Advertisement

ಸಂತ್ರಸ್ತರಿಗೆ ನೆರವಾಗುತ್ತಿದ್ದ ಐವರನ್ನು ಹತ್ಯೆಗೈದ ಉಗ್ರರು

03:07 AM Jul 24, 2020 | Hari Prasad |

ಅಬುಜಾ: ಕೋವಿಡ್ 19 ಸಂತ್ರಸ್ತರಿಗೆ ಆಹಾರ, ನೀರು, ಔಷಧ ಪೂರೈಸಲು ಹೋಗಿದ್ದ ಐವರನ್ನು ನೈಜೀರಿಯಾದ ಬೊಕೊ ಹರಾಂ ಉಗ್ರರು ನಿರ್ದಯವಾಗಿ ಗುಂಡಿಕ್ಕಿ ಕೊಂದಿದ್ದಾರೆ.

Advertisement

ತುರ್ತು ಪರಿಸ್ಥಿತಿ ನಿರ್ವಹಣಾ ಸಂಸ್ಥೆಯ ಐವರು ಸಿಬಂದಿ ಜೂನ್‌ನಲ್ಲಿ ಈಶಾನ್ಯ ನೈಜೀರಿಯಾದ ಕುಗ್ರಾಮಕ್ಕೆ ಅಗತ್ಯ ಸಾಮಗ್ರಿ ಹೊತ್ತು ಸಾಗಿದ್ದರು.

ಈ ವೇಳೆ ಅವರನ್ನು ಜಿಹಾದಿ ಉಗ್ರಪಡೆ ಬೊಕೊ ಹರಾಂ ಅಪಹರಿಸಿ, ಒಂದು ತಿಂಗಳು ಬಂಧನದಲ್ಲಿಟ್ಟಿತ್ತು.

ಭಯಾನಕ ವಿಡಿಯೊ: ಉಗ್ರರು ಬುಧವಾರ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟ ವಿಡಿಯೊ, ಐವರು ಸಿಬಂದಿಯ ಬದುಕಿನ ಕೊನೇ ಕ್ಷಣಗಳನ್ನು ತೆರೆದಿಟ್ಟಿದೆ.

35 ಸೆಕೆಂಡಿನ ವಿಡಿಯೊದಲ್ಲಿ ಐವ ರನ್ನು ಸಾಲಾಗಿ ಮಂಡಿಯೂರಿಸಿ ಉಗ್ರರು ಗುಂಡಿಕ್ಕಿದ ದೃಶ್ಯ ನೈಜೀರಿಯಾವನ್ನೇ ಬೆಚ್ಚಿಬೀಳಿಸಿದೆ.

Advertisement

ಉಗ್ರ ಸಂದೇಶ: ಗುಂಡಿಕ್ಕುವ ವೇಳೆ ಉಗ್ರ ಕಮಾಂಡರ್‌ ‘ನಿಮ್ಮ ಹತ್ಯೆ ಮೂಲಕ ನಾಸ್ತಿಕರಿಗೆ ನಾವು ಸ್ಪಷ್ಟ ಸಂದೇಶ ರವಾನಿಸುತ್ತಿದ್ದೇವೆ. ನಿಮ್ಮ ಉದ್ಯೋಗದಾತ ನಾಸ್ತಿಕರು ತಮ್ಮ ಗುರಿಗಳನ್ನು ಸಾಧಿಸಲು ನಿಮ್ಮನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

ಈ ತಪ್ಪಿಗಾಗಿ ನೀವು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ನಡೆಯಬೇಕು, ಇಲ್ಲದಿದ್ದರೆ ನಿಮ್ಮ ಮಾರ್ಗಗಳಲ್ಲಿ ಸಾಗುವ ಎಲ್ಲರನ್ನೂ ಅಪಹರಿಸಿ ಗುಂಡಿಕ್ಕುತ್ತೇವೆ’ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next