Advertisement

ದಯವಿಟ್ಟು ಥಿಯೇಟರ್‌ ಒಳಗೆ ಪಟಾಕಿ ಹೊಡೆಯಬೇಡಿ : ಅಭಿಮಾನಿಗಳಲ್ಲಿ ಸಲ್ಮಾನ್‌ ಮನವಿ

07:53 PM Nov 28, 2021 | Team Udayavani |

ಮುಂಬೈ : ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ “ಅಂತಿಮ್‌- ದಿ ಫೈನಲ್‌ ಟ್ರಾತ್‌’ ಸಿನಿಮಾ ಬಿಡುಗಡೆಯಾಗಿದೆ. ಆ ಖುಷಿಯಲ್ಲಿರುವ ಅಭಿಮಾನಿಗಳು ಸಿನಿಮಾ ಮಂದಿರದೊಳಗೆಯೇ ಪಟಾಕಿ ಹೊಡೆದಿದ್ದಾರೆ. ಈ ವಿಚಾರವಾಗಿ ಸಲ್ಮಾನ್‌ ಬೇಸರಗೊಂಡಿದ್ದು, ಅಭಿಮಾನಿಗಳಲ್ಲೊಂದು ಮನವಿ ಮಾಡಿದ್ದಾರೆ.

Advertisement

“ನನ್ನ ಸಿನಿಮಾವನ್ನು ಎಲ್ಲ ರೀತಿಯಲ್ಲಿ ಆನಂದಿಸಿ. ಆದರೆ ದಯವಿಟ್ಟು ಥಿಯೇಟರ್‌ ಗಳ ಒಳಗೆ ಪಟಾಕಿ ಹೊಡೆಯಬೇಡಿ. ಪಟಾಕಿಯಿಂದ ಬೆಂಕಿ ಅವಘಡ ಸಂಭವಿಸುವ ಸಾಧ್ಯತೆಯಿರುತ್ತದೆ. ಪಟಾಕಿ ಹೊಡೆಯುವ ಹಾಗೂ ಫಿಲಂ ಪೋಸ್ಟರ್‌ ಗಳಿಗೆ ಹಾಲಿನ ಅಭಿಷೇಕ ಮಾಡುವ ಬದಲು, ಬಡ ಮಕ್ಕಳಿಗೆ ಹಾಲು ಹಂಚಿ’ ಎಂದು ಅವರು ಮನವಿ ಮಾಡಿದ್ದಾರೆ.

ಹಾಗೆಯೇ ಸಿನಿಮಾ ಮಂದಿರಗಳ ಮಾಲೀಕರ ಬಳಿ, ಪಟಾಕಿ ಹೊಡೆಯಲು ಅವಕಾಶ ಕೊಡದಿರಿ ಎಂದೂ ಅವರು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ : ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ಉಸಿರುಗಟ್ಟಿ ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

Advertisement

Udayavani is now on Telegram. Click here to join our channel and stay updated with the latest news.

Next