ಬೆಳ್ಮಣ್: ಅಂತರ್ಜಲ ಕೊರತೆ ನಮ್ಮ ಅತೀ ದೊಡ್ಡ ದುರಂತವಾಗಬಲ್ಲದು. ಗದ್ದೆಗಳನ್ನು ಹಡೀಲು ಬಿಟ್ಟಿರುವುದು, ಮಳೆ ನೀರು ಇಂಗಿಸುವಿಕೆ ನಡೆಯದಿರುವುದು ಮತ್ತು ಕೃಷಿ ಹೊಂಡಗಳು ನಿರ್ಮಾಣವಾಗದೆ ಇರುವುದರಿಂದ ಅಂತರ್ಜಲ ಕೊರತೆ ಉಂಟಾಗುತ್ತಿದೆ. ಈ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕು ಎಂದು ಜಿ.ಪಂ. ಸದಸ್ಯೆ ರೇಷ್ಮಾ ಉದಯ್ ಶೆಟ್ಟಿ ಹೇಳಿದರು.
ಮಂಗಳವಾರ ಬೋಳ ಗ್ರಾ.ಪಂ. ಸಭಾಂಗಣದಲ್ಲಿ ಕಾರ್ಕಳದ ಭಾರತೀಯ ಕಿಸಾನ್ ಸಂಘ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಬೋಳ ಗ್ರಾ.ಪಂ. ಸಹಭಾಗಿತ್ವದಲ್ಲಿ ನಡೆದ “ಅಂತರ್ಜಲ ಹೆಚ್ಚಳ ನಮ್ಮ ಛಲ’ ಅಭಿಯಾನ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿ.ಪಂ. ವತಿಯಿಂದ ಜೋಸೆಫ್ ರೆಬೆಲ್ಲೋ ಅಂತರ್ಜಲ ವೃದ್ಧಿಗೆ ಪೂರಕ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಬೋಳ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಕಿಸಾನ್ ಸಂಘದ ಕಾರ್ಕಳ ತಾಲೂಕು ಅಧ್ಯಕ್ಷ ಉಮಾನಾಥ್ ರಾನಡೆ, ಎ.ಪಿ.ಎಂ.ಸಿ. ಸದಸ್ಯೆ ವಸಂತಿ ಮೂಲ್ಯ, ಭಾರತೀಯ ಕಿಸಾನ್ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ, ತಾ.ಪಂ. ಮಾಜಿ ಅಧ್ಯಕ್ಷ ಜಯರಾಮ್ ಸಾಲ್ಯಾನ್, ಬೋಳ ಗ್ರಾಮಕರಣಿಕ ಸುದರ್ಶನ್, ಗ್ರಾ.ಪಂ. ಸದಸ್ಯ ಸುರೇಶ್ ಶೆಟ್ಟಿ, ಮೋಹನ್ ಶೆಟ್ಟಿ ಉಪಸ್ಥಿತರಿದ್ದರು. ಪಿಡಿಒ ಹರೀಶ್ ಕೆ.ಬಿ. ನಿರೂಪಿಸಿ, ವಂದಿಸಿದರು.
ಜೂ. 21ರ ವರೆಗೆ ಮಾಹಿತಿ, ಅರ್ಜಿ ಸ್ವೀಕಾರ
ಬೆಳ್ಮಣ್ ಜಿ.ಪಂ. ವ್ಯಾಪ್ತಿಯ ಏಳು ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಹಡೀಲು ಬಿದ್ದ ಗದ್ದೆಗಳಲ್ಲಿ ಮುಂಗಾರು ಭತ್ತದ ಬೆಳೆ, ಕೃಷಿ ಹೊಂಡ, ಇಂಗು ಗುಂಡಿ, ಮಳೆ ಕೊಯ್ಲು, ಫಸಲ್ ಭಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಕೃಷಿ ಸಮ್ಮಾನ ಯೋಜನೆಗಳ ಮಾಹಿತಿ ಹಾಗೂ ಅರ್ಜಿ ಸ್ವೀಕಾರ ವಿವಿಧ ಕಡೆಗಳಲ್ಲಿ ಜೂ. 21ರ ವರೆಗೆ ನಡೆಯಲಿದೆ.
-ರೇಷ್ಮಾ ಉದಯ ಶೆಟ್ಟಿ,,
ಜಿ.ಪಂ. ಸದಸ್ಯೆ