Advertisement

Bodybuilding: ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ

12:18 AM Jan 09, 2024 | Team Udayavani |

ಬ್ರಹ್ಮಾವರ: ಇಲ್ಲಿನ ಎಸ್‌.ಎಂ.ಎಸ್‌. ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ ಆಶ್ರಯದಲ್ಲಿ ಅಂತರ್‌ ಕಾಲೇಜು ದೇಹದಾರ್ಢ್ಯ ಸ್ಪರ್ಧೆ ಕಾಲೇಜಿನ ಬಿ.ವಿ. ಶೆಟ್ಟಿ ಸಭಾಂಗಣದಲ್ಲಿ ಏರ್ಪಟ್ಟಿತು.

Advertisement

ಮೂಡುಬಿದಿರೆಯ ಆಳ್ವಾಸ್‌ ಕಾಲೇಜು ತಂಡ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಮಂಗಳೂರು ಎಸ್‌ಡಿಎಂ ಬ್ಯುಸಿನೆಸ್‌ ಮ್ಯಾನೇಜ್ಮೆಂಟ್ ದ್ವಿತೀಯ, ಮಂಗಳೂರು ಸೈಂಟ್‌ ಅಲೋಶಿಯಸ್‌ ತೃತೀಯ ಸ್ಥಾನಿಯಾಯಿತು. ಆತಿಥೇಯ ಎಸ್‌ಎಂಎಸ್‌ ಕಾಲೇಜು 4ನೇ ಸ್ಥಾನವನ್ನು ಪಡೆದು ಕೊಂಡಿತು. ಮೂಡು ಬಿದಿರೆಯ ಆಳ್ವಾಸ್‌ ಕಾಲೇಜಿನ ಕಿಶನ್‌ ಶೆಟ್ಟಿ ಅವರು ಮಿಸ್ಟರ್‌ ಮಂಗಳೂರು ಯೂನಿವರ್ಸಿಟಿ ಪ್ರಶಸ್ತಿಗೆ ಭಾಜನರಾದರು.

ಪ್ರಾಂಶುಪಾಲ ಡಾ| ಮಂಜುನಾಥ್‌ ಉಡುಪ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕೆಎಫ್‌ಎ ಸರ್ಟಿಫೈಡ್‌ ಫಿಟ್‌ನೆಸ್‌ ತರಬೇತುದಾರ ನಿತ್ಯಾನಂದ ಕೋಟ್ಯಾನ್‌, ತಾಲೂಕು ಆ್ಯತ್ಲೆಟಿಕ್‌ ಅಸೋಸಿಯೇಶನ್‌ ಅಧ್ಯಕ್ಷ ಭರತ್‌ ಕುಮಾರ್‌ ಶೆಟ್ಟಿ, ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ| ಹರಿದಾಸ್‌ ಕೂಳೂರು, ಒ.ಎಸ್‌.ಸಿ. ಎಜುಕೇಶನಲ್‌ ಸೊಸೈಟಿಯ ಕಾಲೇಜು ವಿಭಾಗದ ಕಾರ್ಯದರ್ಶಿ ಆಲ್ವರಿಸ್‌ ಡಿ’ಸಿಲ್ವ, ಸದಸ್ಯ ಆಲ್ಬರ್ಟ್‌ ರೋನಿ ಡಿ’ಸಿಲ್ವ, ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ರೆಫ್ರಿ ಪ್ರೇಮನಾಥ್‌ ಉಳ್ಳಾಲ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಲ್ವಿನ್‌ ಅಂದ್ರಾದೆ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ವೆಂಕಟೇಶ್‌ ಭಟ್‌ ಉಪಸ್ಥಿತರಿದ್ದರು.

ಉಪನ್ಯಾಸಕರಾದ ಭರತ್‌ ರಾಜ್‌ ನೇಜಾರು, ವಿN°àಶ್‌ ಪಡಿಯಾರ್‌ ಸ್ವಾಗತಿಸಿ, ಪ್ರಶಾಂತ್‌ ಶೆಟ್ಟಿ ನಿರೂಪಿಸಿದರು. ಅರುಣ್‌ ರಾಜ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next