಕಿಲೋಮೀಟರ್ ಬರಿಗಾಲಿನಲ್ಲೇ ನಡೆದುಕೊಂಡು ಹೋಗಿ ಸೋನು ಸೂದ್‌ರನ್ನ ಭೇಟಿ ಮಾಡಿದ್ದಾರೆ ವೆಂಕಟೇಶ್.

ಪಾದಯಾತ್ರೆ ಮೂಲಕ ಸೋನು ಸೂದ್‌ಗೆ ಹ್ಯಾಟ್ಸ್ ಆಫ್ ಹೇಳುವುದು ವೆಂಕಟೇಶ್ ಅವರ ಉದ್ದೇಶವಾಗಿತ್ತು. ವೆಂಕಟೇಶ್ ಅವರ ಅಭಿಮಾನವನ್ನು ಕಂಡ ಸೋನು ಸೂದ್ ಹೃದಯ ತುಂಬಿ ಬಂದಿದೆ. ಈ ಬಗ್ಗೆ ನಟ ಸೋನು ಸೂದ್ ಟ್ವೀಟ್ ಮಾಡಿದ್ದಾರೆ.

”ನನ್ನನ್ನ ಭೇಟಿ ಮಾಡಲು ಹೈದರಾಬಾದ್‌ನಿಂದ ಮುಂಬೈವರೆಗೆ ವೆಂಕಟೇಶ್ ಬರಿಗಾಲಿನಲ್ಲಿ ನಡೆದುಕೊಂಡು ಬಂದಿದ್ದಾರೆ. ಅವರಿಗೆ ವಾಹನದ ವ್ಯವಸ್ಥೆ ಮಾಡಿದರೂ ಅವರು ಒಪ್ಪಲಿಲ್ಲ. ಅವರು ನಿಜಕ್ಕೂ ನನಗೆ ಸ್ಫೂರ್ತಿದಾಯಕ. ಆದರೆ, ದಯವಿಟ್ಟು ಯಾರೂ ಈ ರೀತಿ ತೊಂದರೆ ತೆಗೆದುಕೊಳ್ಳಬೇಡಿ. ಇಂತಹ ಕಾರ್ಯಗಳಿಗೆ ನಾನು ಪ್ರೋತ್ಸಾಹ ನೀಡುವುದಿಲ್ಲ” ಎಂದು ನಟ ಸೋನು ಸೂದ್ ಟ್ವೀಟ್ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next