Advertisement
ಅವರು ನಗರದ ಅನ್ನದಾನೇಶ್ವರ ಕಲ್ಯಾಣಮಂಟಪದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Related Articles
Advertisement
ಹೈಕಮಾಂಡ್‍ಗೆ ದೂರು:
ಸಾಕ್ಷಿ ಸಮೇತ ಬೋಗಸ್ ಸದಸ್ಯತ್ವ ಅಭಿಯಾನ ನಡೆಸಿ, ನಾಯಕರ ದಿಕ್ಕು ತಪ್ಪಿಸುವ ಈ ಬೆಳವಣಿಗೆ ಕುರಿತು ಹೈಕಮಾಂಡ್‍ಗೆ ದೂರು ಸಲ್ಲಿಸಲಾಗುವುದು ಎಂದು ಪಂಪನಗೌಡ ಬಾದರ್ಲಿ ಹೇಳಿದರು. ಈಗಾಗಲೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ವೀಕ್ಷಕರ ಗಮನಕ್ಕೆ ತರಲಾಗಿದೆ. ಯಾವುದೇ ಕೊಠಡಿಯಲ್ಲಿ ಕುಳಿತು ಬೋಗಸ್ ಮೊಬೈಲ್ ನಂಬರ್ ಕೊಟ್ಟು, ಮುಂದಿನ ದಿನಗಳಲ್ಲಿ ಪಕ್ಷವನ್ನು ಹಳ್ಳ ಹಿಡಿಸುವ ಇಂತಹ ಪ್ರಯತ್ನಗಳನ್ನು ನಾವು ಒಪ್ಪುವುದಿಲ್ಲ ಎಂದರು.
ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಉಪಾಧ್ಯಕ್ಷ ಮುರ್ತುಜಾ ಹುಸೇನ್, ನಗರಸಭೆ ಮಾಜಿ ಅಧ್ಯಕ್ಷ ಜಾಫರ್ ಜಾಹಗೀರದಾರ್, ಜಿ.ಪಂ.ಮಾಜಿ ಸದಸ್ಯರಾದ ಬಾಬುಗೌಡ ಬಾದರ್ಲಿ, ಬಸವರಾಜ್ ಹಿರೇಗೌಡರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿಮಲಿಕ್, ಪ್ರಧಾನ ಕಾರ್ಯದರ್ಶಿ ಅನಿಲ್‍ಕುಮಾರ್.ವೈ, ಮುಖಂಡರಾದ ಪ್ರಭುರಾಜ್ ಕರ್ಪೂರಮಠ, ಛತ್ರಪ್ಪ ಕುರುಕುಂದಿ, ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ ಸೇರಿದಂತೆ ಅನೇಕರು ಇದ್ದರು.
ಇನ್ನೂರರಿಂದ ಮುನ್ನೂರು ಜನ ಯುವಕರನ್ನು ಬೋಗಸ್ ಸದಸ್ಯತ್ವ ಅಭಿಯಾನ ನಡೆಸಲು ಸಿಂಧನೂರಿಗೆ ಕರೆಸಲಾಗಿದೆ. ಸಿಂಧನೂರಿನಲ್ಲಿ ಒಬ್ಬರೇ ಕಾಂಗ್ರೆಸ್ ಲೀಡರ್ , ಅದು ಹಂಪನಗೌಡ ಬಾದರ್ಲಿ. ಅವರಿಗೆ ಚ್ಯುತಿ ತರಲು ವಾಮಮಾರ್ಗವನ್ನು ನಾವು ಸಹಿಸಲ್ಲ.-ಜಾಫರ್ ಜಾಹಗೀರದಾರ್, ನಗರಸಭೆ ಮಾಜಿ ಅಧ್ಯಕ್ಷ, ಸಿಂಧನೂರು.