Advertisement

Boliyar Stabbing Case: ಕೃತ್ಯಕ್ಕೆ ಪ್ರಚೋದನಾಕಾರಿ ಘೋಷಣೆ ಕಾರಣ: ಪೊಲೀಸ್ ಆಯುಕ್ತರು

05:03 PM Jun 11, 2024 | Team Udayavani |

ಮಂಗಳೂರು: ಕಳೆದ ರವಿವಾರ ರಾತ್ರಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರಿನಲ್ಲಿ ವಿಜಯೋತ್ಸವ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿದ ಘಟನೆಗೆ ಪ್ರಚೋದನಾಕಾರಿ ಘೋಷಣೆ ಮುಖ್ಯ ಕಾರಣವಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.

Advertisement

ಮೆರವಣಿಗೆ ಮುಗಿಸಿ ಭಾರತ್ ಮಾತಾ ಕಿ ಜೈ ಘೋಷಣೆ ಮಾಡಿರುವುದು ಹೌದು. ಆದರೆ ಇದರಿಂದ ಪ್ರಚೋದನೆಗೊಂಡಿಲ್ಲ. ಬದಲಾಗಿ ಇದಕ್ಕೂ ಮೊದಲು ಮೆರವಣಿಗೆಯಲ್ಲಿ ಆಟೋ ನಿಲ್ದಾಣದ ಸಮೀಪ ಪಾಕಿಸ್ತಾನಕ್ಕೆ ಸಂಬಂಧ ಕಲ್ಪಿಸಿ ಆಕ್ಷೇಪಾರ್ಹ ಘೋಷಣೆಯನ್ನು ಕೂಗಿದ್ದಾರೆ. ಇದು ಸೋಶಿಯಲ್ ಮೀಡಿಯಾದ ಮೂಲಕ ಸಮುದಾಯದವರಿಗೆ ಗೊತ್ತಾಗಿದೆ. ಇದರಿಂದ ಕೆಲವರು ಪ್ರಚೋದನೆಗೊಂಡು ಕೃತ್ಯ ನಡೆಸಿದ್ದಾರೆ ಎಂದು ಪೊಲೀಸ್ ಆಯುಕ್ತರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಚೂರಿ ಇರಿದ ಪ್ರಕರಣದಲ್ಲಿಒಟ್ಟು 20 ಮಂದಿ ಆರೋಪಿಗಳ ಪೈಕಿ 6 ಮಂದಿಯನ್ನು ಬಂಧಿಸಲಾಗಿದೆ. ಚೂರಿ ಇರಿದವರಲ್ಲಿ ಓರ್ವ ರೌಡಿಶೀಟರ್ ಕೂಡ ಸೇರಿದ್ದಾನೆ. ಪ್ರಚೋದನಾಕಾರಿ ಘೋಷಣೆ ಕೂಗಿದವರ ವಿರುದ್ದವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಶಾಂತಿ ಸುವ್ಯವಸ್ಥೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ನಾಳೆಯಿಂದ ಠಾಣೆಗಳಲ್ಲಿಯೂ ಶಾಂತಿ ಸಭೆ ನಡೆಸಲಾಗುವುದು ಎಂದವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next