Advertisement

ಬಹುಕೋಟಿ ಬೋಪೋರ್ಸ್ ಕೇಸ್ ವಿಚಾರಣೆ ಅ.30ರಿಂದ ಆರಂಭ; ಸುಪ್ರೀಂ

02:13 PM Sep 01, 2017 | Sharanya Alva |

ನವದೆಹಲಿ: ಬೋಫೋರ್ಸ್‌ ಫಿರಂಗಿ ಹಗರಣಕ್ಕೆ ಸಂಬಂಧಿಸಿದ ಕೇಸಿನ ವಿಚಾರಣೆಯನ್ನು ಅಕ್ಟೋಬರ್ ಕೊನೆಯ ವಾರದಿಂದ ನಡೆಸುವುದಾಗಿ ಸುಪ್ರೀಂಕೋರ್ಟ್‌ ಶುಕ್ರವಾರ  ತಿಳಿಸಿದೆ.

Advertisement

1986ರಲ್ಲಿ ನಡೆದಿದ್ದ 1,437 ಕೋಟಿ ರೂ. ಮೌಲ್ಯದ  ಖರೀದಿಯಲ್ಲಿ 64 ಕೋಟಿ ರೂ. ಲಂಚ ನೀಡಲಾಗಿತ್ತು ಎನ್ನುವುದು ಪ್ರಧಾನ  ಆರೋಪ. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ  ಮತ್ತು ಜಸ್ಟೀಸ್ ಎಎಂ ಖಾನ್ವಾಲಿಕರ್, ನ್ಯಾ.ಡಿವೈ ಚಂದ್ರಚೂಡ್  ನೇತೃತ್ವದ ಪೀಠ ಅಕ್ಟೋಬರ್ 30ರಿಂದ ವಿಚಾರಣೆ ನಡೆಸುವುದಾಗಿ ಸ್ಪಷ್ಟಪಡಿಸಿದೆ.

ಬೋಪೋರ್ಸ್ ಹಗರಣದ ವಿಚಾರಣೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ, ವಕೀಲ ಅಜಯ್ ಅಗರ್ವಾಲ್ ಸುಪ್ರೀಂಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next