Advertisement
ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ 2 ಕೋಟಿ ರೂ. ಅನು ದಾನದಲ್ಲಿ ಬೋಗಾಯನ ಕೆರೆ ಅಭಿವೃದ್ಧಿ ನಡೆಯುತ್ತಿದ್ದು, ಇತ್ತೀಚೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಸಚಿವ ಎಸ್.ಅಂಗಾರ ಉಪಸ್ಥಿತಿಯಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದರು. ಕೆರೆ ಅಭಿವೃದ್ಧಿಗೊಂಡಲ್ಲಿ ಅಂತರ್ಜಲ ವೃದ್ಧಿಗೂ ಸಹಕಾರಿಯಾಗಲಿದೆ. ಕುಡಿಯುವ ನೀರಿಗೂ, ಕೃಷಿಗೂ ಬಳಸ ಬಹುದಾಗಿದೆ. ಒಟ್ಟಿನಲ್ಲಿ ಕೆರೆ ಅಭಿವೃದ್ಧಿ ಗ್ರಾಮದ ಜನತೆಗೆ ವಿವಿಧ ಬಗೆಯಲ್ಲಿ ಉಪಯೋಗವಾಗಲಿದೆ.
ಬೋಗಾಯನ ಕೆರೆಗೆ ಕಾಯಕಲ್ಪ ನೀಡದ ಕಾರಣ ಹೂಳು ತುಂಬಿ, ನೀರು ಕಲುಷಿತ ಹಂತದಲ್ಲಿತ್ತು. ಜತೆಗೆ ಬೇಸಗೆಯಲ್ಲಿ ಕೆರೆಯಲ್ಲಿ ನೀರು ಬತ್ತಿ ಹೋಗುತ್ತಿತ್ತು. ನಳಿನ್ ಕುಮಾರ್ ಕಟೀಲ್ ಬಳ್ಪವನ್ನು ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡಿಕೊಂಡ ಸಂದರ್ಭದಲ್ಲಿ ಕೆರೆಯ ಅಭಿವೃದ್ಧಿ ಬೇಡಿಕೆ ಈಡೇರುವ ಮುನ್ನಲೆಗೆ ಬಂದಿತ್ತು. ಸಂಸದರು ಕೂಡ ಕೆರೆ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿದ್ದರು. ಇದನ್ನೂ ಓದಿ :ರಷ್ಯಾದ 5 ವಿಮಾನಗಳು, ಹೆಲಿಕ್ಯಾಪ್ಟರ್ ಹೊಡೆದುರುಳಿಸಿದ ಉಕ್ರೇನ್
Related Articles
ಈಗಾಗಲೇ ಜೆಸಿಬಿ ಯಂತ್ರದ ಸಹಾಯದಿಂದ ಕೆರೆಯ ಮೇಲಿನ ಹಾಗೂ ಕೆರೆಯ ಬದಿಯ ಕಸ, ಕಡ್ಡಿ, ಹೂಳು, ಮಣ್ಣು ತೆರವು ಕಾರ್ಯ ಭರದಿಂದ ನಡೆಯುತ್ತಿದೆ. ಮೊದಲಿಗೆ ಕೆರೆಗೆ ಹೊರ ಭಾಗದಿಂದ ನೀರು ಹರಿದು ಬಾರದಂತೆ ತಡೆಯೊಡ್ಡಲು, ಕಲುಷಿತ ನೀರು, ಕಸ-ಕಡ್ಡಿ ಬಾರದಂತೆ ತಡೆಯಲು ತಡೆಗೋಡೆ ನಿರ್ಮಾಣ ಕಾರ್ಯ ನಡೆಯಲಿದೆ. ಬಳಿಕ ಕೆರೆಯ ಹೂಳು ತೆರವುಗೊಳಿಸಿ ಸ್ವತ್ಛಗೊಳಿಸುವ ಕಾಮಗಾರಿ ನಡೆಸಲಾಗುತ್ತದೆ. ನಾಗರಾಜ್ ನಾಯಕ್ ಕಾಮಗಾರಿ ನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಐತಿಹಾಸಿಕ ಕೆರೆಕದಂಬರ ತುಂಡರಸ ಬೋಗರಾಯ ವರ್ಮ ಕಡಬ ಪ್ರದೇಶವನ್ನು ಆಳುತ್ತಿದ್ದ ಕಾಲದಲ್ಲಿ ಕಡಬ, ಬಳ್ಪದಲ್ಲಿ 2 ಕೆರೆ ನಿರ್ಮಿಸ ಲಾಗಿತ್ತು ಎಂದು ಇತಿಹಾಸ ಹೇಳುತ್ತದೆ. ಬಳ್ಪದ ಕೆರೆಯನ್ನು ಬೋಗರಾಯವರ್ಮ ನಿರ್ಮಿಸಿದ ಕಾರಣ ಬೋಗಾಯನ ಕೆರೆ ಎಂದು ಪ್ರಸಿದ್ಧಿ ಪಡೆದಿದೆ ಎನ್ನುತ್ತಾರೆ ಹಿರಿಯರು. ಪ್ರವಾಸಿ ತಾಣವಾಗಿಸುವ ಯೋಜನೆ
ಪ್ರಶಾಂತ ತಾಣದಲ್ಲಿರುವ ಐತಿಹಾಸಿಕ ಬೋಗಾಯನ ಕೆರೆ ವಿಶಾಲ ಪ್ರದೇಶದಲ್ಲಿದ್ದು, ಪ್ರವಾಸಿಗರನ್ನು ಆಕರ್ಷಿಸಲಿದೆ. ಇದೇ ಹಿನ್ನೆಲೆಯಲ್ಲಿ ಇಲ್ಲಿ ಪ್ರವಾಸಿ ತಾಣವಾಗಿಯೂ ಅಭಿವೃದ್ಧಿ ಮಾಡಲು ಯೋಜನೆಗೆ ಚಿಂತಿಸಲಾಗಿದೆ. ಕೆರೆಯ ಬದಿಯಲ್ಲಿ ಉದ್ಯಾನವನ, ಪ್ರವಾಸಿಗರಿಗೆ ಕುಳಿತುಕೊಳ್ಳಲು, ಕೆರೆ ವೀಕ್ಷಣೆಗೆ, ಬೋಟಿಂಗ್‌ಗೆ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸುವ ಬಗ್ಗೆ ಚಿಂತನೆ ನಡೆದಿದೆ. ಮೊದಲ ಹಂತದಲ್ಲಿ ಇಲ್ಲವೇ ಎರಡನೇ ಹಂತದಲ್ಲಿ ಈ ಕಾರ್ಯ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.