Advertisement
ಅವರು ಸಮೀಪದ ಸುಕ್ಷೇತ್ರ ಆರೂಢರ ಐಕ್ಯಸ್ಥಳ ಆರೂಢನಂದಿಹಾಳದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಮುತ್ತಗಿಯ ಲಿಂ| ಮಲಿಕಾಜಪ್ಪ ಕೂಡಗಿ. ಬ್ಯಾಕೋಡದ ಲಿಂ| ಸೋಮೇಶ್ವರಿ ಚೌಧರಿ ದಂಪತಿ ಹಾಗೂ ಗುರು ಆರೂಢರ ಅನೂಯಾಯಿ ಹುಸನಮ್ಮ ಮಾತೆಯ ಪುಣ್ಯಸ್ಮರಣೋತ್ಸವದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಪೂಜೆ ನಿಷ್ಠೆ ಕುರಿತಾಗಿ ಅವರು ಉಪನ್ಯಾಸ ನೀಡಿದರು.
ಬೆಳಕನ್ನು ನಾನೇ ನೋಡಬೇಕು. ಲೌಕಿಕ ವಿಷಯದಿಂದ ವ್ಯಾಮೋಹದಿಂದ ಬಿಡುಗಡೆಯಾಗಬೇಕಾಗಿದೆ. ಶಿಶುನಾಳ
ಶರೀಪರಂತೆ ಗುರು ಆರೂಢರು ಸಾಧನೆಯಿಂದ ಭಕ್ತರ ಮನ ಗೆದ್ದಿದ್ದಾರೆ.
Related Articles
ಅವರಾಗಿತ್ತು. ಭಗವಂತನ ಚಿಂತೆ ನಾವು ಮಾಡಿದರೆ ನಮ್ಮ ಚಿಂತೆ ಅವರು ಮಾಡುತ್ತಾನೆ. ಶರಣರು ಸಮಸ್ತ ಮಾನವ ಕಲ್ಯಾಣ ಅವರ ಒಲವಾಗಿತ್ತು. ಮೊದಲು ಆಚಾರ ವಿಚಾರಗಳು ಬದಲಾಗಬೇಕಾಗಿದೆ. ಒಳ್ಳೆಯದನ್ನು ಬಯಸಿದರೆ ಶರಣರಾಗುತ್ತಾರೆ ಎಂದರು.
Advertisement
ಶರಣೆ ಹುಸನಮ್ಮ ತಾಯಿಯ ಜೀವನ ಸಂದೇಶ ಕುರಿತಾಗಿ ಎಸ್.ವಿ. ಕನ್ನೂರ ಮಾತನಾಡಿ, ಶರಣರಿಗೆ ಯಾವುದೇ ಜಾತಿ ಇಲ್ಲ. ಜಾತಿಯಿಂದ ಇಸ್ಲಾಂ ಧರ್ಮಕ್ಕೆ ಸೇರಿದ ಚಬನೂರು ಗ್ರಾಮದ ಹುಸನಮ್ಮ ಸಾಕಷ್ಟು ಆಸ್ತಿ ಇದ್ದರೂ ಅದನ್ನೆಲ್ಲಾ ತೊರೆದು ಗಂಡನೊಂದಿಗೆ ಇಪ್ಪತ್ತಕ್ಕೂ ಅಧಿಕ ವರ್ಷಗಳ ಕಾಲ ಆರೂಢರೊಂದಿಗೆ ಧರ್ಮ ಕಾರ್ಯಕೆ ನೆರವಾಗಿದ್ದು ಭಾವೈಕ್ಯತೆಗೆ ಜೀವಂತ ನಿದರ್ಶನವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಕಡಕೋಳದ ರಾಜಗುರು ಮಹಾಲಿಂಗ ಸ್ವಾಮೀಜಿ ಮಾತನಾಡಿ, ಅಂಗವನ್ನು ಲಿಂಗವನ್ನಾಗಿ ಕಂಡವರೇ ನಿಜವಾದ ಆರೂಢರು. ವೈಭವಪೂರ್ಣ ಜೀವನ ಇಂದು ನಮ್ಮದಾಗಿದ್ದರೆ, ಭಾವಪೂರ್ಣ ಜೀವನ ಆರೂಢರದ್ದಾಗಿತ್ತು ಎಂದರು.
ಪ್ರವಚನಕಾರ ಗುಂಡಣ್ಣ ಶರಣರು ಮಾತನಾಡಿದರು. ಕಮೀಟಿ ಕಾರ್ಯದರ್ಶಿ ಬಮ್ಮಯ್ಯ ಹಿರೇಮಠ ಕಾರ್ಯಕ್ರಮಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಶಸಾಪ ತಾಲೂಕಾಧ್ಯಕ್ಷ ವಿ.ಬಿ. ಮರ್ತೂರ ವಹಿಸಿದ್ದರು. ತಾಲೂಕಾಧ್ಯಕ್ಷ ಆರ್.ಜಿ. ಅಳ್ಳಗಿ, ಚನ್ನಬಸವೇಶ್ವರ ಪ್ರತಿಷ್ಠಾನದ ಸಂಚಾಲಕ ವಿವೇಕಾನಂದ ಕಲ್ಯಾಣಶೆಟ್ಟಿ, ಕದಳಿ ವೇದಿಕೆ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ, ವಿಶ್ರಾಂತ ಶಿಕ್ಷಕ ಎಫ್.ಡಿ. ಮೇಟಿ, ಎಸ್.ಎಸ್. ಬಶೆಟ್ಟಿ, ಕವಿತಾ ಮರ್ತುರ, ಆರ್.ಟಿ. ಕನ್ನೂರ, ಚಂದ್ರಕಾಂತ ಹೂಗಾರ ಸೇರಿದಂತೆ ಅನೇಕರಿದ್ದರು. ಎಸ್.ಐ. ಮನಗೂಳಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಹಿರೇಮಠ ಪ್ರಾರ್ಥಿಸಿದರು.